ರಾಜಕೀಯ ಅನಿಶ್ಚಿತ, ಹಾಗಾಗಿ ಪಾಠ ಮಾಡುವುದೇ ನನ್ನ ಮೂಲ ಕಸುಬು: ಪ್ರದೀಪ್ ಈಶ್ವರ್
ರಾಜಕಾರಣದಲ್ಲಿ ಎಲ್ಲವೂ ಅನಿಶ್ಚಿತ, ನಾಳೆ ಏನಾಗುತ್ತೋ ಅಂತ ಗೊತ್ತಿರಲ್ಲ, ಹಾಗಾಗಿ ತನ್ನ ಮೂಲ ಕಸುಬು ಪಾಠ ಮಾಡೋದು, ಇದನ್ನು ಮಾತ್ರ ಯಾವತ್ತೂ ನಿಲ್ಲಿಸಲ್ಲ ಎಂದು ಪ್ರದೀಪ್ ಹೇಳುತ್ತಾರೆ. ಕಾರ್ಮಿಕರ, ಬಡವರ, ಆಟೋ ಚಾಲಕರ ಮಕ್ಕಳು ನೀಟ್ ಪರೀಕ್ಷೆಯಲ್ಲಿ ಟಾಪರ್ ಗಳಾಗಿದ್ದು ಧನ್ಯತೆಯ ಭಾವ ಮೂಡಿಸಿದೆ ಎಂದು ಶಾಸಕ ಹೇಳಿದರು.
ಬೆಂಗಳೂರು: ರಾಜಕೀಯ ಅದರಲ್ಲೂ ವಿಶೇಷವಾಗಿ ಸಂಸದ ಡಾ ಕೆ ಸುಧಾಕರ್ (Dr K Sudhakar) ಬಗ್ಗೆ ಮಾತಾಡುವಾಗ ಕೆಲವೊಮ್ಮೆ ಅತಿರೇಕ ಪ್ರದರ್ಶಿಸುವ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಅವರ ಪರಿಶ್ರಮ ಅಕಾಡೆಮಿ (Parishrama Academy) ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಬಾರಿಯ ನೀಟ್ (NEET) ಪರೀಕ್ಷೆಯಲ್ಲಿ ಪರಿಶ್ರಮ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದ 950 ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಗಿಟ್ಟಿಸಿದ್ದಾರೆ! ಇದು ನಿಜಕ್ಕೂ ಅಮೋಘ ಸಾಧನೆ ಮಾರಾಯ್ರೇ. ಇವತ್ತು ಬೆಂಗಳೂರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿದರು.
ಕಾರ್ಯಕ್ರಮದ ಸೈಡ್ ಲೈನ್ ನಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಪ್ರದೀಪ್ ಈಶ್ವರ್ ಮುಂದೊಂದು ದಿನ ಕರ್ನಾಟಕದಿಂದ ವೈದ್ಯಕೀಯ ಸೀಟು ಗಿಟ್ಟಿಸುವ ವಿದ್ಯಾರ್ಥಿಗಳೆಲ್ಲ ತಮ್ಮ ಪರಿಶ್ರಮ ಅಕಾಡೆಮಿಯವರಾಗಿರಬೇಕೆಂಬ ಮಹದಾಸೆ ತಾನಿಟ್ಟುಕೊಂಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಅವರು ರಾಜಕೀಯ ಕುರಿತಂತೆ ವೈರಾಗ್ಯದ ಮಾತುಗಳನ್ನಾಡಿದ್ದು ಆಶ್ಚರ್ಯ ಹುಟ್ಟಿಸಿತು.
ರಾಜಕಾರಣದಲ್ಲಿ ಎಲ್ಲವೂ ಅನಿಶ್ಚಿತ, ನಾಳೆ ಏನಾಗುತ್ತೋ ಅಂತ ಗೊತ್ತಿರಲ್ಲ, ಹಾಗಾಗಿ ತನ್ನ ಮೂಲ ಕಸುಬು ಪಾಠ ಮಾಡೋದು, ಇದನ್ನು ಮಾತ್ರ ಯಾವತ್ತೂ ನಿಲ್ಲಿಸಲ್ಲ ಎಂದು ಪ್ರದೀಪ್ ಹೇಳುತ್ತಾರೆ. ಕಾರ್ಮಿಕರ, ಬಡವರ, ಆಟೋ ಚಾಲಕರ ಮಕ್ಕಳು ನೀಟ್ ಪರೀಕ್ಷೆಯಲ್ಲಿ ಟಾಪರ್ ಗಳಾಗಿದ್ದು ಧನ್ಯತೆಯ ಭಾವ ಮೂಡಿಸಿದೆ ಎಂದು ಶಾಸಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SSLC ಫಲಿತಾಂಶದಲ್ಲಿ ಪ್ರದೀಪ್ ಈಶ್ವರ್ ದತ್ತು ಪಡೆದ ವಿದ್ಯಾರ್ಥಿಗಳ ಮೇಲುಗೈ; ಸನ್ಮಾನ ಮಾಡಿ ಶುಭ ಹಾರೈಕೆ