ರೇಣುಕಾ ಸ್ವಾಮಿ ಕೊಲೆ: ನಾಶ ಪಡಿಸಿದ್ದ ಮೊಬೈಲ್​ಗಳ ಮಾಹಿತಿ ಹೊರತೆಗೆಯಲಿರುವ ಪೊಲೀಸರು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಮೊಬೈಲ್ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ರೇಣುಕಾ ಸ್ವಾಮಿ ಹಾಗೂ ಇನ್ನೂ ಕೆಲವರ ಮೊಬೈಲ್ ಅನ್ನು ನಾಶಪಡಿಸಲಾಗಿದ್ದು, ಅವುಗಳ ಡಾಟಾ ಅನ್ನೂ ಸಹ ಪೊಲೀಸರು ಹೊರಗೆಳೆಯಲಿದ್ದಾರೆ.

ರೇಣುಕಾ ಸ್ವಾಮಿ ಕೊಲೆ: ನಾಶ ಪಡಿಸಿದ್ದ ಮೊಬೈಲ್​ಗಳ ಮಾಹಿತಿ ಹೊರತೆಗೆಯಲಿರುವ ಪೊಲೀಸರು
Follow us
ಮಂಜುನಾಥ ಸಿ.
|

Updated on: Jun 25, 2024 | 12:01 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಜೈಲು ಸೇರಿದ್ದಾಗಿದೆ. ದರ್ಶನ್ ಹಾಗೂ ಕೆಲವರನ್ನು ಬರೋಬ್ಬರಿ 12 ದಿನಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೀಗ ಎಲ್ಲರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಈಗಲೂ ಸಹ ಪೊಲೀಸರು ಸಾಕ್ಷ್ಯ ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪ್ರಕರಣದಲ್ಲಿ ಮಹತ್ವದ ಪಾತ್ರವಹಿಸಿರುವ ಮೊಬೈಲ್ ಡಾಟಾ ರಿಟ್ರೀವ್ ಮಾಡುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ. ಆರೋಪಿಗಳ ಮೊಬೈಲ್ ಮಾಹಿತಿ ಪರಿಶೀಲಿಸಲು ನ್ಯಾಯಾಲಯ ಈಗಾಗಲೇ ಅನುಮತಿ ನೀಡಿದೆ. ಆದರೆ ರೇಣುಕಾ ಸ್ವಾಮಿಯ ಮೊಬೈಲ್ ಹಾಗೂ ಇನ್ನೂ ಕೆಲವು ಆರೋಪಿಗಳ ಮೊಬೈಲ್ ಅನ್ನು ಆರೋಪಿಗಳೇ ನಾಶ ಪಡಿಸಿದ್ದರು, ಈಗ ಅವುಗಳ ಮಾಹಿತಿಯನ್ನೂ ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

ರೇಣುಕಾ ಸ್ವಾಮಿಯ ಶವ ಬಿಸಾಡಿದ ದಿನ ರೇಣುಕಾ ಸ್ವಾಮಿಯ ಮೊಬೈಲ್ ಅನ್ನೂ ಸಹ ಬಿಸಾಡಲಾಗಿತ್ತು. ಶವ ಬಿಸಾಡಿದ ರಾಘುವಿನ ಮೊಬೈಲ್ ಹಾಗೂ ಕೊಲೆಯನ್ನು ಒಪ್ಪಿಕೊಂಡವರ ಮೊಬೈಲ್​ಗಳನ್ನು ಸಹ ಬಿಸಾಡಲಾಗಿತ್ತು. ಇದೀಗ ಪೊಲೀಸರು ನಾಶಪಡಿಸಲಾದ ಮೊಬೈಲ್​ಗಳ ಮಾಹಿತಿಯನ್ನು ಮರಳಿ ಪಡೆಯುವ ಯತ್ನದಲ್ಲಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಮೊಬೈಲ್ ಡಾಟಾ ಸಂಗ್ರಹಕ್ಕೆ ಮುಂದಾಗಿದ್ದಾರೆ. ಇದೀಗ ಕೊಲೆಯಾದ ರೇಣುಕಾ ಸ್ವಾಮಿಯ ಮೊಬೈಲ್ ಡಾಟಾ ರಿಟ್ರೀವ್ ಮಾಡಲು ಮುಂದಾಗಿದ್ದಾರೆ ಅದೂ ಮೊಬೈಲ್ ಇಲ್ಲದೆಯೇ!

ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗದೆ ಹಿನ್ನಲೆಯಲ್ಲಿ ರೇಣುಕಾ ಸ್ವಾಮಿ ಬಳಸುತ್ತಿದ್ದ ಸಿಮ್ ಕಾರ್ಡ್​ ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆದಿರುವ ಪೊಲೀಸರು, ಸದ್ಯ ಡೂಪ್ಲಿಕೇಟ್ ಸಿಮ್ ಕಾರ್ಡ್ ಮೂಲಕ ಬ್ಯಾಕಪ್ ಪಡೆಯಲು ಮುಂದಾಗಿದ್ದಾರೆ. ಡೂಪ್ಲಿಕೇಟ್ ಸಿಮ್ ಖರೀದಿ ಮಾಡಿ ಅದನ್ನು ಡಿವೈಸ್ ಗೆ ಹಾಕಲಾಗುತ್ತದೆ. ಬಳಿಕ ರೇಣುಕಾಸ್ವಾಮಿ ಬಳಕೆ ಮಾಡುತ್ತಾ ಇದ್ದ ಇಮೇಲ್ ಐಡಿ, ಪಾಸ್ ವರ್ಡ್ ಗೊತ್ತಿಲ್ಲದೇ ಇದ್ದರೂ ಟೆಕ್ನಾಲಜಿಯಲ್ಲಿ ಆಟೋಮೆಟಿಕ್ ಪಾಸ್ ವರ್ಡ್ ಮೂಲಕ ಓಪನ್ ಆಗುತ್ತದೆ, ರೇಣುಕಾಸ್ವಾಮಿ ಜಿಮೇಲ್ ಖಾತೆ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ: ದರ್ಶನ್​ಗೆ ವಿಚಾರಣಾಧೀನ ಕೈದಿ ಸಂಖ್ಯೆ ಕೊಟ್ಟ ಪೊಲೀಸರು

ಜಿ ಮೇಲ್ ಖಾತೆ ತೆರೆದುಕೊಂಡ ಬಳಿಕ ಆತನ ಸಂಪರ್ಕ ಸಂಖ್ಯೆಗಳು ದೊರಕುತ್ತವೆ. ಅದಾದ ಬಳಿಕ ಆತನ ಸಾಮಾಜಿಕ ಜಾಲತಾಣಗಳು ತೆರೆದುಕೊಳ್ಳುತ್ತವೆ. ಆ ಮೂಲಕ ಆತ ಸಾಮಾಜಿಕ ಜಾಲತಾಣದ ಮೂಲಕ ಯಾರಿಗೆ ಸಂದೇಶ ಕಳಿಸಿದ್ದ, ಯಾರಿಗೆ ಕಳಿಸಿಲ್ಲ ಇತರೆ ಮಾಹಿತಿಗಳು ಬ್ಯಾಕಪ್ ಮಾಡಿದಾಗ ಪೊಲೀಸರಿಗೆ ತಿಳಿಯುತ್ತವೆ. ಸಂದೇಶ ಸ್ವೀಕರಿಸಿದವರು ಇವನಿಗೆ ಮರು ಸಂದೇಶ ಕಳಿಸಿದ್ದಾರೆಯೇ ಎಂಬುದು ಸಹ ಗೊತ್ತಾಗಲಿದೆ. ರೇಣುಕಾ ಸ್ವಾಮಿ ಮೊಬೈಲ್​ನಲ್ಲಿ ಇದ್ದ ಚಿತ್ರಗಳು, ವಿಡಿಯೋ ಇನ್ನಿತರೆ ಮಾಹಿತಿಗಳು ಸಹ ಸಿಗಲಿವೆ.

ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಕಳಿಸಿದ್ದ ಸಂದೇಶ, ಅದಕ್ಕೆ ಪ್ರತಿಕ್ರಿಯೆ ಏನಾದರೂ ಬಂದಿದೆಯೇ? ಎಂಬುದು ಸಹ ಗೊತ್ತಾಗಲಿದೆ. ಪವಿತ್ರಾ ಗೌಡಗೆ ಮಾತ್ರವೇ ಅಥವಾ ಬೇರೆ ಯಾವುದಾದರೂ ನಟಿಯರಿಗೆ ರೇಣುಕಾ ಸ್ವಾಮಿ ಸಂದೇಶ ಕಳಿಸಿದ್ದನೆ ಎಂಬುದು ಸಹ ತಿಳಿದು ಬರಲಿದೆ. ಪ್ರಕರಣದ ಆರೋಪಿ ರಾಘು ಮೊಬೈಲ್ ಅನ್ನು ಸಹ ಆರೋಪಿಗಳು ನಾಶ ಪಡಿಸಿದ್ದಾರೆ. ಈತನ ಮೊಬೈಲ್ ಸಿಮ್ ನ ಡ್ಯೂಪ್ಲಿಕೇಟ್ ಅನ್ನು ಸಹ ಪೊಲೀಸರು ಪಡೆದುಕೊಳ್ಳಲಿದ್ದಾರೆ. ರಾಘು, ಪಟ್ಟಣಗೆರೆ ಶೆಡ್​ನಲ್ಲಿ ನಡೆದ ಘಟನೆಯ ವಿಡಿಯೋ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಆ ವಿಡಿಯೋವನ್ನು ಬ್ಯಾಕ್ ಅಪ್ ಮಾಡುವ ಪ್ರಯತ್ನ ಮಾಡಲಿದ್ದಾರೆ.

ದರ್ಶನ್, ಪವಿತ್ರಾ, ವಿನಯ್, ಪ್ರದೋಶ್ ಇನ್ನಿತರೆ ಆರೋಪಿಗಳ ಮೊಬೈಲ್ ಡಾಟಾ ಅನ್ನು ಈಗಾಗಲೇ ಪೊಲೀಸರು ರಿಟ್ರೈವ್ ಮಾಡುತ್ತಿದ್ದಾರೆ. ದರ್ಶನ್ ಮೊಬೈಲ್ ತನಿಖೆಯಿಂದ ಕೆಲವು ಆತಂಕಕಾರಿ ವಿಷಯಗಳು ಹೊರಬಂದಿವೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