ಸದ್ಯ ಬಾಕ್ಸಾಫೀಸ್ನಲ್ಲಿ ‘ಆರ್ಆರ್ಆರ್’ (RRR Box Office Collection) ಸರ್ವಾಧಿಪತ್ಯ ಮುಂದುವರೆದಿದೆ. ವಿಶೇಷವೆಂದರೆ ಉತ್ತರ ಭಾರತದಲ್ಲಿ ಇತ್ತೀಚೆಗೆ ತೆರೆಕಂಡ ಹಿಂದಿ ಚಿತ್ರಗಳು ಮಕಾಡೆ ಮಲಗಿವೆ. ಆದರೆ ‘ಆರ್ಆರ್ಆರ್’ ಮಾತ್ರ ಭರ್ಜರಿ ಗೆಲುವು ಸಾಧಿಸಿದೆ. ಇದರಿಂದ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ‘ಬಾಹುಬಲಿ 2’ ಚಿತ್ರದ ನಂತರ ರಾಜಮೌಳಿ (Rajamouli) ಚಿತ್ರದ ಬಗ್ಗೆ ದೇಶದೆಲ್ಲೆಡೆ ಅಪಾರ ನಿರೀಕ್ಷೆ ಮೂಡಿತ್ತು. ಅದನ್ನು ತಲುಪುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದಾರೆ. ರಾಮ್ ಚರಣ್ (Ram Charan) ಹಾಗೂ ಜ್ಯೂ.ಎನ್ಟಿಆರ್ (Jr NTR) ನಟಿಸಿರುವ ಚಿತ್ರ ಗಳಿಕೆಯಲ್ಲಿ ಹಲವು ಸ್ಟಾರ್ ನಟರ ದಾಖಲೆಯನ್ನು ಧೂಳೀಪಟ ಮಾಡಿದೆ. ಕೇವಲ 11 ದಿನದಲ್ಲಿ 900 ಕೋಟಿ ಕ್ಲಬ್ ಸೇರಿಕೊಂಡಿದೆ ‘ಆರ್ಆರ್ಆರ್’. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಮೊದಲಾದ ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದರಿಂದ ಸಹಜವಾಗಿಯೇ ‘ಆರ್ಆರ್ಆರ್’ ಬಗ್ಗೆ ಹಿಂದಿ ಚಿತ್ರಪ್ರೇಮಿಗಳು ಕುತೂಹಲಗೊಂಡಿದ್ದರು. ದೇಶಭಕ್ತಿಯ ಕತೆಯನ್ನು ಚಿತ್ರ ಹೊಂದಿರುವುದರಿಂದ ಸಹಜವಾಗಿಯೇ ಚಿತ್ರ ಎಲ್ಲರಿಗೂ ಕನೆಕ್ಟ್ ಆಗಿದೆ. ಪರಿಣಾಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ‘ಆರ್ಆರ್ಆರ್’ ನಾಗಾಲೋಟ ಮುಂದುವರೆದಿದೆ.
ಸದ್ಯ ‘ಆರ್ಆರ್ಆರ್’ಗಿಂತ ಹೆಚ್ಚು ಗಳಿಸಿದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಬೆರಳಣಿಕೆಯಷ್ಟು. ದಂಗಲ್, ಬಾಹುಬಲಿ 2, ಭಜರಂಗಿ ಭಾಯಿಜಾನ್ ಹಾಗೂ ಸೀಕ್ರೆಟ್ ಸೂಪರ್ಸ್ಟಾರ್ ಚಿತ್ರಗಳು ಮಾತ್ರ ‘ಆರ್ಆರ್ಆರ್’ಗಿಂತ ಮುಂದಿವೆ. ರಾಜಮೌಳಿ ನಿರ್ದೇಶನದ ಚಿತ್ರ ತೆರೆಕಂಡು ಕೇವಲ 11 ದಿನಗಳಾಗಿರುವುದಷ್ಟೇ. ಸದ್ಯಕ್ಕೆ ಏಪ್ರಿಲ್ 13-14ರವರೆಗೆ ದೊಡ್ಡ ಪ್ಯಾನ್ ಇಂಡಿಯಾ ಚಿತ್ರಗಳೂ ತೆರೆಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ‘ಆರ್ಆರ್ಆರ್’ ಮತ್ತಷ್ಟು ಗಳಿಕೆ ಮಾಡಲಿದ್ದು, ಒಟ್ಟಾರೆ ಎಷ್ಟು ಗಳಿಸಲಿದೆ ಎನ್ನುವುದು ಸದ್ಯದ ಕುತೂಹಲ.
ಬಾಕ್ಸಾಫೀಸ್ ವಿಶ್ಲೇಷಕರ ಪ್ರಕಾರ ‘ಆರ್ಆರ್ಆರ್’ ಗಳಿಕೆಯ ಓಟ ನೋಡಿದರೆ ಕೆಲವೇ ದಿನದಲ್ಲಿ ‘ಭಜರಂಗಿ ಭಾಯಿಜಾನ್’ ಹಾಗೂ ‘ಸೀಕ್ರೆಟ್ ಸೂಪರ್ಸ್ಟಾರ್’ ದಾಖಲೆಗಳು ಮುರಿಯಲಿವೆ. ಎರಡನೇ ವಾರದ ಮುಕ್ತಾಯದ ಒಳಗೆ ಚಿತ್ರವು 1000 ಕೋಟಿ ಕ್ಲಬ್ ಸೇರುವ ನಿರೀಕ್ಷೆ ಇದೆ. ಬಾಕ್ಸಾಫೀಸ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಪ್ರಕಾರ ‘ಆರ್ಆರ್ಆರ್’ ಚಿತ್ರದ ಇದುವರೆಗಿನ ಗಳಿಕೆ ಬರೋಬ್ಬರಿ ₹ 921 ಕೋಟಿ ರೂಗಳು. ಆರ್ಆರ್ಆರ್ ಬಾಕ್ಸಾಫೀಸ್ ಲೆಕ್ಕಾಚಾರ ಇಲ್ಲಿದೆ.
‘ಆರ್ಆರ್ಆರ್’ ಮೊದಲ ವಾರದ ಗಳಿಕೆ 709.36 ಕೋಟಿ ರೂಗಳು. ಎರಡನೇ ವಾರದ- ಮೊದಲ ದಿನ ₹ 41.53 cr, ಎರಡನೇ ದಿನ ₹ 68.17 cr, ಮೂರನೇ ದಿನ- ₹ 82.40 cr, ನಾಲ್ಕನೇ ದಿನ- ₹ 20.34 cr ಮೂಲಕ ಒಟ್ಟು ₹ 921.80 ಕೋಟಿ ರೂಗಳನ್ನು ‘ಆರ್ಆರ್ಆರ್’ ಬಾಚಿಕೊಂಡಿದೆ.
ಈ ಕುರಿತ ಟ್ವೀಟ್ ಇಲ್ಲಿದೆ:
#RRR WW Box Office
Week 1 – ₹ 709.36 cr
Week 2
Day 1 – ₹ 41.53 cr
Day 2 – ₹ 68.17 cr
Day 3 – ₹ 82.40 cr
Day 4 – ₹ 20.34 cr
Total – ₹ 921.80 cr— Manobala Vijayabalan (@ManobalaV) April 5, 2022
‘ಆರ್ಆರ್ಆರ್’ ಸಿನಿಮಾದಲ್ಲಿ ನೈಜ ಕತೆಯನ್ನು ಆಧರಿಸಿ ತಯಾರಾಗಿದೆ. ಸುಮಾರು 500 ಕೋಟಿ ರೂ ವೆಚ್ಚದಲ್ಲಿ ಚಿತ್ರ ತಯಾರಾಗಿದ್ದು, ಜನರ ಪ್ರತಿಕ್ರಿಯೆ ನಿರ್ಮಾಪಕರ ಮುಖದಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: Rashmika Mandanna: ಪಡ್ಡೆ ಹುಡುಗರ ನಿದ್ದೆಗೆಡಿಸುವ ರಶ್ಮಿಕಾ ಮಂದಣ್ಣ; ಇಲ್ಲಿವೆ ನಟಿಯ ಬೋಲ್ಡ್ ಫೋಟೋಗಳು
ಸೀಕ್ರೇಟ್ ಆಗಿ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
Published On - 3:36 pm, Tue, 5 April 22