ನಟನೆಯಲ್ಲಿ ಸೂಪರ್ ಓದಿನಲ್ಲಿ ಬಂಪರ್, ನಟಿ ಅಂಕಿತಾ ಪಿಯುಸಿ ಅಂಕವೆಷ್ಟು?

Ankita Jayaram: ಸಿನಿಮಾ ರಂಗದಲ್ಲಿ ಉತ್ತಮ ಶಿಕ್ಷಿತರು ಹೆಚ್ಚಾಗುತ್ತಿದ್ದಾರೆ, ಅದರಲ್ಲೂ ಶಿಕ್ಷಿತ ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ (ಏಪ್ರಿಲ್ 09) ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಜನಪ್ರಿಯವಾಗಿರುವ ನಟಿ ಅಂಕಿತಾ ಜಯರಾಮ್, ತಮ್ಮ ದ್ವಿತೀಯ ಪಿಯುಸಿ ಅಂಕಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟನೆಯಲ್ಲಿ ಸೂಪರ್ ಓದಿನಲ್ಲಿ ಬಂಪರ್, ನಟಿ ಅಂಕಿತಾ ಪಿಯುಸಿ ಅಂಕವೆಷ್ಟು?
Ankita1

Updated on: Apr 10, 2026 | 8:53 AM

ಸಿನಿಮಾ (Cinema) ಅಥವಾ ಧಾರಾವಾಹಿ ನಟನೆಯಲ್ಲಿ ಬ್ಯುಸಿಯಾದವರು ಓದಿಗೆ ತಿಲಾಂಜಲಿ ಇಡುವವರೇ ಹೆಚ್ಚು. ಮೊದಲೆಲ್ಲ ನಟಿಯರು ಸಿನಿಮಾ ಅವಕಾಶ ಸಿಕ್ಕರೆ ಓದನ್ನೇ ನಿಲ್ಲಿಸಿಬಿಡುತ್ತಿದ್ದರು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಿನಿಮಾ ರಂಗದಲ್ಲಿ ಉತ್ತಮ ಶಿಕ್ಷಿತರು ಹೆಚ್ಚಾಗುತ್ತಿದ್ದಾರೆ, ಅದರಲ್ಲೂ ಶಿಕ್ಷಿತ ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ (ಏಪ್ರಿಲ್ 09) ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಜನಪ್ರಿಯವಾಗಿರುವ ನಟಿ ಅಂಕಿತಾ ಜಯರಾಮ್, ತಮ್ಮ ದ್ವಿತೀಯ ಪಿಯುಸಿ ಅಂಕಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಯುವರಾಜ’, ‘ಯಜಮಾನ’ ಸೇರಿದಂತೆ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿ ಮತ್ತು ಕೆಲವು ಕನ್ನಡ ಧಾರಾವಾಹಿಗಳಲ್ಲಿಯೂ ನಟಿಸಿರುವ ಅಂಕಿತಾ ಜಯರಾಮ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ 97% ಅಂಕಗಳನ್ನು ಗಳಿಸಿಕೊಂಡಿದ್ದಾರೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅಂಕಿತಾ ಜಯರಾಮ್, ದರ್ಶನ್ ಜೊತೆ ‘ಕ್ರಾಂತಿ’, ಪುನೀತ್ ರಾಜ್‌ಕುಮಾರ್ ಜೊತೆಗೆ ‘ಯುವರಾಜ’, ಡಾಲಿ ನಟನೆಯ ‘ರತ್ನನ್ ಪ್ರಪಂಚ’, ಶಿವರಾಜ್ ಕುಮಾರ್ ಜೊತೆಗೆ ‘ವೇದ’, ‘ಶೋಕಿವಾ’, ಶ್ರೀಮುರಳಿಯ ‘ಭರಾಟೆ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸ್ತುತ ‘ಕರ್ಣ’ ಧಾರಾವಾಹಿಯ ರಿಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಕಾಗದ’ ಸಿನಿಮಾದ ಮೂಲಕ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಂಕಿತಾ ಮೊದಲಿನಿಂದಲೂ ಒಳ್ಳೆಯ ವಿದ್ಯಾರ್ಥಿನಿ ಈ ಮೊದಲು ಎಸ್ಎಸ್ಎಲ್ಸಿಯಲ್ಲೂ ಅವರು 95% ಅಂಕ ಗಳಿಸಿ ಸಾಧನೆ ಮಾಡಿದ್ದರು.

ಇದನ್ನೂ ಓದಿ:ಸಿನಿಮಾ ಆಗಲಿದೆ ಇಮ್ಮಡಿ ಪುಲಿಕೇಶಿ ಜೀವನ-ಸಾಧನೆ: ಸಿನಿಮಾ ಹೆಸರೇನು?

ತಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು ಫೇಸ್​​ಬುಕ್​​ನಲ್ಲಿ ಹಂಚಿಕೊಂಡಿರುವ ನಟಿ ಅಂಕಿತಾ, “ಮಗಳಿಂದ ಅಪ್ಪನಿಗೆ ಹುಟ್ಟುಹಬ್ಬದ ಕಾಣಿಕೆ ಇದು. ಕಂಡ ಕನಸು ನನಸಾದ ಸುದಿನ. ಭಗವಂತ, ಗುರು ರಾಯರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಹಾರೈಕೆಯಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು” ಎಂದಿದ್ದಾರೆ. ಅಂಕಿತಾ ಬೆಂಗಳೂರಿನ ಎಸ್‌ಎಸ್‌ಎಂಆರ್‌ವಿ (SSMRV) ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸ್ಟಾಟಿಸ್ಟಿಕ್ಸ್ (Statistics) ನಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಬಿಸಿನೆಸ್ ಸ್ಟಡೀಸ್ ನಲ್ಲಿ 98, ಕನ್ನಡದಲ್ಲಿ 97, ಅಕೌಂಟೆನ್ಸಿ ಯಲ್ಲಿ 96, ಇಂಗ್ಲಿಷ್ 94 ಅಂಕ ಮತ್ತು ಕಂಪ್ಯೂಟರ್ ಸೈನ್ಸ್ 94 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us