ರಾಕ್​ಲೈನ್ ನಿರ್ಮಿಸಿದ್ದ ಸಿನಿಮಾಗೆ 5 ವರ್ಷ

|

Updated on: Jul 18, 2020 | 6:45 PM

ರಾಕ್​ಲೈನ್ ವೆಂಕಟೇಶ್ ಕೇವಲ ಕನ್ನಡ ಸಿನಿಮಾ ಅಷ್ಟೇ ಅಲ್ಲ. ತಮಿಳು ಹಾಗೂ ಹಿಂದಿ ಸಿನಿಮಾಗಳನ್ನೂ ನಿರ್ಮಿಸಿದ್ದಾರೆ. 2015ರಲ್ಲಿ ಸಲ್ಮಾನ್ ಖಾನ್ ಗಾಗಿ ಭಜರಂಗಿ ಭಾಯಿಜಾನ್ ಸಿನಿಮಾ ನಿರ್ಮಾಣ ಮಾಡಿದ್ದರು. ಆ ಸಿನಿಮಾಗೀಗ ಬಿಡುಗಡೆಯಾಗಿ ಈಗ 5 ವರ್ಷಗಳನ್ನ ಪೂರೈಸಿದೆ. ಭಜರಂಗಿ ಭಾಯಿಜಾನ್ ಸಿನಿಮಾಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಹೆಣೆದಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವಿನ ಬಾಂಧವ್ಯವನ್ನ ಸಾರುವ ಸಿನಿಮಾ ಇದಾಗಿತ್ತು. ಕಬೀರ್ ಖಾನ್ ಈ ಸಿನಿಮಾವನ್ನ ನಿರ್ದೇಶಿದ್ದರು. ರಾಕ್​ಲೈನ್ ನಿರ್ಮಾಣದ ಭಜರಂಗಿ ಭಾಯಿಜಾನ್ ಸಿನಿಮಾಗೆ […]

ರಾಕ್​ಲೈನ್ ನಿರ್ಮಿಸಿದ್ದ ಸಿನಿಮಾಗೆ 5 ವರ್ಷ
Follow us on

ರಾಕ್​ಲೈನ್ ವೆಂಕಟೇಶ್ ಕೇವಲ ಕನ್ನಡ ಸಿನಿಮಾ ಅಷ್ಟೇ ಅಲ್ಲ. ತಮಿಳು ಹಾಗೂ ಹಿಂದಿ ಸಿನಿಮಾಗಳನ್ನೂ ನಿರ್ಮಿಸಿದ್ದಾರೆ. 2015ರಲ್ಲಿ ಸಲ್ಮಾನ್ ಖಾನ್ ಗಾಗಿ ಭಜರಂಗಿ ಭಾಯಿಜಾನ್ ಸಿನಿಮಾ ನಿರ್ಮಾಣ ಮಾಡಿದ್ದರು. ಆ ಸಿನಿಮಾಗೀಗ ಬಿಡುಗಡೆಯಾಗಿ ಈಗ 5 ವರ್ಷಗಳನ್ನ ಪೂರೈಸಿದೆ.

ಭಜರಂಗಿ ಭಾಯಿಜಾನ್ ಸಿನಿಮಾಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಹೆಣೆದಿದ್ದರು. ಭಾರತ ಹಾಗೂ ಪಾಕಿಸ್ತಾನ ನಡುವಿನ ಬಾಂಧವ್ಯವನ್ನ ಸಾರುವ ಸಿನಿಮಾ ಇದಾಗಿತ್ತು. ಕಬೀರ್ ಖಾನ್ ಈ ಸಿನಿಮಾವನ್ನ ನಿರ್ದೇಶಿದ್ದರು. ರಾಕ್​ಲೈನ್ ನಿರ್ಮಾಣದ ಭಜರಂಗಿ ಭಾಯಿಜಾನ್ ಸಿನಿಮಾಗೆ ಪ್ರೇಕ್ಷಕರು ಕೂಡ ಭೇಷ್ ಅಂದಿದ್ದರು. ಬಾಕ್ಸಾಫೀಸ್​ನಲ್ಲೂ 444ಕೋಟಿಗೂ ಅಧಿಕ ಹಣ ಗಳಿಸಿತ್ತು.

ಇಷ್ಟೇ ಅಲ್ಲ. ಭಜರಂಗಿ ಭಾಯಿಜಾನ್ ಚೀನಾ, ಜಪಾನ್, ಟರ್ಕಿಯಲ್ಲೂ ಚಿಗಡೆಯಾಗಿ ಉತ್ತಮ ಗಳಿಕೆ ಕಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾ ರಾಷ್ಟ್ರ ಪ್ರಶಸ್ತಿಯನ್ನೂ ಗಟ್ಟಿಸಿಕೊಂಡಿದೆ. ಹೀಗಾಗಿ ಭಜರಂಗಿ ಭಾಯಿಜಾನ್ 5 ವರ್ಷ ಪೂರೈಸಿದ ಬೆನ್ನೆಲ್ಲೆ ರಾಕ್​ಲೈನ್ ಸಂಸ್ಥೆ ಈ ಸಂತಸವನ್ನ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.