ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಯ್ತು!
ಕಮಲ್ ಹಾಸನ್ ಅಭಿನಯಿಸಲಿರುವ ಹೊಸ ಚಿತ್ರದ ಟೈಟಲ್ ಟೀಸರನ್ನು ಕಮಲ್ 66ನೇ ಹುಟ್ಟುಹಬ್ಬದ ದಿನವಾದ ಇಂದು ಬಿಡುಗಡೆಗೊಳಿಸಲಾಗಿದೆ. ‘ವಿಕ್ರಮ್’ ಹೆಸರಿನ ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರವನ್ನು ಕಮಲ್ ರಾಜ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಮಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಇರಲಿದೆ. ಲೋಕೇಶ್ ಕನಗರಾಜ್ ನಿರ್ದೇಶಿಸಲಿರುವ ಚಿತ್ರದ ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ. ಕಮಲ್ ಹಾಸನ್ ಸುಂದರ ಪರಿಸರದ ಮನೆಯೊಳಗೆ ಇರುವಂತೆ ಟೀಸರ್ ತೆರೆದುಕೊಳ್ಳುತ್ತದೆ. ಊಟಕ್ಕೆ ಬಾಳೆ ಎಲೆಯನ್ನು ಹರಡಿ, ಬಗೆಬಗೆಯ ಖಾದ್ಯಗಳನ್ನು ಎಲೆಗೆ ಬಡಿಸುತ್ತಾ, ವಿವಿಧ […]
ಕಮಲ್ ಹಾಸನ್ ಅಭಿನಯಿಸಲಿರುವ ಹೊಸ ಚಿತ್ರದ ಟೈಟಲ್ ಟೀಸರನ್ನು ಕಮಲ್ 66ನೇ ಹುಟ್ಟುಹಬ್ಬದ ದಿನವಾದ ಇಂದು ಬಿಡುಗಡೆಗೊಳಿಸಲಾಗಿದೆ. ‘ವಿಕ್ರಮ್’ ಹೆಸರಿನ ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರವನ್ನು ಕಮಲ್ ರಾಜ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಮಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಇರಲಿದೆ. ಲೋಕೇಶ್ ಕನಗರಾಜ್ ನಿರ್ದೇಶಿಸಲಿರುವ ಚಿತ್ರದ ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ.
ಕಮಲ್ ಹಾಸನ್ ಸುಂದರ ಪರಿಸರದ ಮನೆಯೊಳಗೆ ಇರುವಂತೆ ಟೀಸರ್ ತೆರೆದುಕೊಳ್ಳುತ್ತದೆ. ಊಟಕ್ಕೆ ಬಾಳೆ ಎಲೆಯನ್ನು ಹರಡಿ, ಬಗೆಬಗೆಯ ಖಾದ್ಯಗಳನ್ನು ಎಲೆಗೆ ಬಡಿಸುತ್ತಾ, ವಿವಿಧ ಆಯುಧಗಳನ್ನು ಗೌಪ್ಯವಾಗಿ ಜೋಡಿಸಿಡುವ ಕಮಲ್ ಹಾಸನ್ ಖಡಕ್ ಲುಕ್ ಅಭಿಮಾನಿಗಳನ್ನು ರೋಮಾಂಚನಗೊಳಿಸುವಂತಿದೆ.
ಚಿತ್ರಕ್ಕೆ ‘ವಿಕ್ರಮ್’ ಎಂಬ ಶೀರ್ಷಿಕೆಯನ್ನು ಘೋಷಿಸಲಾಗಿದ್ದು, ಇದು 1986ರಲ್ಲಿ ತೆರೆಕಂಡ ಕಮಲ್ ಹಾಸನ್ ಅಭಿನಯದ ಆಕ್ಷನ್ ಚಿತ್ರದ ಹೆಸರಾಗಿದೆ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನಾದರೂ ಸಂಬಂಧ ಇರಲಿದೆಯೇ? ಇದು 1986ರ ವಿಕ್ರಮ್ ಸಿನಿಮಾದ ಮುಂದುವರಿದ ಭಾಗವೇ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡುವಂತೆ ಮಾಡಿದೆ. ಚಿತ್ರವು ಚೆನ್ನೈ ಸುತ್ತಮುತ್ತ ಚಿತ್ರೀಕರಣಗೊಳ್ಳಲಿದ್ದು, ಮುಂದಿನ ಏಪ್ರಿಲ್ ವೇಳೆಗೆ ತೆರೆಕಾಣುವ ನಿರೀಕ್ಷೆ ಇದೆ.
Happy to launch the title teaser of my film today; directed by Mr @Dir_Lokesh Enjoy!#ஆரம்பிக்கலாங்களா#என்வீரமேவாகையேசூடும் #vikram@RKFI @anirudhofficial https://t.co/TXKNKLho5n
— Kamal Haasan (@ikamalhaasan) November 7, 2020