AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಬೆಂಬಲಿಸುವವರು, ರೇಣುಕಾ ಸ್ವಾಮಿ ತಂದೆಯ ಪ್ರಶ್ನೆಗೆ ಉತ್ತರಿಸುವರೇ?

ದರ್ಶನ್ ಬೆಂಬಲಿಸುವವರು, ರೇಣುಕಾ ಸ್ವಾಮಿ ತಂದೆಯ ಪ್ರಶ್ನೆಗೆ ಉತ್ತರಿಸುವರೇ?

ಮಂಜುನಾಥ ಸಿ.
|

Updated on:Jun 22, 2024 | 9:26 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರೇಣುಕಾ ಸ್ವಾಮಿ ಕೊಲೆಯಲ್ಲಿ ದರ್ಶನ್ ಪಾತ್ರಿವದೆ ಎಂಬುದಕ್ಕೆ ಸಮರ್ಥನೀಯ ಸಾಕ್ಷ್ಯಗಳು ಸಾಕಷ್ಟು ದೊರೆತಿವೆ. ಹಾಗಿದ್ದರೂ ಕೆಲವರು ದರ್ಶನ್ ಮಾಡಿದ್ದು ಸರಿ ಎನ್ನುತ್ತಿದ್ದಾರೆ. ಅಂಥಹವರಿಗೆ ಕೊಲೆಯಾದ ರೇಣುಕಾ ಸ್ವಾಮಿಯ ತಂದೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಮತ್ತು ಗ್ಯಾಂಗ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ದರ್ಶನ್ ಹಾಗೂ ಸಂಗಡಿಗರು ರೇಣುಕಾ ಸ್ವಾಮಿ ಸಾವಿಗೆ ಕಾರಣರಾಗಿದ್ದಾರೆ ಎಂಬುದಕ್ಕೆ ಸಮರ್ಥನೀಯ ಸಾಕ್ಷ್ಯಗಳು ಸಾಕಷ್ಟು ದೊರಕಿವೆ. ಆದರೆ ಈಗಲೂ ಸಹ ಕೆಲವರು ವಿಶೇಷವಾಗಿ ದರ್ಶನ್​ರ ಅಭಿಮಾನಿಗಳು ಎಂದು ಹೇಳಿಕೊಳ್ಳುವವರು ದರ್ಶನ್​ರ ಬೆನ್ನಿಗೆ ನಿಂತಿದ್ದಾರೆ. ದರ್ಶನ್​ರನ್ನು ಬೆಂಬಲಿಸುವುದು ಒಂದು ವಿಷಯವಾದರೆ ಸಂತ್ರಸ್ತನ ಪರ ಸಣ್ಣ ಕರುಣೆಯೂ ಇಲ್ಲದಂತೆ ಮಾತನಾಡುತ್ತಿದ್ದಾರೆ. ಕೆಲವರಂತೂ ದರ್ಶನ್ ಏನು ಮಾಡಿದರೂ ಸೈ ಎನ್ನುತ್ತಿದ್ದಾರೆ. ‘ದುಷ್ಟತನವೇ ಹೀರೋಯಿಸಂ’ ಎಂಬಂಥ ಸ್ಥಿತಿ ನಿರ್ಮಿಸುತ್ತಿದ್ದಾರೆ. ಇಂದು ದರ್ಶನ್ ನ್ಯಾಯಾಂಗ ಬಂಧನಕ್ಕೆ ಒಳಗಾದ ಬಳಿಕ ರೇಣುಕಾ ಸ್ವಾಮಿಯ ತಂದೆ ಮಾತನಾಡಿದ್ದಾರೆ. ಇಷ್ಟಾದರೂ ದರ್ಶನ್​ ಮಾಡಿದ್ದು ಸರಿ ಎನ್ನುವವರಿಗೆ ಒಂದೇ ಒಂದು ಪ್ರಶ್ನೆ ಕೇಳಿದ್ದಾರೆ, ಉತ್ತರಿಸಬಲ್ಲರೇ ಅಭಿಮಾನಿಗಳು?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 22, 2024 09:21 PM