Rashmika Mandanna: ರಿಲೀಸ್​ಗೂ ಮುನ್ನ 32 ಕೋಟಿ ರೂ. ಬಿಸ್ನೆಸ್​ ಮಾಡಿದ ರಶ್ಮಿಕಾ ಮಂದಣ್ಣ ಸಿನಿಮಾ? ಸಮಂತಾ ದಾಖಲೆ ಉಡೀಸ್​

ಹೀರೋಗಳಿಗೆ ಹೋಲಿಸಿದರೆ ಹೀರೋಯಿನ್​ಗಳಿಗೆ ಸಿಗುವ ಸಂಭಾವನೆ ತುಂಬಾ ಕಡಿಮೆ. ಹಾಗಿರುವಾಗ ಒಂದು ಸಿನಿಮಾ 32 ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದರೆ ಅದು ನಿಜಕ್ಕೂ ದೊಡ್ಡ ವಿಚಾರ.

Rashmika Mandanna: ರಿಲೀಸ್​ಗೂ ಮುನ್ನ 32 ಕೋಟಿ ರೂ. ಬಿಸ್ನೆಸ್​ ಮಾಡಿದ ರಶ್ಮಿಕಾ ಮಂದಣ್ಣ ಸಿನಿಮಾ? ಸಮಂತಾ ದಾಖಲೆ ಉಡೀಸ್​
ಸಮಂತಾ ರುತ್​ ಪ್ರಭು

Updated on: Jul 17, 2023 | 7:32 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರತಿ ಚಿತ್ರದಲ್ಲೂ ಅವರು ಬೇರೆ ಬೇರೆ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಸ್ಟಾರ್​ ಹೀರೋಗಳ ಜೊತೆ ಗ್ಲಾಮರ್​ ಗೊಂಬೆಯಂತೆ ಕಾಣಿಸಿಕೊಳ್ಳುವುದು ಮಾತ್ರವಲ್ಲದೇ, ನಟನೆಗೆ ಪ್ರಾಮುಖ್ಯತೆ ಇರುವಂತಹ ಪಾತ್ರಗಳನ್ನು ಕೂಡ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಒಂದು ಮಹಿಳಾಪ್ರಧಾನ ಕಥೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸುದ್ದಿ ಆಗಿತ್ತು. ಆ ಚಿತ್ರದ ಹೆಸರು ‘ರೇನ್​ಬೋ’. ಟಾಲಿವುಡ್​ನಲ್ಲಿ ನಿರ್ಮಾಣ ಆಗುತ್ತಿರುವ ‘ರೇನ್​ಬೋ’ (Rainbow Movie) ಸಿನಿಮಾದ ಬಗ್ಗೆ ಈಗೊಂದು ಸ್ಪೆಷಲ್​ ಅಪ್​ಡೇಟ್​ ಕೇಳಿಬಂದಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾಗೆ ಭರ್ಜರಿ ಡಿಮ್ಯಾಂಡ್​ ಬಂದಿದೆ. ಬರೋಬ್ಬರಿ 32 ಕೋಟಿ ರೂಪಾಯಿಗೆ ಸಿನಿಮಾ ಸೇಲ್​ ಆಗಿದೆ ಎಂದು ಹೇಳಲಾಗುತ್ತಿದೆ. ಅದರಿಂದಾಗಿ ಸಮಂತಾ ರುತ್​ ಪ್ರಭು (Samanth Ruth Prabhu) ಅವರು ಈ ಮೊದಲು ಮಾಡಿದ್ದ ದಾಖಲೆಯನ್ನೂ ರಶ್ಮಿಕಾ ಮಂದಣ್ಣ ಮುರಿದಂತಾಗಿದೆ.

