AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬರೀಶ್​​ಗೆ ‘ಕರ್ನಾಟಕ ರತ್ನ’: ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ

ಕುವೆಂಪು, ಡಾ ರಾಜ್​​ಕುಮಾರ್, ವಿಜ್ಞಾನಿ ಸಿಎನ್​​ಆರ್ ರಾವ್, ಪುನೀತ್ ರಾಜ್​​ಕುಮಾರ್, ವಿಷ್ಣುವರ್ಧನ್ ಇನ್ನೂ ಹಲವು ಸಾಧಕರಿಗೆ ‘ಕರ್ನಾಟಕ ರತ್ನ’ ನೀಡಿ ಗೌರವಿಸಲಾಗಿದೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ರಾಜಕಾರಣಿಯೂ ಆಗಿದ್ದ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ನೀಡುವಂತೆ ಆಗ್ರಹಿಸಲಾಗುತ್ತಿದೆ. ಸಚಿವ ರಾಮಲಿಂಗ ರೆಡ್ಡಿ ಅವರು ಸಹ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದು, ಅಂಬರೀಶ್ ಅವರಿಗೆ ‘ಕರ್ನಾಟಕ ರತ್ನ’ ನೀಡಿ ಎಂದು ಒತ್ತಾಯಿಸಿದ್ದಾರೆ.

ಅಂಬರೀಶ್​​ಗೆ ‘ಕರ್ನಾಟಕ ರತ್ನ’: ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ
Ambareesh Reddy
ಮಂಜುನಾಥ ಸಿ.
|

Updated on: Oct 06, 2026 | 5:17 PM

Share

ಯಾವುದೇ ಕ್ಷೇತ್ರದ ಸೇವೆಗೆ ಕರ್ನಾಟಕದಲ್ಲಿ ನೀಡಲಾಗುವ ಅತ್ಯುನ್ನತ ಗೌರವ ‘ಕರ್ನಾಟಕ ರತ್ನ’. ಕುವೆಂಪು, ಡಾ ರಾಜ್​​ಕುಮಾರ್, ವಿಜ್ಞಾನಿ ಸಿಎನ್​​ಆರ್ ರಾವ್, ಪುನೀತ್ ರಾಜ್​​ಕುಮಾರ್, ವಿಷ್ಣುವರ್ಧನ್ ಇನ್ನೂ ಹಲವು ಸಾಧಕರಿಗೆ ‘ಕರ್ನಾಟಕ ರತ್ನ’ ನೀಡಿ ಗೌರವಿಸಲಾಗಿದೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ರಾಜಕಾರಣಿಯೂ ಆಗಿದ್ದ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ನೀಡುವಂತೆ ಆಗ್ರಹಿಸಲಾಗುತ್ತಿದೆ. ಸಚಿವ ರಾಮಲಿಂಗ ರೆಡ್ಡಿ ಅವರು ಸಹ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದು, ಅಂಬರೀಶ್ ಅವರಿಗೆ ‘ಕರ್ನಾಟಕ ರತ್ನ’ ನೀಡಿ ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಸಚಿವ ರಾಮಲಿಂಗಾ ರೆಡ್ಡಿ, ‘ಬೆಳ್ಳಿ ತೆರೆಯ ಮೇಲಿನ ‘ರೆಬೆಲ್ ಸ್ಟಾರ್’, ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಅಚ್ಚುಮೆಚ್ಚಿನ ‘ಮಂಡ್ಯದ ಗಂಡು’ ಡಾ. ಅಂಬರೀಶ್ ನಮ್ಮೆಲ್ಲರ ನೆನಪಿನಲ್ಲಿ ಸದಾ ಅಮರ. ಕನ್ನಡ ನಾಡು, ನುಡಿ, ಕಲೆ ಹಾಗೂ ರಾಜಕೀಯ ರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅಭಿಮಾನಿಗಳ ಆಶಯದಂತೆ ಮತ್ತು ಅವರ ಜನಪ್ರಿಯತೆಯನ್ನು ಗುರುತಿಸಿ, ಮುಂಬರುವ ರಾಜ್ಯೋತ್ಸವದ ವೇಳೆಗೆ ಅವರಿಗೆ ‘ಕರ್ನಾಟಕ ರತ್ನ’ (ಮರಣೋತ್ತರವಾಗಿ) ಪ್ರಶಸ್ತಿ ನೀಡಿ ಗೌರವಿಸಬೇಕೆಂದು ನಾನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅಂಬರೀಶ್ ಅವರಿಗೆ ಸಲ್ಲಬೇಕಾದ ಈ ಗೌರವ ನಾಡಿನ ಪ್ರತಿಯೊಬ್ಬ ಕನ್ನಡಿಗನ ಗೌರವವಾಗಿದೆ’ ಎಂದಿದ್ದಾರೆ.

ಸರ್ಕಾರಕ್ಕೆ ಪತ್ರ ಬರೆದಿರುವ ರಾಮಲಿಂಗಾ ರೆಡ್ಡಿ, ‘ಅಂಬರೀಶ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ‘ರೆಬೆಲ್ ಸ್ಟಾರ್’ ಆಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮತ್ತು ಕಲಾವಿದರ ಹಿತ ಕಾಯುವಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದರು. ರಾಜಕೀಯ ರಂಗದಲ್ಲೂ ಶಾಸಕರಾಗಿ, ಸಂಸದರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಸದಾ ಶ್ರಮಿಸಿದ್ದಾರೆ. ಆದ್ದರಿಂದ, ಮುಂಬರುವ ರಾಜ್ಯೋತ್ಸವ ಅಥವಾ ಸೂಕ್ತ ಸಂದರ್ಭದಲ್ಲಿ ಶ್ರೀ ಎಂ. ಹೆಚ್. ಅಂಬರೀಶ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿ ಗೌರವಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿದೆ’ ಎಂದು ಹೇಳಿದ್ದಾರೆ.

ಅಂಬರೀಶ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕೆಂದು ಅಂಬರೀಶ್​ ಅಭಿಮಾನಿ ಸಂಘದ ಸದಸ್ಯರು, ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಅಂಬರೀಶ್ ಅವರು ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಲ್ಲಿಸುವ ಜೊತೆಗೆ ರಾಜಕಾರಣಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಕಾವೇರಿ ವಿಷಯವಾಗಿ ಕೆಲಸಗಳನ್ನು ಮಾಡಿದ್ದಾರೆ. ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಇದೇ ಕಾರಣಕ್ಕೆ ಅಂಬರೀಶ್ ಅವರಿಗೆ ‘ಕರ್ನಾಟಕ ರತ್ನ’ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು