AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಭಾರತದತ್ತ ಹೊರಟಿತೇಕೆ ತೆಲುಗು ಚಿತ್ರರಂಗ, ‘ಪುಷ್ಪ’ ಬಳಿಕ ಈಗ ‘ಪೆದ್ದಿ’

Ram Charan Movie: ತೆಲುಗು ಸಿನಿಮಾಗಳು ಭಾರಿ ದೊಡ್ಡ ಮೊತ್ತದ ಹಣವನ್ನೂ ಸಹ ಗಳಿಕೆ ಮಾಡುತ್ತವೆ. ಮಾತ್ರವಲ್ಲದೆ ತೆಲುಗು ಚಿತ್ರರಂಗ ಹೆಚ್ಚು ವರ್ಸಟೈಲ್ ಚಿತ್ರರಂಗ. ಇಲ್ಲಿ ಎಲ್ಲ ರೀತಿಯ ಸಿನಿಮಾಗಳು ನಿರ್ಮಾಣ ಆಗುತ್ತದೆ. ವಿವಿಧ ಸ್ಥರಗಳ ಟಾಪ್ ನಾಯಕರುಗಳಿದ್ದಾರೆ. ಭಾರಿ ನಿರ್ಮಾಪಕರ ಸಂಖ್ಯೆಯೂ ಸಹ ದೊಡ್ಡದಾಗಿಯೇ ಇದೆ. ಇತ್ತೀಚೆಗೆ ತೆಲುಗು ಚಿತ್ರರಂಗ ನಿಧಾನಕ್ಕೆ ಉತ್ತರ ಭಾರತದತ್ತ ಹೆಜ್ಜೆ ಹಾಕುತ್ತಿದೆ. ಇದಕ್ಕೆ ಕಾರಣವೂ ಇದೆ.

ಉತ್ತರ ಭಾರತದತ್ತ ಹೊರಟಿತೇಕೆ ತೆಲುಗು ಚಿತ್ರರಂಗ, ‘ಪುಷ್ಪ’ ಬಳಿಕ ಈಗ ‘ಪೆದ್ದಿ’
Peddi Pushpa
ಮಂಜುನಾಥ ಸಿ.
|

Updated on: May 12, 2026 | 7:10 PM

Share

ತೆಲುಗು ಚಿತ್ರರಂಗ (Tollywood), ಭಾರತದ ಅತ್ಯಂತ ಲಾಭದಾಯಕ ಚಿತ್ರರಂಗ. ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಇಲ್ಲಿ ಗೆಲ್ಲುವ ಚಿತ್ರಗಳ ಸರಾಸರಿ ಸಂಖ್ಯೆ ಹೆಚ್ಚು. ತೆಲುಗು ಸಿನಿಮಾಗಳು ಭಾರಿ ದೊಡ್ಡ ಮೊತ್ತದ ಹಣವನ್ನೂ ಸಹ ಗಳಿಕೆ ಮಾಡುತ್ತವೆ. ಮಾತ್ರವಲ್ಲದೆ ತೆಲುಗು ಚಿತ್ರರಂಗ ಹೆಚ್ಚು ವರ್ಸಟೈಲ್ ಚಿತ್ರರಂಗ. ಇಲ್ಲಿ ಎಲ್ಲ ರೀತಿಯ ಸಿನಿಮಾಗಳು ನಿರ್ಮಾಣ ಆಗುತ್ತದೆ. ವಿವಿಧ ಸ್ಥರಗಳ ಟಾಪ್ ನಾಯಕರುಗಳಿದ್ದಾರೆ. ಭಾರಿ ನಿರ್ಮಾಪಕರ ಸಂಖ್ಯೆಯೂ ಸಹ ದೊಡ್ಡದಾಗಿಯೇ ಇದೆ. ಇತ್ತೀಚೆಗೆ ತೆಲುಗು ಚಿತ್ರರಂಗ ನಿಧಾನಕ್ಕೆ ಉತ್ತರ ಭಾರತದತ್ತ ಹೆಜ್ಜೆ ಹಾಕುತ್ತಿದೆ. ಇದಕ್ಕೆ ಕಾರಣವೂ ಇದೆ.

