ಬೆಂಗಳೂರು: ದಿವಂಗತ ನಟ ಚಿರಂಜೀವಿ ಸರ್ಜಾರ ಮಾವ ಸುಂದರ್ ರಾಜ್ ತಮ್ಮ ಮೊಮ್ಮಗನಿಗಾಗಿ ಗೋವಿಂದನ ಮೊರೆ ಹೋಗಿದ್ದಾರೆ. ಜೂ. ಚಿರು ಆಗಮನಕ್ಕಾಗಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದ ನಟಿ ಮೇಘನಾ ರಾಜ್ ತಂದೆ ಸುಂದರ್ ರಾಜ್ ತಮ್ಮ ಹರಕೆ ತೀರಿಸಿದ್ದಾರೆ.
ಅಳಿಯ ಚಿರು ಅಗಲಿದ ದಿನದಂದು ತಮ್ಮ ಪುತ್ರಿ ಮೇಘನಾಗೆ ಹಾಗೂ ಹುಟ್ಟುವ ಮಗುವಿಗೆ ಯಾವುದೇ ತೊಂದರೆ ಆಗಬಾರದು ಎಂಬ ಆಶಯದೊಂದಿಗೆ ಹಿರಿಯ ನಟ ತಿರುಪತಿ ತಿಮ್ಮಪ್ಪನಿಗೆ ಕೇಶ ಮುಂಡನದ ಹರಕೆ ಕಟ್ಟಿಕೊಂಡಿದ್ದರು. ಇದೀಗ, ಸುಂದರ್ ರಾಜ್ ತಿರುಪತಿಗೆ ಭೇಟಿ ಕೊಟ್ಟು ತಮ್ಮ ಹರಕೆ ತೀರಿಸಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.