ನಟ ದರ್ಶನ್ ರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದಾಗ ಗೆಲುವಿನ ನಗೆ ಬೀರಿದ್ದು ಅವರನ್ನು ಬಂಧಿಸಿದ್ದ ಎಸಿಪಿ ಚಂದನ್!

ನಟ ದರ್ಶನ್ ರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದಾಗ ಗೆಲುವಿನ ನಗೆ ಬೀರಿದ್ದು ಅವರನ್ನು ಬಂಧಿಸಿದ್ದ ಎಸಿಪಿ ಚಂದನ್!

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 22, 2024 | 7:55 PM

ಎಸಿಪಿ ಚಂದನ್ ನಿಸ್ಸಂದೇಹವಾಗಿ ರಾಜ್ಯದ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಅಸಲಿಗೆ ಅವರು ಇವತ್ತು ಹೀಗೆ ಗೆಲುವಿನ ನಗೆ ಬೀರಲು ಕಾರಣವಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿ ನಂಬರ್ 2 ಆಗಿರುವ ನಟ ದರ್ಶನ್ ಪಾತ್ರವನ್ನು ಮೊದಲು ಗುರುತಿಸಿದ್ದು ಮತ್ತು ಅವರನ್ನು ಬಂಧಿಸಿದ್ದು ಎಸಿಪಿ ಚಂದನ್.

ಬೆಂಗಳೂರು: ಕ್ರಿಕೆಟ್ ನಲ್ಲಿ ಬ್ಯಾಟರ್ ನೊಬ್ಬ (batter) ಗೆಲುವಿನ ರನ್ ಬಾರಿಸಿದಾಗ, ಶತಕ ಬಾರಿಸಿದಾಗ ಅಥವಾ ಒಬ್ಬ ಬೌಲರ್ 5 ವಿಕೆಟ್ ಪಡೆಯುವ ಸಾಧನೆ ಮಾಡಿದಾಗ ಅವನ ಮುಖದಲ್ಲಿ ಗೆಲುವಿನ ನಗೆ ಅಥವಾ ಮಂದಹಾಸವನ್ನು ನಾವು ನೋಡುತ್ತೇವೆ. ಮಹತ್ತರವಾದ ಸಾಧನೆ ಮಾಡಿದ ತೃಪ್ತಿ ಆ ನಗುವಿನಲ್ಲಿ ನಿಚ್ಚಳವಾಗಿ ಕಾಣಿಸುತ್ತದೆ. ಅಂಥದ್ದೇ ಗೆಲುವಿನ ನಗುವನ್ನು ವಿಡಿಯೋದ ಬಲಭಾಗದಲ್ಲಿ ನಡೆದು ಬರುತ್ತಿರುವ ಸಹಾಯಕ ಪೊಲೀಸ್ ಕಮೀಶನರ್ ಚಂದನ್ (ACP Chandan) ಅವರ ಮೊಗದಲ್ಲಿ ಕಾಣಬಹುದು. ಎಸಿಪಿ ಚಂದನ್ ನಿಸ್ಸಂದೇಹವಾಗಿ ರಾಜ್ಯದ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ (sincere officer) ಅಧಿಕಾರಿಗಳಲ್ಲಿ ಒಬ್ಬರು. ಅಸಲಿಗೆ ಅವರು ಇವತ್ತು ಹೀಗೆ ಗೆಲುವಿನ ನಗೆ ಬೀರಲು ಕಾರಣವಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೋಪಿ ನಂಬರ್ 2 ಆಗಿರುವ ನಟ ದರ್ಶನ್ ಪಾತ್ರವನ್ನು ಮೊದಲು ಗುರುತಿಸಿದ್ದು ಮತ್ತು ಅವರನ್ನು ಬಂಧಿಸಿದ್ದು ಎಸಿಪಿ ಚಂದನ್.

ಸ್ಯಾಂಡಲ್ ವುಡ್ ನ ಅತ್ಯಂತ ಜನಪ್ರಿಯ ನಾಯಕ ನಟರಲ್ಲಿ ಒಬ್ಬರಾಗಿರುವ ದರ್ಶನ್ ರನ್ನು ಬಂಧಿಸುವುದು ಸುಲಭವಾಗಿರಲಿಲ್ಲ. ಆದರೆ, ಚಂದನ್ ಅವರು ದರ್ಶನ್ ರನ್ನು ಬಂಧಿಸಿ ಜೈಲಿಗೆ ಕರೆತಂದರು. ನಟ ತನ್ನ ವಶೀಲಿ ಮತ್ತು ಪ್ರಭಾವ ಬಳಸಿ ಜಾಮೀನು ಪಡೆದು ಹೊರಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿರಲಿಲ್ಲ. ಆದರೆ ಅದು ಸಾದ್ಯವಾಗದೆ ನ್ಯಾಯಾಲಯವು ಅವರಿಗೆ 14-ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದಾಗ ಎಸಿಪಿ ಅವರ ಶ್ರಮ ಸಾರ್ಥಕವಾಗಿತ್ತು, ಹಾಗಾಗೇ ಈ ಗೆಲುವಿನ ನಗೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Pavithra Gowda Detained: ನಟ ದರ್ಶನ್ ಗೆಳತಿ ಪವಿತ್ರಾಗೌಡ ಪೊಲೀಸರ ವಶಕ್ಕೆ

Published on: Jun 22, 2024 07:44 PM