ತೆಲುಗು ಸಿನಿಮಾಗಳಿಗೆ ವಿಶೇಷವಾಗಿ ತೆಲುಗಿನ ಮಾಸ್ ಸಿನಿಮಾಗಳು ಭಾರತದಾದ್ಯಂತ ದೊಡ್ಡ ಬೇಡಿಕೆ ಇದೆ. ಅದರಲ್ಲೂ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಇನ್ನೂ ಕೆಲವು ರಾಜ್ಯಗಳಲ್ಲಿ ತೆಲುಗು ಸಿನಿಮಾಗಳು ಹಿಂದಿ ಸಿನಿಮಾಗಳಿಗಿಂತಲೂ ಚೆನ್ನಾಗಿ ಪ್ರದರ್ಶನ ಕಾಣುತ್ತವೆ. ಕಾರ್ಪೊರೇಟ್ ಶೈಲಿಯ ಹಿಂದಿ ಸಿನಿಮಾಗಳು ಬಿಹಾರ, ಉತ್ತರ ಪ್ರದೇಶದ ಬಡ ಮಧ್ಯಮ ವರ್ಗದ ಜನರಿಗೆ ರಿಲೇಟ್ ಆಗುವುದಿಲ್ಲ. ಆದರೆ ತೆಲುಗಿನ ಮಾಸ್ ಹಳ್ಳಿ ಕತೆಗಳು ಹೆಚ್ಚು ಮಜಾ ಕೊಡುತ್ತವೆ. ಹಾಗಾಗಿ ತೆಲುಗು ಸಿನಿಮಾಗಳಿಗೆ ಇಲ್ಲಿ ಬೇಡಿಕೆ ಹೆಚ್ಚು.

ಇದೇ ಬೇಡಿಕೆಯನ್ನು ಲಾಭವನ್ನಾಗಿ ಪರಿವರ್ತಿಸಲು ತೆಲುಗು ಚಿತ್ರರಂಗ ಪ್ರಯತ್ನಿಸುತ್ತಿದೆ. ‘ಪುಷ್ಪ 2’ ಸಿನಿಮಾದ ಪ್ರೀ ರಿಲೀಟ್ ಇವೆಂಟ್​ ಅನ್ನು ಪಟ್ನಾನಲ್ಲಿ ಆಯೋಜಿಸಲಾಗಿತ್ತು. ಇತ್ತೀಚೆಗೆ ಬಂದ ‘ಡಕಾಯತ್’ ಸಿನಿಮಾನಲ್ಲಿ ಭೋಜ್​​ಪುರಿ ನಟ ಪವನ್ ಸಿಂಗ್ ಅನ್ನು ಅತಿಥಿ ನಟನಾಗಿ ಹಾಕಿಕೊಂಡಿದ್ದಲ್ಲದೆ, ಉತ್ತರ ಪ್ರದೇಶದಲ್ಲಿ ಸಿನಿಮಾದ ಪ್ರಚಾರವನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು.

ಇದನ್ನೂ ಓದಿ:ಮದನ ಮನಮೋಹಿನಿಯಂತೆ ಕಾಣಿಸಿದ ರುಕ್ಮಿಣಿ ವಸಂತ್ 

ಈಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇದು ಸಹ ‘ಪುಷ್ಪ’ ರೀತಿಯೇ ಗ್ರಾಮ ಭಾಗದ ಯುವಕನ ಕತೆಯನ್ನು ಒಳಗೊಂಡಿದ್ದು, ಈ ಸಿನಿಮಾ ಸಹ ಉತ್ತರ ಭಾರತದ ಕೆಲ ರಾಜ್ಯಗಳ ಜನರಿಗೆ ಹೆಚ್ಚು ಕನೆನ್ಟ್ ಆಗಲಿದ್ದು, ಇದೀಗ ಈ ಸಿನಿಮಾ ಸಹ ಉತ್ತರ ಭಾರತದಲ್ಲಿ ವಿಶೇಷ ಪ್ರಚಾರಕ್ಕೆ ಸಿದ್ಧವಾಗುತ್ತಿದೆ.

‘ಪೆದ್ದಿ’ ಸಿನಿಮಾದ ಟ್ರೈಲರ್ ಇದೇ 18ರಂದು ಬಿಡುಗಡೆ ಆಗಲಿದೆ. ಅದಾದ ಬಳಿಕ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ‘ಪೆದ್ದಿ’ ಸಿನಿಮಾದ ದೊಡ್ಡ ಇವೆಂಟ್ ಒಂದನ್ನು ಚಿತ್ರತಂಡ ಆಯೋಜಿಸಿದೆ. ‘ಪೆದ್ದಿ’ ಸಿನಿಮಾನಲ್ಲಿ ಕ್ರಿಕೆಟ್ ಜೊತೆಗೆ ಕುಸ್ತಿಯ ಕತೆಯೂ ಇದೆ, ಭೋಪಾಲ್, ಕುಸ್ತಿಗೆ ಜನಪ್ರಿಯವಾಗಿರುವ ನಗರವಾಗಿದೆ ಹಾಗಾಗಿ ಇಲ್ಲಿಯೇ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us