40 ವರ್ಷದ ಸಿನಿ ಜರ್ನಿಯ ಸಿಹಿ-ಕಹಿ ನೆನಪು: ನಡೆದು ಬಂದ ಹಾದಿ ನೆನೆದು ಜಗ್ಗೇಶ್ ಕಣ್ಣೀರು

| Updated By: KUSHAL V

Updated on: Nov 24, 2020 | 3:25 PM

ನವರಸನಾಯಕ ಜಗ್ಗೇಶ್ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿ 40 ವರ್ಷಗಳು ಕಳೆದಿವೆ. ತಮ್ಮ ಸಿನಿಜರ್ನಿಯನ್ನು ಮೆಲಕು ಹಾಕುತ್ತ ಜಗ್ಗೇಶ್ ಭಾವುಕರಾಗಿದ್ದಾರೆ.

40 ವರ್ಷದ ಸಿನಿ ಜರ್ನಿಯ ಸಿಹಿ-ಕಹಿ ನೆನಪು: ನಡೆದು ಬಂದ ಹಾದಿ ನೆನೆದು ಜಗ್ಗೇಶ್ ಕಣ್ಣೀರು
ನಟ ಜಗ್ಗೇಶ್
Follow us on

ಬೆಂಗಳೂರು: ನವರಸನಾಯಕ ಜಗ್ಗೇಶ್ ಸಿನಿ ಜರ್ನಿಗೆ 40 ವರ್ಷ ಪೂರೈಸಿದೆ. ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿ 40 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ತನ್ನ ಸಿನಿ ಜೀವನದ ಕೆಲ ಘಟನೆಗಳನ್ನು ನಟ ಹಂಚಿಕೊಂಡಿದ್ದಾರೆ. ಇದೇ ವೇಳೆ ನಟ ಜಗ್ಗೇಶ್ ಕಿಡಿ ಕಾರಿದ್ದಾರೆ.

ಪ್ಯಾನ್ ಇಂಡಿಯಾ ಕಟ್ಟಿಕೊಂಡು ಏನೂ ಆಗಬೇಕಾಗಿಲ್ಲ. ಇದರಿಂದ ನಮ್ಮ ಕನ್ನಡಿಗರಿಗೆ ಕೆಲಸ ಸಿಗಲ್ಲ. ಯಾರದೋ ಭುಜ ತಟ್ಟುವಂತಹ ಕೆಲಸ ನಡೆಯುತ್ತಿದೆ. ನಮ್ಮತನವನ್ನು ಉಳಿಸಿ ಎಂದು ನವರಸನಾಯಕ ಜಗ್ಗೇಶ್ ಆಕ್ರೋಶ ಹೊರ ಹಾಕಿದ್ದಾರೆ. ನಾವು ಹಿರಿಯರು ಎಂದು ಕರೆದರೆ ನಾವು ಇಂಡಸ್ಟ್ರಿಗೆ ಹೋಗುತ್ತೇವೆ. ಯಾರದೋ ಮನೆ ಕಾಯುವ ಮನಸ್ಸು ನಮಗೆ ಇಲ್ಲ. ಅದರ ಬದಲಿಗೆ ವಿಷ ಕುಡಿದು ಸಾಯುವುದು ಒಳ್ಳೇದು ಎಂದು ಹೇಳಿದ್ರು.

ಹಳೇ ದಿನಗಳನ್ನು ನೆನೆದು ಭಾವುಕರಾದ ಜಗ್ಗೇಶ್:

ನವರಸನಾಯಕ ಜಗ್ಗೇಶ್ ಸಿನಿ ಪಯಣ

ಚೂಪು ಕಣ್ಣು ಕೆದರಿದ ತಲೆ ಆಶಾದಯಕವಾಗಿದ್ದಾನೆ ಅನ್ನೋ ಆರ್ಟಿಕಲ್‌ ನೆನಪಾಗ್ತಿದೆ. ಮೂರು ಡ್ರೆಸ್​ಗಳನ್ನ ಬದಲಾಯಿಸಿ ಕಬ್ಬನ್ ಪಾರ್ಕ್​ನಲ್ಲಿ ಫೋಟೋಶೂಟ್ ಮಾಡಿದ್ವಿ. ಯಾರೋ ಸಿಗಬಹುದು, ಯಾರೋ ಏನೋ ಕೊಡಬಹುದು ಅನ್ನೋ ಆಸೆಯೊಂದಿಗೆ ಸಿನಿ ಪಯಣ ಆರಂಭವಾಗಿತ್ತು ಎಂದು ತಮ್ಮ ಬದುಕಿನ ಏಳು ಬೀಳುಗಳನ್ನು ಮೆಲಕು ಹಾಕುತ್ತ ಅಂದಿನ ಪರಿಸ್ಥಿತಿ ನೆನೆದು ಜಗ್ಗೇಶ್ ಕಣ್ಣೀರಿಟ್ಟಿರು.

