ಕಾಲಕ್ಕೆ ತಕ್ಕಂತೆ.. ಅಭಿಮಾನಿಯ ತಂಗಿ ಮದುವೆಗೆ ವಿಡಿಯೋ ಕಾಲ್ ಮೂಲಕ ಶುಭ ಹಾರೈಸಿದ ಪವರ್ ಸ್ಟಾರ್!
ಶೂಟಿಂಗ್ನಲ್ಲಿ ಬ್ಯೂಸಿ ಇರುವ ಕಾರಣ ಪುನೀತ್ ತನ್ನ ಅಭಿಮಾನಿಯ ಸಹೋದರಿಯ ಮದುವೆಗೆ ಬರಲು ಸಾಧ್ಯವಾಗಿಲ್ಲ. ಆದರೆ ಮದುವೆಯ ದಿನ ಸ್ವತ: ಪುನೀತ್ ವಿಡಿಯೋ ಕರೆ ಮಾಡಿ ಹೊಸ ವಧು ವರನಿಗೆ ಶುಭಾಶಯ ಕೋರಿದ್ದಾರೆ.
ಬಳ್ಳಾರಿ: ಬಿಗ್ ಸೆಲೆಬ್ರಿಟಿ ಎನಿಸಿಕೊಂಡಿರುವ ಅದೂ ನಮ್ಮ ನೆಚ್ಚಿನ ನಟರೊಬ್ಬರು ನಮ್ಮದೇ ಮದುವೆಗೆ ಅಥವಾ ನಮ್ಮವರ ಮದುವೆಯ ಸಮಾರಂಭದಲ್ಲಿ ಭಾಗಿಯಾದ್ರೆ ಎಷ್ಟು ಖುಷಿಯಾಗುತ್ತೇ ಅಲ್ವಾ! ಆದ್ರೆ ಇಂತಹ ಘಟನೆಗಳು ನಡೆಯೋದು ತೀರಾ ಅಪರೂಪ ಅಲ್ವಾ? ಅದ್ರೆ ಸ್ಯಾಂಡಲ್ವುಡ್ನ ಪವರ್ ಸ್ಟಾರ್, ಸಹೃದಯಿ ಪುನೀತ್ ರಾಜ್‍ಕುಮಾರ್ ತನ್ನ ಅಪ್ಪಟ ಅಭಿಮಾನಿಯೊಬ್ಬರ ಸಹೋದರಿಯ ಮದುವೆಗೆ ವಿಡಿಯೋ ಕಾಲ್ ಮಾಡಿ, ಶುಭ ಹಾರೈಸಿದ್ದಾರೆ. ಇದರಿಂದ ವಧು, ಅಭಿಮಾನಿಯ ಮನೆ ಮಂದಿ ಸೇರಿದಂತೆ ಮದುವೆ ಮನೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಫುಲ್ ಖುಷ್ ಆಗಿದೆ.
ಗಮನಾರ್ಹವೆಂದ್ರೆ ಕಾಲಕ್ಕೆ ತಕ್ಕಂತೆ ಪುನೀತ್ ರಾಜ್‍ಕುಮಾರ್ ಇಲ್ಲಿ ತಮ್ಮ ಇರುವನ್ನು ಪ್ರದರ್ಶಿಸಿರುವುದು. ಒಂದು.. ಇದು ಕೊರೊನಾ ಕಾಲ. ಹೆಚ್ಚು ಜನ ಸೇರುವಂತಿಲ್ಲ; ಸೆಲೆಬ್ರೆಟಿಯಾಗಿ ಜನಜಂಗುಳಿಯಲ್ಲಿ ಅದರಲ್ಲೂ ಮದುವೆ ಮನೆಯಲ್ಲಿ ಪಾಲ್ಗೊಳ್ಳುವುದು ಕ್ಷೇಮಕರ ಅಲ್ಲ. ಇನ್ನು ಎರಡನೆಯದಾಗಿ.. ಕಾಲಾಯ ತಸ್ಮೈ ನಮಃ ಅಂದ್ರೆ ಇದು ಮೊಬೈಲ್ ವಿಡಿಯೋ ಕಾಲ್ ಯುಗ. ತಂತ್ರ‘ಜ್ಞಾನ’ವನ್ನು ಸದ್ಬಳಕೆ ಮಾಡಿಕೊಂಡ ಸ್ಟಾರ್ ನಟ.. ಅಭಿಮಾನಿಯ ಕೋರಿಕೆಯನ್ನು ಮನ್ನಿಸಿದ್ದಾರೆ.
ನಡೆದಿದ್ದೇನೆಂದ್ರೆ.. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಕಿಚಡಿ ವಿಶ್ವ ಎಂಬುವವರ ಸಹೋದರಿ ಅಂಬಿಕಾ ಮದುವೆ ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಸಹೋದರಿಯ ಮದುವೆಗೆ ಬರುವಂತೆ ಹೊಸಪೇಟೆ ನಗರದ ಕಿಚಡಿ ವಿಶ್ವ ಹಾಗೂ ಜೋಗಿ ತಾಯಪ್ಪ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನ ಆಹ್ವಾನಿಸಿದ್ದರು.
ಆದರೆ ಶೂಟಿಂಗ್ನಲ್ಲಿ ಬ್ಯೂಸಿ ಇರುವ ಕಾರಣ ಅಪ್ಪು, ತನ್ನ ಅಭಿಮಾನಿಯ ಸಹೋದರಿಯ ಮದುವೆಗೆ ಬರಲು ಸಾಧ್ಯವಾಗಿಲ್ಲ. ಆದರೆ ಮದುವೆಯ ದಿನ ಸ್ವತ: ಪುನೀತ್ ವಿಡಿಯೋ ಕರೆ ಮಾಡಿ ಹೊಸ ವಧು ವರನಿಗೆ ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು, ನೆಚ್ಚಿನ ನಟ ವಿಡಿಯೋ ಕಾಲ್ ಮಾಡಿ ಶುಭಾಶಯ ಕೋರಿದ್ದು ಅಭಿಮಾನಿಗಳ ಅಪಾರ ಸಂತಸಕ್ಕೆ ಕಾರಣವಾಗಿದೆ.
ಗೋಕರ್ಣ ಬೀಚ್ನಲ್ಲಿ ಪುನೀತ್ ‘ಪವರ್’ಫುಲ್ ಬ್ಯಾಕ್ ಫ್ಲಿಪ್ಗೆ ಫ್ಯಾನ್ಸ್ ಫುಲ್ ಫಿದಾ!
Published On - 12:16 pm, Mon, 11 January 21