ಆಮಿರ್​ ಖಾನ್​ ಮಗಳಿಗೆ ಖಿನ್ನತೆಯಂತೆ! ಅದಕ್ಕೆ ಕಂಗನಾ ಹೇಳಿದ್ದೇನು ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Oct 12, 2020 | 3:43 PM

ಮುಂಬೈ: ಖ್ಯಾತ ಬಾಲಿವುಡ್​ ನಟ ಆಮಿರ್​ ಖಾನ್​ ಪುತ್ರಿ ಐರಾ ತಾನೂ ಸಹ ಖಿನ್ನತೆಗೆ ಒಳಗಾಗಿದ್ದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಈಗ ನನ್ನ ಮನಸ್ಥಿತಿ ತುಸು ಚೇತರಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಯಸಿದೆ. ಹಾಗಾಗಿ, ಈ ವಿಡಿಯೋ ಮುಖಾಂತರ ಜನರಿಗೆ ಖಿನ್ನತೆಯ ಬಗ್ಗೆ ತಿಳಿಹೇಳಲು ಬಯಸುತ್ತೇನೆ ಎಂದು […]

ಆಮಿರ್​ ಖಾನ್​ ಮಗಳಿಗೆ ಖಿನ್ನತೆಯಂತೆ! ಅದಕ್ಕೆ ಕಂಗನಾ ಹೇಳಿದ್ದೇನು ಗೊತ್ತಾ?
Follow us on

ಮುಂಬೈ: ಖ್ಯಾತ ಬಾಲಿವುಡ್​ ನಟ ಆಮಿರ್​ ಖಾನ್​ ಪುತ್ರಿ ಐರಾ ತಾನೂ ಸಹ ಖಿನ್ನತೆಗೆ ಒಳಗಾಗಿದ್ದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

ಈಗ ನನ್ನ ಮನಸ್ಥಿತಿ ತುಸು ಚೇತರಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಯಸಿದೆ. ಹಾಗಾಗಿ, ಈ ವಿಡಿಯೋ ಮುಖಾಂತರ ಜನರಿಗೆ ಖಿನ್ನತೆಯ ಬಗ್ಗೆ ತಿಳಿಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
‘ನಾನು 16 ವರ್ಷದವಳಾಗಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು’
ಇನ್ನು ಐರಾ ಖಾನ್​ರ ವಿಡಿಯೋಗೆ ನಟಿ ಕಂಗನಾ ರಣೌತ್​ ಪ್ರತಿಕ್ರಿಯಿಸಿದ್ದು ತಮ್ಮ ವೈಯಕ್ತಿಕ ಅನುಭವಗಳನ್ನು ಸಹ ಹಂಚಿಕೊಂಡರು. ನಾನು 16 ವರ್ಷದವಳಾಗಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಜೊತೆಗೆ, ನನ್ನ ಸಹೋದರಿಯ ಮೇಲೆ ಕಿಡಿಗೇಡಿಗಳು ಌಸಿಡ್​ ಎರಚಿದ್ದರಿಂದ ನಾನು ಆಕೆಯನ್ನು ಸಹ ನೋಡಿಕೊಳ್ಳಬೇಕಾಗಿತ್ತು. ಇದೆಲ್ಲವೂ ನಾನು ಮಾಧ್ಯಮಗಳ ಸಿಟ್ಟಿನ ನಡುವೆ ಎದುರಿಸಿದೆ ಎಂದು ತಮ್ಮ ಟ್ವಿಟರ್​ ಖಾತೆಯಲ್ಲಿ ಹೇಳಿದ್ದಾರೆ.

ಐರಾ ಒಡೆದ ಕುಟುಂಬದಿಂದ ಬಂದವಳು.. ಖಿನ್ನತೆ ಸಹಜ
ಜೊತೆಗೆ, ಖಿನ್ನತೆಗೆ ಒಳಗಾಗಲು ಹಲವಾರು ಕಾರಣಗಳಿರುತ್ತದೆ. ಹಾಗಾಗಿ, ಸಾಂಪ್ರದಾಯಿಕ ಕುಟುಂಬಗಳಿರುವುದು ಬಹುಮುಖ್ಯ. ಅದಕ್ಕಿಂತ ಮುಖ್ಯವಾಗಿ ಆಮಿರ್​ ಖಾನ್​ ಪುತ್ರಿ ಐರಾ ಒಡೆದ ಕುಟುಂಬದಿಂದ ಬಂದವಳು. ಬೆಳೆಯುತ್ತಾ ಬೆಳೆಯುತ್ತಾ ಖಿನ್ನತೆ.. ಇದೆಲ್ಲ ಸಾಮಾನ್ಯ ಎಂದು World Mental Health Day ಸಂದರ್ಭದಲ್ಲಿ ಹೇಳಿದ್ದಾರೆ.