AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಹಾದ್ ಫಾಸಿಲ್ ಜನಪ್ರಿಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಾಜಮೌಳಿ

‘ಡೋಂಟ್ ಟ್ರಬಲ್ ದಿ ಟ್ರಬಲ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡಿದ್ದ ನಿರ್ದೇಶಕ ರಾಜಮೌಳಿ, ನಟ ಫಹಾದ್ ಫಾಸಿಲ್ ಅವರ ಅಭಿನಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ತಾವು ಫಹಾದ್ ಅವರ ದೊಡ್ಡ ಅಭಿಮಾನಿ ಎಂದಿರುವ ಅವರು, ತೆಲುಗು ನಾಡಿನಲ್ಲಿ ಅವರ ಜನಪ್ರಿಯತೆ ಕೊರೊನಾಗಿಂತಲೂ ತೀವ್ರವಾಗಿ ಹರಡಿದೆ ಎಂದು ತಮಾಷೆಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫಹಾದ್ ಫಾಸಿಲ್ ಜನಪ್ರಿಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ರಾಜಮೌಳಿ
ರಾಜಮೌಳಿ-ಫಹಾದ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 30, 2026 | 11:17 AM

Share

ಮುಖ್ಯಾಂಶಗಳು

  • ಫಹಾದ್ ಫಾಸಿಲ್ ಬಿಗ್ ಫ್ಯಾನ್ ಎಂದ ರಾಜಮೌಳಿ
  • ಒಟಿಟಿ ಸಿನಿಮಾಗಳ ಬಗ್ಗೆ ಜಕ್ಕಣ್ಣ ಹೇಳಿದ್ದೇನು?
  • 55 ವರ್ಷದ ಮಹಿಳೆಯಿಂದ ಬಿಚ್ಚಿಬಿತ್ತು ‘ಫಫಾ’ ರಹಸ್ಯ

ಫಹಾದ್ ಫಾಸಿಲ್ ನಟನೆಯ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಟಾಲಿವುಡ್‌ನ ನಿರ್ದೇಶಕ ಎಸ್. ಎಸ್. ರಾಜಮೌಳಿ ಭಾಗವಹಿಸಿ, ಮಲಯಾಳಂ ನಟ ಫಹಾದ್ ಫಾಸಿಲ್ ಅವರ ಅಭಿನಯ ಮತ್ತು ಜನಪ್ರಿಯತೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಮೌಳಿ, ತಾವು ಫಹಾದ್ ಅವರ ನಟನೆಗೆ ದೊಡ್ಡ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ರಾಜಮೌಳಿ ಅವರು ಒಟಿಟಿಯಲ್ಲಿ ಫಹಾದ್ ಫಾಸಿಲ್ ಅಭಿನಯದ ಹಲವು ಸಿನಿಮಾಗಳನ್ನು ವೀಕ್ಷಿಸಿದ್ದಾಗಿ ತಿಳಿಸಿದರು. ಪ್ರಾರಂಭದಲ್ಲಿ ಈ ಸಿನಿಮಾಗಳು ಕೇವಲ ‘ಕ್ಲಾಸ್’ ಪ್ರೇಕ್ಷಕರಿಗೆ ಅಥವಾ ನಿರ್ದಿಷ್ಟ ವರ್ಗದ ಜನರಿಗೆ ಮಾತ್ರ ಸೀಮಿತವಾಗಿರಬಹುದು ಎಂದು ತಾವು ಭಾವಿಸಿದ್ದಾಗಿ ರಾಜಮೌಳಿ ಒಪ್ಪಿಕೊಂಡರು.

ಆದರೆ ಸುಮಾರು 6-7 ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ನೆನಪಿಸಿಕೊಂಡ ಅವರು, ತಮ್ಮ ಹೆಂಡತಿಯ 55 ವರ್ಷದ ಕಸಿನ್ ಒಬ್ಬರು ತಮ್ಮ ಬಳಿ ‘ನೀವು ಫಫಾ ಸಿನಿಮಾಗಳನ್ನು ನೋಡಿದ್ದೀರಾ?’ ಎಂದು ಪ್ರಶ್ನಿಸಿದ್ದರು ಎಂದರು. ಆ ಸಮಯದಲ್ಲಿ ‘ಫಫಾ’ ಎಂದರೆ ಯಾರೆಂದು ತಮಗೆ ತಿಳಿದಿರಲಿಲ್ಲ; ಆ ನಂತರವೇ ಅದು ಫಹಾದ್ ಫಾಸಿಲ್ ಎಂದು ತಿಳಿದು ಅವರ ಜನಪ್ರಿಯತೆಯ ವ್ಯಾಪ್ತಿ ಎಷ್ಟಿದೆ ಎಂಬುದು ಅರ್ಥವಾಯಿತು ಎಂದರು.

View this post on Instagram

A post shared by The Cue Studio (@cuestudio_)

ಫಹಾದ್ ಫಾಸಿಲ್ ಅವರ ನಟನೆ ಮತ್ತು ಸಿನಿಮಾಗಳ ಕ್ರೇಜ್ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ, ಅದು ಸಾಮಾನ್ಯ ಪ್ರೇಕ್ಷಕರ ಮನಸ್ಸನ್ನೂ ತಲುಪಿದೆ ಎಂದು ರಾಜಮೌಳಿ ಬಣ್ಣಿಸಿದರು. ಮುಂದುವರಿದು ತಮಾಷೆಯ ಧಾಟಿಯಲ್ಲಿ ಮಾತನಾಡಿದ ಅವರು, ಫಹಾದ್ ಅವರ ಜನಪ್ರಿಯತೆ ತೆಲುಗು ನಾಡಿನಾದ್ಯಂತ ಕೊರೊನಾಗಿಂತಲೂ ತೀವ್ರವಾಗಿ ಹರಡಿದೆ ಎಂದು ಹೊಗಳಿದರು.

ಇದನ್ನೂ ಓದಿ: 13 ಕೋಟಿ ರೂಪಾಯಿ ಕೊಟ್ಟು ಅಪರೂಪದ ಫೆರಾರಿ ಕಾರು ಖರೀದಿಸಿದ ಫಹಾದ್ ಫಾಸಿಲ್

ಅಂದಹಾಗೆ, ಫಹಾದ್ ಫಾಸಿಲ್ ನಾಯಕನಾಗಿ ನಟಿಸಿರುವ ‘ಡಾಂಟ್ ಟ್ರಬಲ್ ದಿ ಟ್ರಬಲ್’ ಚಿತ್ರವು ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More