‘ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಹೆಂಡ್ತಿ’
ಪತ್ನಿ ಪರಿಮಳ ಜಗ್ಗೇಶ್​ ಕೂಡ ತಮ್ಮ ಪಯಣದಲ್ಲಿನ ಏಳು ಬೀಳು ಮೆಲುಕು ಹಾಕಿದರು. ಜಗ್ಗೇಶ್​ಗೆ ಪಾತ್ರಗಳು ಸಿಗದಿದ್ದಾಗ ತುಂಬಾ ಕಷ್ಟದ ದಿನಗಳನ್ನು ಕಳೆಯಬೇಕಾಯಿತು. ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ಇದರಿಂದ ಅದೆಲ್ಲವನ್ನೂ ದಾಟಿ ಬಂದಿದ್ದೇವೆ ಎಂದು ಪರಿಮಳ ಜಗ್ಗೇಶ್ ಭಾವುಕರಾದ್ರು.

‘ರಾಜ್ ಕುಮಾರ್ ಅವರ ಜೊತೆ ರಾಯರ ವಿಚಾರ ಚರ್ಚೆ ಮಾಡ್ತಿದ್ದೆ’

ಜಗ್ಗೇಶ್ ಮತ್ತು ಪತ್ನಿ ಪರಿಮಳ

ಕಲಾವಿದ ಅನ್ನೋದನ್ನ ಮನಸ್ಸಿಂದ ಕಿತ್ತಾಕಿದ್ದೀನಿ. ಜನಪ್ರಿಯ ವ್ಯಕ್ತಿ ಅನ್ನೋದು ಇಲ್ಲ. ತುಂಬಾ ಸಾಮಾನ್ಯನಂತೆ ಬದುಕುತ್ತಿದ್ದೇನೆ. ಅವಕಾಶ ತಾನಾಗಿಯೇ ಬಂದ್ರೆ ಮಾಡ್ತೀನಿ. ನಾನಾಗೇ ನಾನು ಹೋಗಬಾರ್ದು ಅಂದ್ಕೊಂಡಿದ್ದೀನಿ. ರಾಜ್ ಕುಮಾರ್ ಅವರ ಜೊತೆ ರಾಯರ ವಿಚಾರ ಸಾಕಷ್ಟು ಚರ್ಚೆ ಮಾಡ್ತಿದ್ದೆ. ರಾಜ್ ಕುಮಾರ್ ಅವರು ಪರಮ ದೈವ ಭಕ್ತರಾಗಿದ್ರು. ರಾಜ್ ಕುಮಾರ್ ನಟರಲ್ಲ. ಅವರೊಬ್ಬ ಸಂತರು. ಅವರು ಕೂಡ ಸಂಧ್ಯಾ ವಂದನೆ ಮಾಡ್ತಿದ್ರು. ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕವಾಗಿ. ಮೊದಲು ರಾಜಕೀಯ ಕಾರ್ಯಕ್ರಮ ಅಂದ್ರೆ ಓಡಿ ಹೋಗ್ತಿದ್ದೆ ಎಂದು ಅಣ್ಣವ್ರನ್ನ ಜಗ್ಗೇಶ್ ನೆನಪು ಮಾಡಿಕೊಂಡ್ರು.

ಇಂದಿನ ಕಲಾವಿದರಿಗೆ ಜಗ್ಗೇಶ್ ಮಾತು:
ಕನಸು ಮಾತ್ರ ಕಾಣಬೇಡಿ.. ಕನಸಿನ ಜೊತೆ ಹೆಜ್ಜೆ ಹಾಕಿ. ಪ್ರತಿಯೊಂದಕ್ಕೂ ಸಿಸ್ಟಮ್ ಇದೆ. ಅಂದು ಕೊಂಡ ತಕ್ಷಣವೇ ಎಲ್ಲವೂ ಆಗಲ್ಲ. ಉದರಕ್ಕೆ ಬಲಿಷ್ಠವಾದ ಕೆಲಸ ಮಾಡಿ. ಹಾಬಿಗೆ ಕಲೆ ಇಟ್ಕೊಳ್ಳಿ ಎಂದು ಹೇಳಿದರು.

ಜಗ್ಗೇಶ್ ಭಾವುಕರಾದ ಕ್ಷಣ

Published On - 2:46 pm, Tue, 24 November 20