ಬೆಂಗಳೂರು: ಸುಪ್ರೀಂ ಕೋರ್ಟ್ನಲ್ಲಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕರೂ ನಟಿಗೆ ಇಂದು ಬಿಡುಗಡೆ ಭಾಗ್ಯ ಇಲ್ಲ. ಕೋರ್ಟ್ ಆದೇಶದ ಪ್ರತಿ ಪಡೆದು ಪ್ರಕ್ರಿಯೆ ನಡೆಯುವುದಕ್ಕೆ ಕಾಲಾವಕಾಶದ ಅಗತ್ಯವಿರುವ ಹಿನ್ನೆಲೆಯಲ್ಲಿ ಇಂದು ನಟಿ ರಾಗಿಣಿ ದ್ವಿವೇದಿಗೆ ಬಿಡುಗಡೆ ಭಾಗ್ಯ ಇಲ್ಲ.
ರಾಗಿಣಿ ಜೈಲಿನಿಂದ ಬಿಡುಗಡೆಯಾಗಲು ಆದೇಶದ ದೃಢೀಕೃತ ಪ್ರತಿ ಹಾಜರುಪಡಿಸುವುದು ಕಡ್ಡಾಯ. ಸುಪ್ರೀಂ ಕೋರ್ಟ್ನಲ್ಲಿ ಪ್ರತಿ ಪಡೆದು ಮುಂದಿನ ಕ್ರಮ ಜರುಗಿಸಬೇಕಿದೆ. ಹೀಗಾಗಿ, ಕೋರ್ಟ್ ಷರತ್ತು ಪೂರ್ಣಗೊಳಿಸಿದ ಬಳಿಕ ನಾಳೆ ಜೈಲಿನಿಂದ ನಟಿ ರಾಗಿಣಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು.. 140 ದಿನಗಳ ಜೈಲುವಾಸ ಅಂತ್ಯ