ನಾಲ್ಕು ವಿವಾಹ ಆದ ಕಿರುತೆರೆ ನಟಿಗೆ ಕಿರುಕುಳ; ಬೇಸತ್ತು ಮಾಡಿದ್ದೇನು ನೋಡಿ

ಮಲಯಾಳಂ ನಟಿ ರೇಖಾ ರತೀಶ್ ಯೂಟ್ಯೂಬರ್‌ಗಳಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದಾರೆ. ಮಾನಸಿಕ ಹಿಂಸೆಯಿಂದ ನೊಂದಿರುವ ಅವರು, ಕೆಲಸ ಕಳೆದುಕೊಂಡು ಮಗುವನ್ನು ನೋಡಿಕೊಳ್ಳಲು ಕಷ್ಟಪಡುತ್ತಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಕಣ್ಣೀರು ಹಾಕಿ, ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ನಾಲ್ಕು ವಿವಾಹ ಆದ ಕಿರುತೆರೆ ನಟಿಗೆ ಕಿರುಕುಳ; ಬೇಸತ್ತು ಮಾಡಿದ್ದೇನು ನೋಡಿ
ರೇಖಾ ರತೀಶ್

Updated on: Feb 17, 2026 | 7:37 AM

ಮಲಯಾಳಂ ಕಿರುತೆರೆ ನಟಿ ರೇಖಾ ರತೀಶ್ (Rekha Rateesh) ಅವರು ಈಗ ಕಣ್ಣೀರು ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರೋ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇಷ್ಟೇ ಅಲ್ಲ, ತಮ್ಮ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿ ಅವರು ಕೇಳಿಕೊಂಡಿದ್ದಾರೆ. ಯೂಟ್ಯೂಬರ್​​ಗಳಿಂದ ಕಿರುಕುಳ ಆಗುತ್ತಿದೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಸದ್ಯ ಅವರ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ.

‘ಕೇರಳ ಸರ್ಕಾರ ಮತ್ತು ಪಿಣರಾಯ್ ವಿಜಯನ್ ಅವರಲ್ಲಿ ನನ್ನ ಕೋರಿಕೆ. ನಾನು ರೇಖಾ ರತೀಶ್. ವೃತ್ತಿಯಲ್ಲಿ ನಾನು ನಟಿ. ಕಳೆದ 7-8 ತಿಂಗಳಿಂದ ನನಗೆ ಕೆಲಸ ಇಲ್ಲ. ಕಳೆದ 2-3 ತಿಂಗಳಿಂದ ಯೂಟ್ಯೂಬರ್​ಗಳು ನನ್ನ ಬಗ್ಗೆ ತಪ್ಪು ತಪ್ಪಾಗಿ ಥಂಬ್​ನೇಲ್ ಹಾಕಿ ವಿಡಿಯೋ ಮಾಡುತ್ತಿದ್ದಾರೆ. ಸಾಮಾನ್ಯರಂತೆ ಬದುಕಲು ಅವರು ನನಗೆ ಬಿಡುತ್ತಲೇ ಇಲ್ಲ. ನಾನು ನನ್ನ ಮಗುವನ್ನು ನೋಡಿಕೊಳ್ಳಬೇಕು. ಆದರೆ, ನನಗೆ ಸಾಕಷ್ಟು ಮಾನಸಿಕ ಕಿರುಕುಳ ಎದುರಾಗುತ್ತಿದೆ. ಇನ್ನು ಇದನ್ನು ಸಹಿಸಲು ಸಾಧ್ಯವಿಲ್ಲ ’ ಎಂದು ಅವರು ಹೇಳಿದ್ದಾರೆ.

‘ಈ ರೀತಿಯ ಯೂಟ್ಯೂಬರ್​​ಗಳಿಂದ ಇಂಡಸ್ಟ್ರಿಯ ಅನೇಕರು ಜೀವ ಕಳೆದುಕೊಂಡಿದ್ದಾರೆ. ನನಗೆ ಏನಾದರೂ ಆಯಿತು ಎಂದರೆ ಅದಕ್ಕೆ ಕಾರಣ ಯಾರು ಎಂಬುದು ಎಲ್ಲರಿಗೂ ತಿಳಿಯಬೇಕು.ತಪ್ಪು ಕೆಲಸ ಮಾಡುತ್ತಿರುವ ಯೂಟ್ಯೂಬರ್​​ಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ಮದುವೆ ಆದ ಕಿರುತೆರೆ ನಟಿ ಗೀತಾ ಭಾರತಿ ಭಟ್; ಫೋಟೋ ನೋಡಿ

ರೇಖಾ ಅವರು ಈಗಾಗಲೇ ನಾಲ್ಕು ಬಾರಿ ಮದುವೆ ಆಗಿದ್ದರು. ಯಾವ ಸಂಬಂಧವೂ ಉಳಿದುಕೊಂಡಿಲ್ಲ. 2000ನೇ ಇಸ್ವಿಯಲ್ಲಿ ಯೂಸುಫ್ ಎಂಬುವವರನ್ನು ಮದುವೆ ಆದರು. ಒಂದೇ ವರ್ಷದಲ್ಲಿ ಇವರು ಬೇರೆ ಆದರು 2001-10ವರೆಗೆ ನಿರ್ಮಲ್ ಪ್ರಕಾಶ್ ಜೊತೆ ಜೀವನ ನಡೆಸಿದರು. 2012-17ರವರೆಗೆ ಕಮಲ್ ರಾಯ್ ಹಾಗೂ 2019-20ರ ಅವಧಿಯಲ್ಲಿ ಅಭಿಲಾಶ್ ಜೊತೆ ಅವರು ವಿವಾಹ ಆದರು. ನಟಿಗೆ ಆರ್ಯನ್ ಹೆಸರಿನ ಮಗ ಇದ್ದಾನೆ. 2011ರಲ್ಲಿ ಈತ ಜನಿಸಿದ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us