‘ಪ್ರೇಮದ ಊರಲಿ’ ನಟಿ ಆರಾಧ್ಯಾ ನಾಯರ್​​​ಗೆ ಮಲಯಾಳಂ ಸೀರಿಯಲ್ ಆಫರ್

‘ಪ್ರೇಮದ ಊರಲಿ’ ಸಿನಿಮಾ ಮೂಲಕ ಭರ್ಜರಿ ಜನಪ್ರಿಯತೆ ಗಳಿಸಿರುವ ಬೆಳಗಾವಿಯ ಪ್ರತಿಭಾವಂತ ನಟಿ ಆರಾಧ್ಯಾ ನಾಯರ್, ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಮುಂಬರುವ ದಿನಗಳಲ್ಲಿ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ತೆರೆ ಹಂಚಿಕೊಳ್ಳುವ ದೊಡ್ಡ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಪ್ರೇಮದ ಊರಲಿ’ ನಟಿ ಆರಾಧ್ಯಾ ನಾಯರ್​​​ಗೆ ಮಲಯಾಳಂ ಸೀರಿಯಲ್ ಆಫರ್
ಆರಾಧ್ಯಾ ನಾಯರ್

Updated on: Nov 16, 2026 | 11:21 AM

ಸ್ಯಾಂಡ್‌ವುಡ್‌ನಲ್ಲಿ ಸದ್ಯ ಸಖತ್ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ನಟಿ ಆರಾಧ್ಯಾ ನಾಯರ್ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಥಾನಾಯಕಿ ರುಕ್ಮಿಣಿ (ತಪಸ್ವಿನಿ ಪೂಣಚ್ಚ) ಅವರ ಗೆಳತಿಯಾಗಿ ಬಣ್ಣ ಹಚ್ಚಿರುವ ಆರಾಧ್ಯಾ, ತಮ್ಮ ಲವಲವಿಕೆಯ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.

ಸಿನಿಮಾದಲ್ಲಿ ಆರಾಧ್ಯಾ ನಾಯರ್ ಹೊಡೆಯುವ ‘ನೀನೇನ್ ದೊಡ್ಡ ಸೊನ್ನೆನಾ’ ಎಂಬ ಡೈಲಾಗ್ ಸಿನಿಪ್ರಿಯರಿಗೆ ಸಖತ್ ಇಷ್ಟವಾಗಿದೆ. ಈ ಪಾತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದ್ದು, ನಟಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿದೆ. ‘ಪ್ರೇಮದ ಊರಲಿ’ ಚಿತ್ರದ ಯಶಸ್ಸು ಆರಾಧ್ಯಾ ಅವರ ಸಿನಿಪಯಣಕ್ಕೆ ಹೊಸ ತಿರುವು ನೀಡಿದ್ದು, ಕನ್ನಡ ಚಿತ್ರರಂಗದಲ್ಲಿ ಅವರಿಗೆ ಒಳ್ಳೆಯ ಗುರುತು ಸಿಗುವಂತೆ ಮಾಡಿದೆ.

Loading...

ಮೂಲತಃ ಬೆಳಗಾವಿಯವರಾದ ಆರಾಧ್ಯಾ ನಾಯರ್ ಅವರಿಗೆ ಉತ್ತರ ಕರ್ನಾಟಕ ಶೈಲಿಯ ಭಾಷೆಯ ಮೇಲೆ ವಿಶೇಷ ಪ್ರೀತಿಯಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಷೆಯ ಸಿನಿಮಾದಲ್ಲೂ ನಟಿಸಿದ್ದು, ರಿಲೀಸ್​​ಗೆ ರೆಡಿ ಇದೆ. ವಿಶೇಷವೆಂದರೆ ಆರಾಧ್ಯಾ ಅವರ ತಾಯಿ ಕೇರಳದವರಾಗಿರುವುದರಿಂದ ಅವರಿಗೆ ಮಲಯಾಳಂ ಭಾಷೆಯೂ ನಿರರ್ಗಳವಾಗಿ ಹಾಗೂ ಸ್ಪಷ್ಟವಾಗಿ ಬರುತ್ತದೆ.

ಮಲಯಾಳಂ ಭಾಷೆಯ ಮೇಲಿನ ಈ ಹಿಡಿತವೇ ಅವರಿಗೆ ಕೇರಳದ ಕಿರುತೆರೆಯಲ್ಲಿ ಅವಕಾಶದ ಬಾಗಿಲು ತೆರೆಯುವಂತೆ ಮಾಡಿದೆ. ಸದ್ಯ ಆರಾಧ್ಯಾ ಮಲಯಾಳಂ ಧಾರಾವಾಹಿಯೊಂದರಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಈ ಹೊಸ ಧಾರಾವಾಹಿ ಪ್ರಸಾರವಾಗುವ ಸಾಧ್ಯತೆಯಿದ್ದು, ಕಿರುತೆರೆಯಲ್ಲೂ ಅವರು ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: 50ನೇ ದಿನಕ್ಕೆ ಕಾಲಿಟ್ಟ ‘ಪ್ರೇಮದ ಊರಲಿ’ ಸಿನಿಮಾ; ಅಬ್ಬಬ್ಬಾ, ಒಟ್ಟಾರೆ ಕಲೆಕ್ಷನ್ ಇಷ್ಟೊಂದಾ?

ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ವಿಭಿನ್ನ ಸಿನಿಮಾಗಳಲ್ಲಿ ನಟಿಸುವ ಆಲೋಚನೆಯನ್ನು ಆರಾಧ್ಯಾ ನಾಯರ್ ಹೊಂದಿದ್ದಾರೆ. ಅದರಲ್ಲೂ ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬ ದೊಡ್ಡ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಪ್ರತಿಭಾವಂತ ನಟಿ ಆರಾಧ್ಯಾ ಅವರ ಈ ಸಿನಿಮಾ ಪಯಣಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us