ಟಾಲಿವುಡ್​ನಲ್ಲಿ ಸಮಂತಾ ಅವರು ಸ್ಟಾರ್​ ನಟಿಯಾಗಿ ಮೆರೆಯುತ್ತಿದ್ದಾರೆ. ಮಹಿಳಾಪ್ರಧಾನ ಕಥೆಯುಳ್ಳ ಸಿನಿಮಾಗಳಲ್ಲಿ ಕಾಣಿಸಿಕೊಂಡು ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ನಟಿಸಿದ್ದ ‘ಓಹ್​ ಬೇಬಿ’ ಮತ್ತು ‘ಯಶೋದಾ’ ಚಿತ್ರಗಳು 30 ಕೋಟಿ ರೂಪಾಯಿ ತನಕ ಬಿಸ್ನೆಸ್​ ಮಾಡಿದ್ದವು. ಅದು ಕೂಡ ರಿಲೀಸ್​ ನಂತರ ಮಾತ್ರ. ಆದರೆ ರಶ್ಮಿಕಾ ಮಂದಣ್ಣ ನಟನೆಯ ‘ರೇನ್​ಬೋ’ ಸಿನಿಮಾ ಬಿಡುಗಡೆಗೂ ಮುನ್ನವೇ 32 ಕೋಟಿ ರುಪಾಯಿ ವ್ಯವಹಾರ ಮಾಡಿದೆ ಎನ್ನಲಾಗಿದೆ. ಇದರಲ್ಲಿ ಡಿಜಿಟಲ್​, ಸ್ಯಾಟಲೈಟ್​ ಹಾಗೂ ಥಿಯಟ್ರಿಕಲ್​ ಹಕ್ಕುಗಳು ಕೂಡ ಸೇರಿವೆ ಎಂದು ಮೂಲಗಳು ತಿಳಿಸಿರುವುದಾಗಿ ‘ಡೆಕ್ಕನ್​ ಕ್ರೊನಿಕಲ್​’ ವರದಿ ಮಾಡಿದೆ.

ಇದನ್ನೂ ಓದಿ: Rashmika Mandanna: ವಿಜಯ್​ ದೇವರಕೊಂಡ ತಮ್ಮನ ಸಿನಿಮಾ ನೋಡಲು ಹೋಗಿ ಕಣ್ಣೀರು ಹಾಕಿದ ರಶ್ಮಿಕಾ ಮಂದಣ್ಣ

ಸ್ಟಾರ್​ ಹೀರೋಗಳಿಗೆ ಹೋಲಿಸಿದರೆ ಹೀರೋಯಿನ್​ಗಳಿಗೆ ಸಿಗುವ ಸಂಭಾವನೆ ಮೊತ್ತ ತುಂಬಾ ಕಡಿಮೆ. ಹಾಗಿರುವಾಗ ಒಂದು ಸಿನಿಮಾ 32 ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದರೆ ಅದು ನಿಜಕ್ಕೂ ದೊಡ್ಡ ವಿಚಾರ. ‘ರೇನ್​ಬೋ’ ಸಿನಿಮಾಗೆ ಜನರು ಮೆಚ್ಚಿಗೆ ಸೂಚಿಸಿದರೆ ಮುಂದಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಇಂಥ ಪ್ರಾಜೆಕ್ಟ್​ಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳುವ ಸಾಧ್ಯತೆ ಇರುತ್ತದೆ. ಸದ್ಯ ಆಗಿರುವ ಬಿಸ್ನೆಸ್​ ಬಗ್ಗೆ ಅಧಿಕೃತ ಹೇಳಿಕೆ ಹೊರಬರಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಕೈಯಿಂದ ಮೊಬೈಲ್​ ಕಿತ್ತುಕೊಂಡ ಯುವಕ; ಹೇಗಿತ್ತು ನಟಿಯ ರಿಯಾಕ್ಷನ್​?

‘ಡ್ರೀಮ್​ ವಾರಿಯರ್​ ಪಿಕ್ಚರ್ಸ್​’ ಬ್ಯಾನರ್​ ಮೂಲಕ ‘ರೇನ್​ಬೋ’ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರದ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ಇದಲ್ಲದೇ ರಣಬೀರ್ ಕಪೂರ್​ ಜೊತೆ ‘ಅನಿಮಲ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಆ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಡಿಸೆಂಬರ್​ 1ರಂದು ಬಿಡುಗಡೆ ಆಗಲಿದೆ. ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಈ ಎಲ್ಲ ಹೈವೋಲ್ಟೇಜ್​ ಪ್ರಾಜೆಕ್ಟ್​ಗಳ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us