ಸಿಎಂ ಸಿದ್ದರಾಮಯ್ಯರ ಎದುರು ಕಣ್ಣೀರಿಟ್ಟ ರೇಣುಕಾ ಸ್ವಾಮಿ ಪೋಷಕರು

Updated on: Jun 25, 2024 | 4:30 PM

ರೇಣುಕಾ ಸ್ವಾಮಿಯನ್ನು ನಂಬಿಸಿ ಚಿತ್ರದುರ್ಗದಿಂದ ಕರೆತಂದು ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಗಳೇನೋ ಕಾಲಕಾಲಕ್ಕೆ ಊಟ ನಿದ್ದೆ ಮಾಡುತ್ತಾ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಆದರೆ ರೇಣುಕಾ ಸ್ವಾಮಿಯ ಪೋಷಕರು ಕಂಗಾಲಾಗಿದ್ದಾರೆ. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಅಧೀರರಾಗಿದ್ದಾರೆ. ಅವರಿಂದ ಇಂದು ಸಿಎಂ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.

ರೇಣುಕಾ ಸ್ವಾಮಿಯ (Renuka Swamy) ಭೀಕರ ಕೊಲೆಯಾಗಿದೆ. ನಂಬಿಸಿ ಕರೆತಂದು ಅತ್ಯಂತ ಭೀಕರವಾಗಿ ಆತನನ್ನು ಕೊಲ್ಲಲಾಗಿದೆ. ಕೊಲೆ ಆರೋಪದ ಮೇಲೆ ನಟ ದರ್ಶನ್ (Darshan Thoogudeepa), ಪವಿತ್ರಾ ಗೌಡ ಹಾಗೂ ಅವರ ಸಹಚರರು ಜೈಲಿನಲ್ಲಿದ್ದಾರೆ. ಕಾಲ ಕಾಲಕ್ಕೆ ಊಟ ಮಾಡುತ್ತಾ ನಿದ್ದೆ ಮಾಡುತ್ತಾ ನೆಮ್ಮದಿಯಿಂದಿದ್ದಾರೆ. ಆದರೆ ಮನೆಗೆ ಇದ್ದ ಏಕೈಕ ದಿಕ್ಕನ್ನು ಕಳೆದುಕೊಂಡಿರುವ ರೇಣುಕಾ ಸ್ವಾಮಿಯ ಪೋಷಕರು ಕಂಗಾಲಾಗಿದ್ದಾರೆ. ಮಗನನ್ನು ಆ ಭೀಕರ ಸ್ಥಿತಿಯಲ್ಲಿ ಕಂಡ ಪೋಷಕರಿಗೆ ದುಃಖ ಆರಿಲ್ಲ. ಇಂದು (ಜೂನ್ 25) ರೇಣುಕಾ ಸ್ವಾಮಿ ಪೋಷಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಸಿದ್ದರಾಮಯ್ಯ ಮುಂದೆ ರೇಣುಕಾ ಸ್ವಾಮಿ ತಾಯಿಯ ಕಣ್ಣೀರ ಕಟ್ಟೆ ಒಡೆಯಿತು. ತಮಗೆ ಜೀವನಾಧಾರ ಇಲ್ಲವಾಗಿದ್ದು ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More