AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್​ ಮುಗಿಯೋದಕ್ಕೂ ಮುನ್ನವೇ 120 ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದ ರಶ್ಮಿಕಾ ಹೊಸ ಸಿನಿಮಾ

Rashmika Mandanna | Varisu: ದಳಪತಿ ವಿಜಯ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ವಾರಿಸು’ ಚಿತ್ರಕ್ಕೆ ಸಖತ್​ ಡಿಮ್ಯಾಂಡ್​ ಸೃಷ್ಟಿ ಆಗಿದೆ. ಚಿತ್ರೀಕರಣ ಪೂರ್ಣಗೊಳ್ಳುವುದಕ್ಕೂ ಮೊದಲೇ ಭರ್ಜರಿ ಬಿಸ್ನೆಸ್​ ಮಾಡುತ್ತಿದೆ.

ಶೂಟಿಂಗ್​ ಮುಗಿಯೋದಕ್ಕೂ ಮುನ್ನವೇ 120 ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದ ರಶ್ಮಿಕಾ ಹೊಸ ಸಿನಿಮಾ
ರಶ್ಮಿಕಾ ಮಂದಣ್ಣ
TV9 Web
| Edited By: |

Updated on:Sep 12, 2022 | 12:25 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಎಷ್ಟೋ ಜನರ ಪಾಲಿಗೆ ಅವರು ಲಕ್ಕಿ ಹೀರೋಯಿನ್​ ಆಗಿದ್ದಾರೆ. ಅವರು ನಟಿಸಿದ ಬಹುತೇಕ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಮುಂಬರುವ ಚಿತ್ರಗಳ ಬಗ್ಗೆಯೂ ಪಾಸಿಟಿವ್​ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ಅವರು ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ದಳಪತಿ ವಿಜಯ್​ ಜೊತೆಗಿನ ‘ವಾರಿಸು’ ಸಿನಿಮಾ (Varisu) ಹೆಚ್ಚು ಕೌತುಕ ಮೂಡಿಸಿದೆ. ಸದ್ಯಕ್ಕೆ ಈ ಚಿತ್ರಕ್ಕಿನ್ನೂ ಶೂಟಿಂಗ್​ ನಡೆಯುತ್ತಿದೆ. ಅಷ್ಟರಲ್ಲಾಗಲೇ ಬರೋಬ್ಬರಿ 120 ಕೋಟಿ ರೂಪಾಯಿ ಬಿಸ್ನೆಸ್​ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕೇಳಿ ರಶ್ಮಿಕಾ ಮಂದಣ್ಣ ಮತ್ತು ದಳಪತಿ ವಿಜಯ್ (Thalapathy Vijay)​ ಫ್ಯಾನ್ಸ್​ ಹಿರಿಹಿರಿ ಹಿಗ್ಗುತ್ತಿದ್ದಾರೆ.

‘ವಾರಿಸು’ ಸಿನಿಮಾದ ವಿತರಣೆ ಹಕ್ಕುಗಳನ್ನು ಹೊರತುಪಡಿಸಿ ಒಟಿಟಿ, ಟಿವಿ ಹಾಗೂ ಆಡಿಯೋ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಅಮೇಜಾನ್​ ಪ್ರೈಂ ವಿಡಿಯೋ ಸಂಸ್ಥೆಯು ಒಟಿಟಿ ಹಕ್ಕುಗಳನ್ನು ಬರೋಬ್ಬರಿ 60 ಕೋಟಿ ರೂಪಾಯಿ ನೀಡಿ ಕೊಂಡುಕೊಂಡಿದೆ. ಟಿವಿ ಪ್ರಸಾರ ಹಕ್ಕುಗಳನ್ನು ಸನ್​ ನೆಟ್​ವರ್ಕ್​​ ಸಂಸ್ಥೆಯು 50 ಕೋಟಿ ರೂಪಾಯಿ ನೀಡಿ ಪಡೆದುಕೊಂಡಿದೆ. ಆಡಿಯೋ ಹಕ್ಕುಗಳು 10 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂದು ವರದಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ದಳಪತಿ ವಿಜಯ್​ ಜೊತೆ ನಟಿಸಬೇಕು ಎಂಬುದು ರಶ್ಮಿಕಾ ಮಂದಣ್ಣ ಅವರ ಆಸೆ ಆಗಿತ್ತು. ಅದು ‘ವಾರಿಸು’ ಚಿತ್ರದ ಮೂಲಕ ನೆರವೇರುತ್ತಿದೆ. ಅದ್ದೂರಿ ಬಜೆಟ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅಕ್ಟೋಬರ್​ ತಿಂಗಳಲ್ಲಿ ಶೂಟಿಂಗ್​ ಮುಗಿಯುವ ನಿರೀಕ್ಷೆ ಇದೆ. ಚಿತ್ರೀಕರಣ ಪೂರ್ಣಗೊಳ್ಳುವುದಕ್ಕೂ ಮೊದಲೇ ಈ ಪರಿ ಬಿಸ್ನೆಸ್​ ಮಾಡುತ್ತಿರುವುದು ‘ವಾರಿಸು’ ಸಿನಿಮಾದ ಹೆಚ್ಚುಗಾರಿಕೆ.

ಇದನ್ನೂ ಓದಿ
Image
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Image
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ. ದಕ್ಷಿಣ ಭಾರತದಲ್ಲಿ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ನಟಿಸಿದ ‘ಸೀತಾ ರಾಮಂ’ ಸಿನಿಮಾ ಇತ್ತೀಚೆಗೆ ರಿಲೀಸ್​ ಆಗಿ ಸೂಪರ್​ ಹಿಟ್​ ಆಯಿತು. ಚಿತ್ರಮಂದಿರದಲ್ಲಿ ಬಹುಕೋಟಿ ರೂಪಾಯಿ ಕಮಾಯಿ ಮಾಡಿದ ಬಳಿಕ ಒಟಿಟಿಯಲ್ಲೂ ‘ಸೀತಾ ರಾಮಂ’ ಚಿತ್ರ ಧೂಳೆಬ್ಬಿಸುತ್ತಿದೆ.

ಈ ಎಲ್ಲ ಕಾರಣಗಳಿಂದಾಗಿ ರಶ್ಮಿಕಾ ಲಕ್ಕಿ ಹೀರೋಯಿನ್​ ಆಗಿದ್ದಾರೆ. ಬಾಲಿವುಡ್​ನಲ್ಲಿ ಅವರು ಅಮಿತಾಭ್​ ಬಚ್ಚನ್​ ಜೊತೆ ನಟಿಸಿದ ‘ಗುಡ್​ಬೈ’ ಸಿನಿಮಾ ಅಕ್ಟೋಬರ್​ 7ರಂದು ರಿಲೀಸ್​ ಆಗಲಿದೆ. ಸಿದ್ಧಾರ್ಥ್​ ಮಲ್ಹೋತ್ರಾ ಜತೆ ಅವರು ‘ಮಿಷನ್​ ಮಜ್ನು’ ಶೂಟಿಂಗ್​ ಮುಗಿಸಿದ್ದಾರೆ. ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:25 pm, Mon, 12 September 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್