ದರ್ಶನ್​ ನ್ಯಾಯಾಂಗ ಬಂಧನ: ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು ಎಂದ ರೇಣುಕಾಸ್ವಾಮಿ ತಂದೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಜೈಲುಪಾಲಾಗುತ್ತಿದ್ದಂತೆ ರೇಣುಕಾಸ್ವಾಮಿ ತಂದೆ ಮಾತನಾಡಿದ್ದು, ಪೊಲೀಸರ ನ್ಯಾಯಯುತ ಶ್ರಮದಿಂದ ದರ್ಶನ್‌ ಜೈಲುಪಾಲಾಗಿದ್ದಾರೆ. ನನ್ನ ಮಗ ಅನುಭವಿಸಿದ ನೋವಿನ ಶಿಕ್ಷೆ ಆರೋಪಿಗಳಿಗೂ ಆಗಬೇಕು. ಜೈಲು ಶಿಕ್ಷೆ, ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು. ದರ್ಶನ್ ಅಭಿಮಾನಿಗಳು ನಮ್ಮ ಸ್ಥಾನದಲ್ಲಿದ್ದು ಯೋಚಿಸಲಿ. ಕುರುಡು ಅಭಿಮಾನದಿಂದ ಬೆಂಬಲ ಬೇಡ ಎಂದಿದ್ದಾರೆ.

ದರ್ಶನ್​ ನ್ಯಾಯಾಂಗ ಬಂಧನ: ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು ಎಂದ ರೇಣುಕಾಸ್ವಾಮಿ ತಂದೆ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 22, 2024 | 8:54 PM

ಚಿತ್ರದುರ್ಗ, ಜೂನ್​ 22: ನಟ ದರ್ಶನ್ (Darshan) ಮತ್ತು ಗ್ಯಾಂಗ್​ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ದರ್ಶನ್​ ಜೈಲು ಸೇರಿದ್ದಾರೆ. ಈ ವಿಚಾರವಾಗಿ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ (Renukaswamy) ತಂದೆ ಕಾಶಿನಾಥಯ್ಯ ಪ್ರತಿಕ್ರಿಯಿಸಿದ್ದು, ಪೊಲೀಸರ ನ್ಯಾಯಯುತ ಶ್ರಮದಿಂದ ದರ್ಶನ್‌ ಜೈಲುಪಾಲಾಗಿದ್ದಾರೆ. ನನ್ನ ಮಗ ಅನುಭವಿಸಿದ ನೋವಿನ ಶಿಕ್ಷೆ ಆರೋಪಿಗಳಿಗೂ ಆಗಬೇಕು. ಜೈಲು ಶಿಕ್ಷೆ, ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು ಎಂದಿದ್ದಾರೆ. ನನ್ನ ಮಗ ರೇಣುಕಾಸ್ವಾಮಿಗೆ ಯಾವ ರೀತಿ ಗಾಯಗಳು ಆಗಿದ್ದವೋ ಅದೇ ರೀತಿ ಗಾಯ ಆಗಬೇಕು, ವಿದ್ಯುತ್ ಶಾಕ್ ಶಿಕ್ಷೆ ಆಗಬೇಕು. ಏನೆಲ್ಲಾ ಬಳಸಿ ಹಲ್ಲೆ ಮಾಡಿದ್ದಾರೋ ಅದೇ ರೀತಿ ಹೊಡೆಯಬೇಕು. ಸಾರ್ವಜನಿಕ ಸ್ಥಳದಲ್ಲಿ ಕಲ್ಲಿನಿಂದ ಹೊಡೆದು ಸಾಯಿಸಬೇಕೆಂದು ಆಕ್ರೋಶಗೊಂಡರು. ನಮ್ಮ ಇಡೀ ಕುಟುಂಬಕ್ಕೆ ಮಾನಸಿಕ ಹಿಂಸೆ ಆಗಿದೆ. ನಟ ದರ್ಶನ್ ಅಭಿಮಾನಿಗಳು ನಮ್ಮ ಸ್ಥಾನದಲ್ಲಿದ್ದು ಯೋಚಿಸಲಿ. ಕುರುಡು ಅಭಿಮಾನದಿಂದ ಬೆಂಬಲ ಬೇಡ. ಕೊಲೆ ಆರೋಪಿಯನ್ನು ದೇವರಂತೆ ಬಿಂಬಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ. ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಗಲ್ಲವೆಂಬ ನಂಬಿಕೆಯಿದೆ. ಆರೋಪಿಗೆ ತಕ್ಕ ಶಿಕ್ಷೆ ಕೊಡಿಸುತ್ತಾರೆಂಬ ನಂಬಿಕೆಯಿದೆ. ನ್ಯಾಯಾಂಗ ವ್ಯವಸ್ಥೆ, ಸರ್ಕಾರ, ಪೊಲೀಸರ ಮೇಲೆ ನಂಬಿಕೆಯಿದೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