
ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ಸೀತೆ ಪಾತ್ರ ಮಾಡಿದ್ದಾರೆ. ಅವರು ಯಶ್ ಸ್ಟಾರ್ಡಂ ಕಂಡು ಅಚ್ಚರಿಗೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ‘ರಾಮಾಯಣ’ ಈವೆಂಟ್ ಅಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಯಶ್ ಅವರ ಜನಪ್ರಿಯತೆ ನೋಡಿ ಖುಷಿಯಾಗಿದೆ. ಈ ರೀತಿಯ ಸ್ಟಾರ್ಡಂ ಸಿಗೋದು ಅಪರೂಪ ಎಂದು ಅವರು ಹೊಗಳಿದ್ದಾರೆ.
‘ಈಗ ನಾನು ಯಶ್ ಸರ್ ಬಗ್ಗೆ ಮಾತನಾಡಬೇಕು. ನಾವು ಬೇರೆ ಬೇರೆ ಕಡೆಗೆ ಹೋಗುವಾಗ, ಅವರು ಬರುವಾಗ ಮಾತ್ರ ಅಲ್ಲಿ ಉಂಟಾಗುವ ಆ ಹರ್ಷೋದ್ಗಾರ ಇದೆಯಲ್ಲ, ಅದು ತುಂಬಾ ಆಕರ್ಷಕ ಅಂತ ಅನಿಸುತ್ತದೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಇದನ್ನು ಹೇಳುವಾಗ ಅವರ ಮೊಗದಲ್ಲಿ ಒಂದು ಖುಷಿ ಇತ್ತು.
‘ಯಶ್ ಕೆಜಿಎಫ್ ಮಾಡಿದ್ದರು. ಅದನ್ನು ನಾವೆಲ್ಲರೂ ನೋಡಿದ್ದೇವೆ. ಹಾಗೆಯೇ ಟಾಕ್ಸಿಕ್ ಮಾಡಿದ್ದಾರೆ. ಅದನ್ನೂ ಕೂಡ ನಾವೆಲ್ಲರೂ ನೋಡಿದ್ದೇವೆ. ಯಶ್ ಅವರು ಎಲ್ಲಿಗೆ ಹೋದರೂ ಆ ಭಾಷೆಯಲ್ಲಿ ಅವರು ಸಿನಿಮಾ ಮಾಡದಿದ್ದರೂ ಸಹ ಅದೇ ರೀತಿಯ ಹರ್ಷೋದ್ಗಾರ ಸಿಗುತ್ತದೆ. ಹಾಗಾಗಿ ನಾವು ಬಹುಶಃ ಬೇರೆ ಬೇರೆ ಭಾಷೆಗಳವರಾಗಿರಬಹುದು, ಆದರೆ ನಾವೆಲ್ಲರೂ ಈ ಸಿನಿಮಾದಿಂದ ಒಂದಾಗಿದ್ದೇವೆ. ಇದು ಈ ಎಲ್ಲ ಭಾಷೆಯ ಗಡಿಗಳನ್ನು ಮೀರಿ ನಿಲ್ಲುತ್ತದೆ’ ಎಂದು ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ: ‘ಫೋಟೋ ತೆಗಿಬೇಡಿ, ನಷ್ಟದ ಹಣ ಕೊಡ್ತೀವಿ’; ಪಾಪರಾಜಿಗಳಿಗೆ ಹೇಳಿದ್ದ ಯಶ್
ಯಶ್ ಅವರು ‘ಕೆಜಿಎಫ್ 2’ ಬಳಿಕ ದೊಡ್ಡ ಮಟ್ಟದ ಸ್ಟಾರ್ಡಂ ಪಡೆದುಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾಗೆ ಅಂದುಕೊಂಡ ರೀತಿಯ ಪ್ರತಿಕ್ರಿಯೆ ಸಿಗದ ಹೊರತಾಗಿಯೂ ಯಶ್ ಸ್ಟಾರ್ಡಂ ಕಡಿಮೆ ಆಗಿಲ್ಲ. ‘ರಾಮಾಯಣ’ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುತ್ತಿದ್ದು, ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ಅವರು ನಿರ್ಮಾಪಕರೂ ಹೌದು. ಇನ್ನು ಸಾಯಿ ಪಲ್ಲವಿ ಅವರು ಸೀತೆಯಾಗಿ ಮಿಂಚಲು ರೆಡಿ ಆಗಿದ್ದಾರೆ. ಟ್ರೇಲರ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ. ನವೆಂಬರ್ 5ರಂದು ಸಿನಿಮಾ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.