ಲೈಂಗಿಕ ದೌರ್ಜನ್ಯ ಆರೋಪ; ಸೂರಜ್​ ರೇವಣ್ಣರನ್ನ ಠಾಣೆಗೆ ಕರೆತಂದ ಪೊಲೀಸರು

ಲೈಂಗಿಕ ದೌರ್ಜನ್ಯ ಆರೋಪ; ಸೂರಜ್​ ರೇವಣ್ಣರನ್ನ ಠಾಣೆಗೆ ಕರೆತಂದ ಪೊಲೀಸರು

ಕಿರಣ್ ಹನುಮಂತ್​ ಮಾದಾರ್
|

Updated on:Jun 22, 2024 | 8:17 PM

Suraj Revanna case: ಸೂರಜ್ ರೇವಣ್ಣ​ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಸ್​ಗೆ ಸಂಬಂಧಪಟ್ಟಂತೆ ಹಾಸನದ ಸಿಇಎನ್ ಠಾಣೆಗೆ ವಿಧಾನಪರಿಷತ್​ನ ಜೆಡಿಎಸ್ ಸದಸ್ಯ ಡಾ.ಸೂರಜ್ ರೇವಣ್ಣ ಅವರನ್ನು ಇಂದು(ಶನಿವಾರ) ಪೊಲೀಸರು ಕರೆತಂದಿದ್ದಾರೆ.

ಹಾಸನ, ಜೂ.22: ಸೂರಜ್ ರೇವಣ್ಣ​ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಸ್​ಗೆ ಸಂಬಂಧಪಟ್ಟಂತೆ ಹಾಸನದ ಸಿಇಎನ್ ಠಾಣೆಗೆ ವಿಧಾನಪರಿಷತ್​ನ ಜೆಡಿಎಸ್ ಸದಸ್ಯ ಡಾ.ಸೂರಜ್ ರೇವಣ್ಣ ಅವರನ್ನು ಇಂದು(ಶನಿವಾರ) ಪೊಲೀಸರು ಕರೆತಂದಿದ್ದಾರೆ. ಪ್ರಕರಣ ಸಂಬಂಧ ತಾಂತ್ರಿಕ ಸಾಕ್ಷ್ಯ ಸಂಗ್ರಹಕ್ಕಾಗಿ ಸಿಇಎನ್ ಠಾಣೆಗೆ ಕರೆತಂದಿದ್ದು, ಮೊಬೈಲ್ ಆಡಿಯೋ ರಿಕವರಿ ಮಾಡಲಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತೇನೆ ಎಂದು ಐದು ಕೋಟಿ ಹಣಕ್ಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ್ದ ಬಗ್ಗೆ ಆರೋಪ ಮಾಡಲಾಗಿತ್ತು. ಈ ಕುರಿತು ಸಂತ್ರಸ್ತನ ವಿರುದ್ಧ ನಿನ್ನೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದೂರು ನೀಡುವ ಮುನ್ನ ಡಾ.ಸೂರಜ್‌ ರೇವಣ್ಣ ಅವರಿಗೆ ಸಂತ್ರಸ್ಥ ಕರೆ ಮಾಡಿದ್ದ, ಸಂತ್ರಸ್ತ ಮಾತನಾಡಿರುವ ಆಡಿಯೋ ತಮ್ಮ ಬಳಿ ಇರುವ ಬಗ್ಗೆ ಮಾಹಿತಿ ಸೂರಜ್​ ಪೊಲೀಸರಿಗೆ ನೀಡಿದ್ದರು. ಈ ಹಿನ್ನಲೆ ಆಡಿಯೋ ರಿಕವರಿಗಾಗಿ ಸೂರಜ್‌ ರೇವಣ್ಣ ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ.

ರಾಜ್ಯದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 22, 2024 08:12 PM