ಯಜಮಾನ್ರೋತ್ಸವಕ್ಕೆ 50 ದಿನ ಬಾಕಿ, ಅಭಿಮಾನಿಗಳ ಸಂಭ್ರಮ ಶುರು!

|

Updated on: Jul 30, 2020 | 9:06 PM

ಬೆಂಗಳೂರು: ದರ್ಶನ್, ಸುದೀಪ್, ಪುನೀತ್ ರಾಜಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ 50, 100 ದಿನ ಮೊದಲಿನಿಂದ್ಲೇ ಆಚರಿಸೋಕೆ ಶುರುವಿಟ್ಕೊಳ್ತಾರೆ. ಆದ್ರೆ ಇದೇ ಮೊದಲ ಬಾರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬವನ್ನ 50 ದಿನ ಇರುವಂತೆ ಸಂಭ್ರಮಿಸಲು ಶುರು ಮಾಡಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನ ಅಗಲಿ 11 ವರ್ಷಗಳಾಗಿವೆ. ಆದ್ರೂ ಅಭಿಮಾನಿಗಳ ಜನಮಾನಸದಿಂದ ಡಾ.ವಿಷ್ಣುವರ್ಧನ್ ಮರೆಯಾಗಿಲ್ಲ. ಒಂದ್ವೇಳೆ ವಿಷ್ಣು ದಾದಾ ಇದ್ದಿದ್ದರೆ ಇದೇ ಸೆಪ್ಟೆಂಬರ್ 18ರಂದು 70ನೇ ಜನ್ಮದಿನವನ್ನ ಆಚರಿಸಿಕೊಳ್ಳುತ್ತಿದ್ದರು. ಆದ್ರೀಗ ಅವನ ದೈಹಿಕ […]

ಯಜಮಾನ್ರೋತ್ಸವಕ್ಕೆ 50 ದಿನ ಬಾಕಿ, ಅಭಿಮಾನಿಗಳ ಸಂಭ್ರಮ ಶುರು!
Follow us on

ಬೆಂಗಳೂರು: ದರ್ಶನ್, ಸುದೀಪ್, ಪುನೀತ್ ರಾಜಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ 50, 100 ದಿನ ಮೊದಲಿನಿಂದ್ಲೇ ಆಚರಿಸೋಕೆ ಶುರುವಿಟ್ಕೊಳ್ತಾರೆ. ಆದ್ರೆ ಇದೇ ಮೊದಲ ಬಾರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬವನ್ನ 50 ದಿನ ಇರುವಂತೆ ಸಂಭ್ರಮಿಸಲು ಶುರು ಮಾಡಿದ್ದಾರೆ.

ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನ ಅಗಲಿ 11 ವರ್ಷಗಳಾಗಿವೆ. ಆದ್ರೂ ಅಭಿಮಾನಿಗಳ ಜನಮಾನಸದಿಂದ ಡಾ.ವಿಷ್ಣುವರ್ಧನ್ ಮರೆಯಾಗಿಲ್ಲ. ಒಂದ್ವೇಳೆ ವಿಷ್ಣು ದಾದಾ ಇದ್ದಿದ್ದರೆ ಇದೇ ಸೆಪ್ಟೆಂಬರ್ 18ರಂದು 70ನೇ ಜನ್ಮದಿನವನ್ನ ಆಚರಿಸಿಕೊಳ್ಳುತ್ತಿದ್ದರು. ಆದ್ರೀಗ ಅವನ ದೈಹಿಕ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಹುಟ್ಟುಹಬ್ಬವನ್ನ ಆಚರಿಸೋಕೆ ಸಜ್ಜಾಗಿದ್ದಾರೆ. ಹೀಗಾಗಿ ನಿರ್ದೇಶಕ ಕೃಷ್ಣ ತಮ್ಮ ಟ್ವಿಟರ್ ಖಾತೆಯಲ್ಲಿ 50 ಡೇಸ್ ಫಾರ್ ವಿಷ್ಣು ಬರ್ತ್​ಡೇ ಅನ್ನೋ ಪೋಸ್ಟರ್ ಅನ್ನ ಹಂಚಿಕೊಂಡಿದ್ದಾರೆ.

ಈ ಬಾರಿ ಸಾಹಸ ಸಿಂಹನ ಹುಟ್ಟುಹಬ್ಬವನ್ನ ಯಜಮಾನ್ರೋತ್ಸವ ಅಂತ ಹೆಸರಿಸಿದ್ದು, ಅದ್ಧೂರಿಯಾಗಿ ಆಚರಿಸಿಲು ವಿಷ್ಣು ಅಭಿಮಾನಿಗಳು ಸಜ್ಜಾಗಿದ್ದಾರೆ. ಒಂದ್ಕಡೆ ವಿಷ್ಣು ದಾದಾ 70ನೇ ಹುಟ್ಟುಹಬ್ಬ ಅನ್ನೋದಾದ್ರೆ, ಇನ್ನೊಂದ್ಕಡೆ 50 ದಿನ ಮೊದಲಿಂದ್ಲೇ ಸಂಭ್ರಮ ಆರಂಭ ಆಗಿರೋದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Published On - 6:19 pm, Thu, 30 July 20