ಲಾಕ್​ಡೌನ್ ನಂತರ ಬಿಡುಗಡೆಯಾಗಿ ಯಶಸ್ವಿ 50 ದಿನ ಪೂರೈಸಿದ ಆ್ಯಕ್ಟ್- 1978

|

Updated on: Jan 10, 2021 | 4:24 PM

50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮವನ್ನು ಆಚರಿಸಲು ಆ್ಯಕ್ಟ್ 1978 ಚಿತ್ರತಂಡ ಮೈಸೂರಿನ ಮಲ್ಟಿಫ್ಲೆಕ್​ಗೆ ಭೇಟಿ ನೀಡಿತ್ತು ಎಂಬ ಮಾಹಿತಿ ದೊರೆತಿದೆ.

ಲಾಕ್​ಡೌನ್ ನಂತರ ಬಿಡುಗಡೆಯಾಗಿ ಯಶಸ್ವಿ 50 ದಿನ ಪೂರೈಸಿದ ಆ್ಯಕ್ಟ್- 1978
ಆ್ಯಕ್ಟ್ 1978 ಚಿತ್ರದ ಪೋಸ್ಟರ್
Follow us on

ಬೆಂಗಳೂರು: ಆ್ಯಕ್ಟ್ – 1978 ಸಿನಿಮಾ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಲಾಕ್​ಡೌನ್ ನಂತರ ಚಿತ್ರಮಂದಿರಗಳಲ್ಲಿ ತೆರೆಕಂಡ ದಕ್ಷಿಣ ಭಾರತದ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಈಗಾಗಲೇ ಪಾತ್ರವಾಗಿರುವ ಆ್ಯಕ್ಟ್ – 1978 ಸಿನಿಮಾಗೆ ಇನ್ನೊಂದು ಹಿರಿಮೆ ಪಾತ್ರವಾಗಿದೆ. ನವೆಂಬರ್ 20 ರಂದು ತೆರೆ ಕಂಡಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆತಿತ್ತು.

50 ನೇ ದಿನದ ಸಂಭ್ರಮವನ್ನು ಆಚರಿಸಲು ಮೈಸೂರಿನ ಮಲ್ಟಿಫ್ಲೆಕ್ಸ್​ಗೆ ಚಿತ್ರತಂಡ ಭೇಟಿ ನೀಡಿತ್ತು. ಜತೆಗೆ, ಯಶಸ್ವಿ 50 ದಿನ ಪೂರೈಸಿದ ಕುರಿತು ತಮ್ಮ ಫೇಸ್​ಬುಕ್ ಖಾತೆಯಲ್ಲಿ ನಿರ್ದೇಶಕ ಮಂಸೋರೆ ಖುಷಿ ಹಂಚಿಕೊಂಡಿದ್ದಾರೆ. 50 ದಿನದ ಮೈಲಿಗಲ್ಲು ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕ ಪ್ರಭುವಿಗೂ ಹಾಗೂ ಪ್ರದರ್ಶಕರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಬರೆದಿರುವ ಅವರು, 50 ದಿನ ಪೂರೈಸಿದ ನಂತರ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರ ಮಂದಿರಗಳ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಸಂಚಾರಿ ವಿಜಯ್ , ಯಜ್ಞಾ ಶೆಟ್ಟಿ, ದತ್ತಣ್ಣ, ಅವಿನಾಶ್, ಬಿ.ಸುರೇಶ್,ಶೋಭರಾಜ್, ಅಚ್ಯುತ್​ಕುಮಾರ್ ಮುಂತಾದವರು ನಟಿಸಿರುವ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳಿಂದ ಶ್ಲಾಘನೆ  ವ್ಯಕ್ತವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಸರ್ಕಾರಿ ಅಧಿಕಾರಿಗಳು ಸೌಜನ್ಯದಿಂದ ವರ್ತಿಸುವಂತೆ ಸರ್ಕಾರದಿಂದ ಸುತ್ತೋಲೆ

Published On - 4:17 pm, Sun, 10 January 21