
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ನಟ ಚಂದನ್ ಕುಮಾರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಪಾರ್ಟಿ ಅನುಭವಗಳ ಬಗ್ಗೆ ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿ ಸಮಯದಲ್ಲಿ ತಾವು ವರ್ತಿಸುವ ರೀತಿಯನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಿಂದ ಸುದೀಪ್ ಹಾಗೂ ಚಂದನ್ ಅವರ ಬಾಂಧವ್ಯ ಎಂಥದ್ದು ಎಂಬುದು ಕೂಡ ರಿವೀಲ್ ಆಗಿದೆ.
ಪಾರ್ಟಿ ಮೂಡ್ ಬಗ್ಗೆ ಮಾತನಾಡಿದ ಚಂದನ್ ಕುಮಾರ್, ತಾವು ಪಾರ್ಟಿಗಳಲ್ಲಿ ಹೇಗೆ ವಿಭಿನ್ನವಾಗಿ ವರ್ತಿಸುತ್ತೇನೆ ಎಂಬುದನ್ನು ವಿವರಿಸಿದ್ದಾರೆ. ‘ನಾನು ಪಾರ್ಟಿ ಮಾಡಿದರೆ ನಾಳೆ ಎಂಬ ಚಿಂತೆಯೇ ಇರುವುದಿಲ್ಲ. ಅಷ್ಟು ಎಕ್ಸ್‌ಟ್ರೀಮ್ ಆಗಿ ಎಂಜಾಯ್ ಮಾಡುತ್ತೇನೆ. ಬಿಫೋರ್ ಪಾರ್ಟಿ ಮತ್ತು ಆಫ್ಟರ್ ಪಾರ್ಟಿ ನನ್ನಲ್ಲಿ ಸಿಕ್ಕಾಪಟ್ಟೆ ಡಿಫರೆನ್ಸ್ ಇರುತ್ತದೆ. ಮನಸ್ಸಿನಲ್ಲಿರುವುದನ್ನೆಲ್ಲ ಹಾಗೆಯೇ ಮಾತನಾಡಿಬಿಡುತ್ತೇನೆ. ಆ ಸಮಯದಲ್ಲಿ ನಾನು ತುಂಬಾ ಎಕ್ಸ್‌ಟ್ರಾವರ್ಟ್ ಆಗಿಬಿಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಮರೆಯಲಾಗದ ಖಾಸಗಿ ಪಾರ್ಟಿ ಘಟನೆಯೊಂದನ್ನು ಸ್ಮರಿಸಿಕೊಂಡ ಚಂದನ್ ಕುಮಾರ್, ‘ನಟ ಕಿಚ್ಚ ಸುದೀಪ್ ಸರ್ ಅವರ ಮನೆಯಲ್ಲಿ ನಡೆದ ಪಾರ್ಟಿ ವೊಂದರಲ್ಲಿ ನಾನೇನು ಮಾಡಿದೆ ಗೊತ್ತಾ? ಆರ್ ಸಿ ಬಿ ತಂಡ ಫೈನಲ್ ಗೆಲ್ಲುತ್ತದೆ ಎಂದು ನನಗೆ ಪಕ್ಕಾ ಗೊತ್ತಾಯಿತು. ನನ್ನ ಕ್ಯಪಾಸಿಟಿ ಕಡಿಮೆ. ಹೀಗಾಗಿ ಒಂದು ಪೆಗ್ ಕುಡಿದ ಬಳಿಕ ಸುದೀಪ್ ಸರ್ ಅವರ ತೊಡೆಯ ಮೇಲೆಯೇ ಮಲಗಿಬಿಟ್ಟಿದ್ದೆ. ಪಾಪ, ಅಲ್ಲಿ ಅಷ್ಟು ಜನ ಇದ್ದರೂ ಸುದೀಪ್ ಸರ್ ನನ್ನನ್ನು ಪ್ರೀತಿಯಿಂದ ಮಲಗಿಸಿಕೊಂಡಿದ್ದರು’ ಎಂದು ನಗುತ್ತಾ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರದ್ದಾದ ಟಾಸ್ಕ್ನಲ್ಲಿ ಗೆದ್ದವರ್ಯಾರು? ಮನೆಗೆ ಸುದೀಪ್ ನೀಡಿದ ಶಿಕ್ಷೆ ಏನು?
ಇದೇ ವೇಳೆ ತಮ್ಮ ಆರೋಗ್ಯ ಹಾಗೂ ಫಿಟ್‌ನೆಸ್ ಬಗ್ಗೆಯೂ ಮಾತನಾಡಿದ ಚಂದನ್, ತಾವೊಬ್ಬ ಫಿಟ್‌ನೆಸ್ ಫ್ರಿಕ್ ಆಗಿರುವುದರಿಂದ ಮದ್ಯ ಸೇವನೆಯ ಸಾಮರ್ಥ್ಯ ತಮಗೆ ಕಡಿಮೆ ಎಂದಿದ್ದಾರೆ. ಪ್ರತಿದಿನ ವರ್ಕೌಟ್ ಮಾಡುವುದರಿಂದ ಕೇವಲ ಒಂದು ಪೆಗ್‌ಗೆ ಅಥವಾ ಒಂದು ಬಾಟಲ್ ಬಿಯರ್‌ಗೆ ತಮಗೆ ನಶೆ ಏರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಕುಡಿಯುವ ಸಾಮರ್ಥ್ಯ ಹೆಚ್ಚಿರುವುದು ದೊಡ್ಡದಲ್ಲ, ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:15 pm, Tue, 17 November 26