‘ಇದು ನಮ್ಮ ಬಾಸ್ ತಾಕತ್ತು’; ಯಶ್ ಮನೆ ಮುಂದೆ ಅಭಿಮಾನಿಗಳ ಕಿಲೋಮೀಟರ್ ಉದ್ದದ ಸಾಲು

Yash: ಯಶ್ ಅವರು ಬೆಂಗಳೂರಿನ ಗಾಲ್ಫ್​ ರಸ್ತೆಯಲ್ಲಿ ಮನೆ ಹೊಂದಿದ್ದಾರೆ. ತಮ್ಮ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಹೇಳಿದ್ದರು. ಅವರನ್ನು ನೋಡಲು ಜನಸಾಗರವೇ ನೆರೆದಿತ್ತು.

‘ಇದು ನಮ್ಮ ಬಾಸ್ ತಾಕತ್ತು’; ಯಶ್ ಮನೆ ಮುಂದೆ ಅಭಿಮಾನಿಗಳ ಕಿಲೋಮೀಟರ್ ಉದ್ದದ ಸಾಲು
ಅಭಿಮಾನಿಗಳ ಜತೆ ಯಶ್

Updated on: Feb 02, 2023 | 11:47 AM

ಯಶ್ (Yash) ಅವರು ಈ ವರ್ಷ ತಮ್ಮ ಬರ್ತ್​ಡೇನ ವಿದೇಶದಲ್ಲಿ ಆಚರಿಸಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳನ್ನು ಭೇಟಿ ಮಾಡೋಕೆ ಸಾಧ್ಯವಾಗಿರಲಿಲ್ಲ. ಆದರೆ, ದುಬೈಗೆ ತೆರಳುವುದಕ್ಕೂ ಮುನ್ನ ಅಭಿಮಾನಿಗಳ ಜತೆ ಸಮಯ ಕಳೆದಿದ್ದರು. ಅವರನ್ನು ಭೇಟಿ ಮಾಡಿ ಫೋಟೋಗೆ ಪೋಸ್ ನೀಡಿದ್ದರು. ಆಗ ಅವರ ಮನೆಯ ಮುಂದೆ ಸಾವಿರಾರು ಫ್ಯಾನ್ಸ್ ನೆರೆದಿದ್ದರು. ಇಂದು (ಫೆಬ್ರವರಿ 2) ಕೂಡ ರಾಕಿಂಗ್ ಸ್ಟಾರ್ ಯಶ್ ಮನೆ ಮುಂದೆ ಅಭಿಮಾನಿಗಳ ಸಾಲು ಕಿಲೋಮೀಟರ್ ಉದ್ದ ಇತ್ತು. ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಯಶ್ ಹೇಳಿದ್ದರು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆ ಎದುರು ಆಗಮಿಸಿದ್ದರು. ಈ ವಿಡಿಯೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.

ಯಶ್ ಅವರು ಬೆಂಗಳೂರಿನ ಗಾಲ್ಫ್​ ರಸ್ತೆಯಲ್ಲಿ ಮನೆ ಹೊಂದಿದ್ದಾರೆ. ತಮ್ಮ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಹೇಳಿದ್ದರು. ಅವರನ್ನು ನೋಡಲು ಜನಸಾಗರವೇ ನೆರೆದಿತ್ತು. ನೆಚ್ಚಿನ ಹೀರೋ ಜತೆ ಫೋಟೋ ತೆಗಿಸಿಕೊಂಡು ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಈ ವಿಡಿಯೋ ನೋಡಿ ಯಶ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಅನೇಕರು ಯಶ್​ ಅವರ ಭಾವಚಿತ್ರವನ್ನು ಪೇಂಟ್ ಮಾಡಿ ತಂದಿದ್ದಾರೆ. ಯಶ್​ಗೆ ಗಿಫ್ಟ್​ ಕೊಡಬೇಕು ಅನ್ನೋದು ಅವರ ಆಸೆ. ಯಶ್ ಅವರನ್ನು ನೋಡಲು ಕಿಲೋಮೀಟರ್ ಉದ್ದದ ಕ್ಯೂ ನೆರೆದಿತ್ತು. ‘ಇದು ನಮ್ಮ ಬಾಸ್ ತಾಕತ್ತು’ ಎಂದು ಯಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ‘ಬಾಲಿವುಡ್​ಗೆ ಅಪರಿಚಿತನಾಗಿದ್ದ ಯಶ್ 500 ಕೋಟಿ ರೂ. ಬಿಸ್ನೆಸ್ ಮಾಡುವಾಗ ಪಠಾಣ್​ ಯಶಸ್ಸು ಯಾವ ಲೆಕ್ಕ?’ ಆರ್​ಜಿವಿ

ಯಶ್ ಮುಂದಿನ ಸಿನಿಮಾ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದಿದೆ. ಅಲ್ಲಿಂದ ಇಲ್ಲಿಯವರೆಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಇದ್ದೇ ಇದೆ. ಆದರೆ, ಇದಕ್ಕೆ ಉತ್ತರ ಸಿಕ್ಕಿಲ್ಲ. ಯಶ್ 19ನೇ ಚಿತ್ರಕ್ಕೆ ಬಂಡವಾಳ ಕೆವಿಎನ್ ಪ್ರೊಡಕ್ಷನ್​​ ಹೂಡಲಿದೆ ಎಂದು ಕೂಡ ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us