ರೇಣುಕಾ ಸ್ವಾಮಿ ಪ್ರಕರಣ: ಆರೋಪಿಗಳು ಚಾಪೆ ಕೆಳಗೆ, ಪೊಲೀಸರು ರಂಗೋಲಿ ಕೆಳಗೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಂಧಿತ ಆರೋಪಿಗಳು ಕೆಲವರು ಮೊಬೈಲ್​ನಲ್ಲಿದ್ದ ಸಾಕ್ಷ್ಯವನ್ನು ನಾಶ ಮಾಡಿದ್ದಾರೆ. ಆದರೆ ಪೊಲೀಸರು ಡಿಜಿಟಲ್ ಸಾಕ್ಷ್ಯದ ಬೆನ್ನುಬಿದ್ದಿದ್ದು ಹೊಸ ತಂತ್ರಜ್ಞಾನಗಳನ್ನು ಬಳಸಿ ಡಾಟಾ ಪಡೆಯುವ ಯತ್ನ ನಡೆಸಿದ್ದಾರೆ.

ರೇಣುಕಾ ಸ್ವಾಮಿ ಪ್ರಕರಣ: ಆರೋಪಿಗಳು ಚಾಪೆ ಕೆಳಗೆ, ಪೊಲೀಸರು ರಂಗೋಲಿ ಕೆಳಗೆ
ದರ್ಶನ್-ರೇಣುಕಾ
Follow us
ಮಂಜುನಾಥ ಸಿ.
|

Updated on:Jun 23, 2024 | 12:43 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ಝಟಿಲವಾಗುತ್ತಾ ಸಾಗುತ್ತಿದೆ. ರೇಣುಕಾ ಸ್ವಾಮಿಯನ್ನು ಹಲವರು ಸೇರಿ ಹತ್ಯೆ ಮಾಡಿರುವುದು ತಿಳಿದಿದೆಯಾದರೂ, ಯಾರ ಪಾತ್ರ ಏನು? ನಿರ್ದಿಷ್ಟವಾಗಿ ರೇಣುಕಾ ಸ್ವಾಮಿಯ ಜೀವ ತೆಗೆದವರ್ಯಾರು? ಜೀವ ತೆಗೆಯಲು ಆದೇಶಿಸಿದವರ್ಯಾರು? ಹತ್ಯೆ ಆದಾಗ ಯಾರ್ಯಾರಿದ್ದರು, ಯಾರು ಯಾರಿಗೆಲ್ಲ ಕೊಲೆಯ ಮಾಹಿತಿ ಇತ್ತು, ಕೊಲೆಯ ಮುಚ್ಚಿ ಹಾಕುವ ಪ್ರಯತ್ನ ನಡೆದಿದ್ದು ಯಾರಿಂದ ಮತ್ತು ಹೇಗೆ? ಇನ್ನೂ ಹಲವು ವಿಷಯಗಳು ಸ್ಪಷ್ಟವಾಗಿ ಬಹಿರಂಗವಾಗಬೇಕಿದೆ. ಈ ಕುರಿತು ಪೊಲೀಸರು ಈಗಾಗಲೇ ಹಲವು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದಾರೆ. ಆದರೆ ಆರೋಪಿಗಳು ಸಹ ಬುದ್ಧಿ ಉಪಯೋಗಿಸಿ ಕೆಲ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ. ಆದರೆ ಈಗ ಪೊಲೀಸರು ಕೆಲವು ಪ್ರಮುಖ ಸಾಕ್ಷ್ಯಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದಾರೆ.

