
ನಟಿ ಸಮಂತಾ ಅವರು ಮೊದಲಿನಿಂದಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾ ಬಂದವರು. ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್ನಲ್ಲಿ ಅವರು ಸಖತ್ ಬೋಲ್ಡ್ ಆಗಿ ನಟಿಸಿದ್ದರು. ಈಗ ‘ಸಿಟಾಡೆಲ್: ಹನಿ ಬನಿ’ ಸೀರಿಸ್ನಲ್ಲಿ ಅವರು ಸಖತ್ ಹಾಟ್ ಅವತಾರ ತಾಳಿದ್ದಾರೆ. ಈ ಸರಣಿಯಲ್ಲಿ ಸಮಂತಾ ಅವರನ್ನು ನೋಡಿ ಅನೇಕರು ಕಣ್ಣರಳಿಸಿದ್ದಾರೆ.
ಸಮಂತಾ ಅವರು ‘ಸಿಟಾಡೆಲ್: ಹನಿ ಬನಿ’ಯಲ್ಲಿ ವರುಣ್ ಧವನ್ ಜೊತೆ ನಟಿಸಿದ್ದಾರೆ. ಈ ಸರಣಿ ಇಂದು (ನವೆಂಬರ್ 8) ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಆರಂಭಿಸಿದೆ. ವರುಣ್ ಧವನ್ ಜೊತೆ ಅನೇಕ ಬೋಲ್ಡ್ ದೃಶ್ಯಗಳಲ್ಲಿ ಸಮಂತಾ ಅವರು ನಟಿಸಿದ್ದಾರೆ. ಅವರನ್ನು ನೋಡಿ ಅನೇಕರು ಕಣ್ಣರಳಿಸಿದ್ದಾರೆ. ಕೆಲವರು ಸಮಂತಾ ಅವರನ್ನು ಟೀಕಿಸಿದ್ದಾರೆ.
ಸಮಂತಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದ್ದು ಸಿನಿಮಾಗಳಿಂದ. ಅವರು ನಟನೆಗೆ ಆದ್ಯತೆ ಇರುವ ಸಿನಿಮಾಗಳನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಆದರೆ, ಈಗ ಈ ರೀತಿ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೆಲವರಿಗೆ ಶಾಕಿಂಗ್ ಎನಿಸಿದೆ. ಅವರು ವರುಣ್ ಧವನ್ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ‘ರೊಮ್ಯಾನ್ಸ್ ಮಿತಿ ಮೀರಿದೆ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಹೀರೋ ಜೊತೆ ಆಪ್ತವಾಗಿ ಪೋಸ್ ನೀಡಿದ ಸಮಂತಾ ರುತ್ ಪ್ರಭು
ಇಂಗ್ಲಿಷನ್ ‘ಸಿಟಾಡೆಲ್’ ಸರಣಿಯ ಭಾರತೀಯ ವರ್ಷನ್ ‘ಸಿಟಾಡೆಲ್: ಹನಿ ಬನಿ’. ಮೂಲ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. ಭಾರತದ ವೀಕ್ಷಕರಿಗೆ ಬೇಕಾದ ರೀತಿಯಲ್ಲಿ ಬೇಕಾದ ಹಾಗೆ ಕಥೆಯನ್ನು ಬದಲಿಸಲಾಗಿದೆ. ‘ಸಿಟಾಡೆಲ್’ ಸರಣಿಗೆ ರಾಜ್ ಹಾಗೂ ಡಿಕೆ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:42 pm, Fri, 8 November 24