Rashmika Mandanna: ಮಿಲಾನ್ ಫ್ಯಾಷನ್​ ವೀಕ್​​ನಲ್ಲಿ ಬಿಟಿಎಸ್​ ನಾಯಕನ ಭೇಟಿ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ?

ಬಿಟಿಎಸ್ ಆರ್ಮಿಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ. ರಶ್ಮಿಕಾ ಕೂಡ ಬಿಟಿಎಸ್​ನ ಅಭಿಮಾನಿ. ಈಗ ಕಿಮ್​ ನಾಮ್​ಜೂನ್ ಹಾಗೂ ರಶ್ಮಿಕಾ ಒಂದೇ ವೇದಿಕೆಗೆ ತೆರಳುತ್ತಿರುವುದರಿಂದ ಪರಸ್ಪರ ಇಬ್ಬರ ಭೇಟಿ ಆಗುವ ಸಾಧ್ಯತೆ ಇದೆ.

Rashmika Mandanna: ಮಿಲಾನ್ ಫ್ಯಾಷನ್​ ವೀಕ್​​ನಲ್ಲಿ ಬಿಟಿಎಸ್​ ನಾಯಕನ ಭೇಟಿ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ?
ರಶ್ಮಿಕಾ-ಕಿಮ್ ನಾಮ್​ಜೂನ್

Updated on: Feb 24, 2023 | 11:48 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಹಲವು ಭಾಷೆಗಳಲ್ಲಿ ರಶ್ಮಿಕಾಗೆ ಅಭಿಮಾನಿಗಳಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಅವರು ಮಿಲಾನ್ ಫ್ಯಾಷನ್ ವೀಕ್​ಗಾಗಿ ಇಟಲಿಗೆ ತೆರಳಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣ ಅವರು ಬಿಟಿಎಸ್​ ನಾಯಕ ಕಿಮ್ ನಾಮ್​ಜೂನ್ (Kim Namjoon) ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ಫೋಟೋ ನೋಡೋಕೆ ಫ್ಯಾನ್ಸ್ ಕಾದಿದ್ದಾರೆ.

ಬಿಟಿಎಸ್ ಆರ್ಮಿಗೆ ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ. ಸಾಕಷ್ಟು ದೊಡ್ಡ ಜನರು ಅವರನ್ನು ಹಿಂಬಾಲಿಸುತ್ತಾರೆ. ರಶ್ಮಿಕಾ ಕೂಡ ಬಿಟಿಎಸ್​ನ ಅಭಿಮಾನಿ. ಈಗ ಕಿಮ್​ ನಾಮ್​ಜೂನ್ ಹಾಗೂ ರಶ್ಮಿಕಾ ಒಂದೇ ವೇದಿಕೆಗೆ ತೆರಳುತ್ತಿರುವುದರಿಂದ ಪರಸ್ಪರ ಇಬ್ಬರ ಭೇಟಿ ಆಗುವ ಸಾಧ್ಯತೆ ಇದೆ. ಈ ಕ್ಷಣದ ಫೋಟೋಗಾಗಿ ರಶ್ಮಿಕಾ ಫ್ಯಾನ್ಸ್ ಕಾದಿದ್ದಾರೆ.

ಕಿಮ್​ ನಾಮ್​ಜೂನ್ ಅವರು ಇಟಲಿಯ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಕಡೆ ತಿರುಗಿ ಅವರು ಕೈ ಬೀಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಬಿಟಿಎಸ್ ಆರ್ಮಿಯ ದೊಡ್ಡ ಅಭಿಮಾನಿ. ಈ ಮೊದಲು ಅನೇಕ ಕಡೆಗಳಲ್ಲಿ ಇದನ್ನು ಅವರು ಹೇಳಿಕೊಂಡಿದ್ದರು. ದಕ್ಷಿಣ ಕೊರಿಯಾದ ನಟ ಜುಂಗ್ Il-ವೂ ಮೊದಲಾದವರನ್ನು ರಶ್ಮಿಕಾ ಇಟಲಿಯಲ್ಲಿ ಭೇಟಿ ಮಾಡಿದ್ದರು.

ರಶ್ಮಿಕಾ ಮಂದಣ್ಣ ಅವರು ಈ ವರ್ಷದ ಆರಂಭದಲ್ಲೇ ಎರಡು ಯಶಸ್ಸು ಕಂಡಿದ್ದಾರೆ. ‘ವಾರಿಸು’ ಸಿನಿಮಾ ಯಶಸ್ಸು ಕಂಡಿದೆ. ತಮಿಳಿನಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ದಳಪತಿ ವಿಜಯ್​ಗೆ ಜೊತೆಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ‘ಮಿಷನ್ ಮಜ್ನು’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ‘ಅನಿಮಲ್​’ ಹಾಗೂ ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us