ಇತ್ತೀಚೆಗಿನ ಯಾವುದೇ ಅಪರಾಧ ಪ್ರಕರಣದಲ್ಲಿ ಮೊಬೈಲ್ ಬಹಳ ಪ್ರಮುಖ ಪಾತ್ರವಹಿಸುತ್ತಿದೆ. ಮೊಬೈಲ್​ನ ಡಿಜಿಟಲ್ ಸಾಕ್ಷ್ಯ ಅತ್ಯಂತ ಪ್ರಮುಖವಾಗಿದೆ. ಇದನ್ನು ಮೊದಲೇ ಅರಿತಿದ್ದ ಆರೋಪಿಗಳು ಕೆಲವರು ತಮ್ಮ ಮೊಬೈಲ್​ಗಳಿಂದ ಡಾಟಾ ಅಳಿಸಿ ಹಾಕಿದ್ದಾರೆ. ಸಂತ್ರಸ್ತ ರೇಣುಕಾ ಸ್ವಾಮಿಯ ಮೊಬೈಲ್ ಸೇರಿದಂತೆ ಕೆಲವು ಮಹತ್ವದ ಸಾಕ್ಷ್ಯಗಳಿದ್ದ ರಘು ಮೊಬೈಲ್ ಅನ್ನು ಕಾಣದಂತೆ ಮಾಡಿದ್ದಾರೆ. ಇದು ಪೊಲೀಸರಿಗೆ ಸಮಸ್ಯೆ ಆಗಿತ್ತು. ಆದರೆ ಈಗ ಪೊಲೀಸರು ಹೊಸ ಹಾದಿಯನ್ನು ಹುಡುಕಿಕೊಂಡಿದ್ದಾರೆ.

ಎಲ್ಲ ಆರೋಪಿಗಳ ಮೊಬೈಲ್ ಅನ್ನು ಪರಿಶೀಲಿಸಲು ಪೊಲೀಸರು ನ್ಯಾಯಾಲಯದ ಅನುಮತಿ ಕೇಳಿದ್ದರು, ಅಂತೆಯೇ ನ್ಯಾಯಾಲಯ ಅನುಮತಿ ನೀಡಿದೆ. ಈಗ ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿರುವ ಮೊಬೈಲ್​ಗಳ ಡಾಟಾ ರಿಟ್ರೀವ್ ಮಾಡಲು ಪೊಲೀಸರು ಮುಂದಾಗಿದ್ದು, ಅವರಿಗೆ ಕೆಲವು ಸಮಸ್ಯೆಗಳು ಎದುರಾಗಿವೆ. ಆರೋಪಿಗಳಲ್ಲಿ ಕೆಲವರು ವೆಬ್ ಅಪ್ಲಿಕೇಶನ್ ಬಳಸಿ ಡಾಟಾ ಅಳಿಸಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಡಿಲೀಟ್ ಆಗಿರುವ ಡಾಟಾ ಅನ್ನು ಮರಳಿ ಪಡೆಯುವ ಕುರಿತು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ:ದರ್ಶನ್ ಬೆಂಬಲಿಸುವವರು, ರೇಣುಕಾ ಸ್ವಾಮಿ ತಂದೆಯ ಪ್ರಶ್ನೆಗೆ ಉತ್ತರಿಸುವರೇ?

ಪಂಚರ ಸಮ್ಮುಖದಲ್ಲಿಯೇ ಮೊಬೈಲ್​ಗಳನ್ನು ತೆಗೆದು ಪರಿಶೀಲನೆ ನಡೆಸಲಾಗುತ್ತದೆ. ಇನ್ನು ರಾಘು, ರೇಣುಕಾ ಸ್ವಾಮಿ ಹಾಗೂ ಇನ್ನು ಕೆಲವರ ಮೊಬೈಲ್​ಗಳನ್ನು ನಾಶ ಮಾಡಲಾಗಿದೆ. ಅವರ ಮೊಬೈಲ್ ಡಾಟಾ ಪಡೆಯಲು, ಪೊಲೀಸರು ಅವರ ಮೊಬೈಲ್​ ನಂಬರ್​ನಲ್ಲಿ ಹೊಸ ಸಿಮ್​ಗಳನ್ನು ಖರೀದಿಸಿ ಆಕ್ಟಿವ್ ಮಾಡಲಿದ್ದಾರೆ. ಹಾಗೂ ಸರ್ವೀಸ್ ಪ್ರೊವೈಡರ್​ಗಳ ನೆರವು ಪಡೆದು ಕರೆ ಮಾಹಿತಿಯನ್ನು ತರಿಸಿಕೊಳ್ಳಲಿದ್ದಾರೆ. ಆದರೆ ರಾಘು ಮೊಬೈಲ್​ನಲ್ಲಿ ಘಟನೆಯ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು ಎನ್ನಲಾಗಿದೆ. ಇದನ್ನು ಪೊಲೀಸರು ಹೇಗೆ ಮರಳಿ ಪಡೆದುಕೊಳ್ಳುತ್ತಾರೆ ಎಂಬುದು ಕುತೂಹಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Sun, 23 June 24

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು