Yash: ‘ಎಲ್ಲಾ ಗೇಲಿಗೂ ಹೊಡಿ ಗೋಲಿ’; ಖಡಕ್ ಡೈಲಾಗ್​ನೊಂದಿಗೆ ಬಂದ ಯಶ್

ಯಶ್​ಗೆ ಖ್ಯಾತಿ ತಂದುಕೊಟ್ಟಿದ್ದು ‘ಕೆಜಿಎಫ್​’ ಸರಣಿ. ಈ ಚಿತ್ರದಲ್ಲಿ ಬರುವ ಖಡಕ್ ಡೈಲಾಗ್​ಗಳು ಎಲ್ಲರ ಗಮನ ಸೆಳೆದಿತ್ತು. ಈಗ ಯಶ್ ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ.

Yash: ‘ಎಲ್ಲಾ ಗೇಲಿಗೂ ಹೊಡಿ ಗೋಲಿ’; ಖಡಕ್ ಡೈಲಾಗ್​ನೊಂದಿಗೆ ಬಂದ ಯಶ್
ಯಶ್

Updated on: Mar 23, 2023 | 2:29 PM

ಮುಖ್ಯಾಂಶಗಳು

  • ಪಾನೀಯ ಜಾಹೀರಾತಿನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್
  • ವೈರಲ್ ಆಯ್ತು ಹೊಸ ಜಾಹೀರಾತು
  • ಯಶ್ ಮುಂದಿನ ಸಿನಿಮಾ ಬಗ್ಗೆ ಮೂಡಿದೆ ಕುತೂಹಲ

ನಟ ಯಶ್ (Yash) ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ಕುತೂಹಲ ಇದೆ. ಆದರೆ, ಸದ್ಯಕ್ಕಂತೂ ಈ ಕುತೂಹಲ ತಣ್ಣಗಾಗುವ ಸೂಚನೆ ಸಿಕ್ಕಿಲ್ಲ. ಯುಗಾದಿ ದಿನ ಯಶ್ ಹೊಸ ಸಿನಿಮಾ ಘೋಷಣೆ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದು ನಿಜವಾಗಿಲ್ಲ. ಯಶ್ ಹೊಸ ಸಿನಿಮಾ ಬೇಗ ಅನೌನ್ಸ್ ಆಗಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಯಶ್ ಅನೇಕ ಬ್ರ್ಯಾಂಡ್​ಗಳ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಅವರು ಹಂಚಿಕೊಂಡಿರೋ ಹೊಸ ವಿಡಿಯೋ ವೈರಲ್ ಆಗಿದೆ. ಖಡಕ್ ಡೈಲಾಗ್ ಮೂಲಕ ಯಶ್ ಮಿಂಚಿದ್ದಾರೆ.

ಯಶ್ ಪಾನೀಯ ಸಂಸ್ಥೆ ಪೆಪ್ಸಿಗೆ ರಾಯಭಾರಿ ಆಗಿದ್ದಾರೆ. ಇದರ ಪ್ರಚಾರದಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಬಾಲಿವುಡ್​ನಿಂದ ರಣವೀರ್ ಸಿಂಗ್ ಅವರನ್ನು ಈ ಸಂಸ್ಥೆ ಆಯ್ಕೆ ಮಾಡಿಕೊಂಡರೆ ಕನ್ನಡದಿಂದ ಯಶ್ ಇದ್ದಾರೆ. ಕನ್ನಡದ ಹೀರೋ ಒಬ್ಬರು ಈ ಬ್ರ್ಯಾಂಡ್​ಗೆ ಅಂಬಾಸಿಡರ್ ಆಗಿದ್ದು ಇದೇ ಮೊದಲು. ಈಗ ಅವರ ಹೊಸ ಜಾಹೀರಾತು ಗಮನ ಸೆಳೆದಿದೆ.

ಯಶ್​ಗೆ ಖ್ಯಾತಿ ತಂದುಕೊಟ್ಟಿದ್ದು ‘ಕೆಜಿಎಫ್​’ ಸರಣಿ. ಈ ಚಿತ್ರದಲ್ಲಿ ಬರುವ ಖಡಕ್ ಡೈಲಾಗ್​ಗಳು ಎಲ್ಲರ ಗಮನ ಸೆಳೆದಿತ್ತು. ‘ಕೆಜಿಎಫ್ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ಬಾಚಿತ್ತು. ಈ ಚಿತ್ರದಿಂದ ಯಶ್ ಖ್ಯಾತಿಯೂ ಹೆಚ್ಚಿತು. ಈ ಕಾರಣಕ್ಕೆ ಯಶ್ ಅವರನ್ನು ಪೆಪ್ಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿದೆ. ಈಗ ಪೆಪ್ಸಿ ಜಾಹೀರಾತಿಗೆ ‘ಕೆಜಿಎಫ್ 2’ ಚಿತ್ರದಲ್ಲಿ ಬರೋ ರೀತಿಯಲ್ಲೇ ಯಶ್ ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಯಶ್ ಬಾಯಲ್ಲಿ ಡೈಲಾಗ್ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Ugadi 2023: ಯಶ್​-ರಾಧಿಕಾ ಪಂಡಿತ್​ ಮನೆಯಲ್ಲಿ ಯುಗಾದಿ ಸಂಭ್ರಮ; ಅಭಿಮಾನಿಗಳಿಗೆ ಪ್ರೀತಿಯ ಶುಭಾಶಯ


‘ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿ ಮಾತಿನ ದಾಳಿ ಮಾಡ್ತಾರೆ. ಇದು ಮಾಡು, ಅದು ಬೇಡ ಅಂತಾರೆ. ಹೇಳಿದ್ದು ಕೇಳ್ತೀವಿ ಅಂತ ಗೊತ್ತಾದ್ರೆ ಮಾತ್ ಮಾತಲ್ಲೇ ಜಡ್ಜ್​ ಮಾಡ್ತಾರೆ, ಕಂಟ್ರೋಲ್ ಮಾಡ್ತಾರೆ, ಮಾತಲ್ಲೇ ಮುಳುಗಿಸಿ ಬಿಡ್ತಾರೆ. ಎಲ್ಲಾ ಗೇಲಿಗೂ ಹೊಡಿ ಗೋಲಿ. ನೀನು ನೀನಾಗಿರು’ ಎಂದು ಯಶ್ ಹೇಳಿದ್ದಾರೆ. ಸದ್ಯ ಈ ಜಾಹೀರಾತು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಯಶ್​ಗಿಂತ ರಾಧಿಕಾ ಪಂಡಿತ್ ಎಷ್ಟು ವರ್ಷ ದೊಡ್ಡವರು? ಇಲ್ಲಿದೆ ವಯಸ್ಸಿನ ಅಂತರದ ಮಾಹಿತಿ

ಯಶ್ ಮುಂದಿನ ಪ್ರಾಜೆಕ್ಟ್ ಯಾವುದು ಎನ್ನುವ ಬಗ್ಗೆ ಅನೇಕರಿಗೆ ಕುತೂಹಲ ಇದೆ. ‘ಕೆಜಿಎಫ್ 2’ ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದರೂ ಈ ಬಗ್ಗೆ ಅಪ್​ಡೇಟ್ ಸಿಕ್ಕಿಲ್ಲ. ‘ನನಗೆ ಸಮಯ ಕೊಡಿ’ ಎಂದು ಯಶ್ ಈ ವರ್ಷದ ಆರಂಭದಲ್ಲಿ ಹೇಳಿದ್ದರು. ಯಶ್ ದೊಡ್ಡ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಯಶ್ ಅವರಿಂದಲೇ ಉತ್ತರ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us