ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ 143 ದಿನ ಜೈಲುವಾಸ ಅನುಭವಿಸಿದ್ದ ನಟಿ ರಾಗಿಣಿ ದ್ವಿವೇದಿ ಬಿಡುಗಡೆಯಾದ ಬಳಿಕ ಇಂದು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ನಗರದ ಅಕ್ಕಿಪೇಟೆ ದರ್ಗಾಗೆ ಇಂದು ಭೇಟಿಕೊಟ್ಟ ರಾಗಿಣಿ ಅನ್ನದಾನ ಮಾಡಿಸಿದರು.
ಈ ವೇಳೆ, ಟಿವಿ9 ಜೊತೆ ಮಾತನಾಡಿದ ನಟಿ, ನನ್ನ ಅಮ್ಮ, ಅಪ್ಪನ ಬೆಂಬಲದಿಂದ ಸ್ವಲ್ಪ ಆರಾಮಾಗಿ ಇದ್ದೇನೆ. ನನಗೆ ನನ್ನ ಕುಟುಂಬದ ಸಹಕಾರ ತುಂಬಾ ಇದೆ ಎಂದು ಹೇಳಿದರು.
ಜೊತೆಗೆ, ಈಗ ಸಿನಿಮಾ ಆಫರ್ ಬರುತ್ತಿವೆ, ಕಥೆಗಳನ್ನ ಕೇಳುತ್ತಿದ್ದೇನೆ. ಈ ತಿಂಗಳಲ್ಲೇ ಶೂಟಿಂಗ್ ಶುರುವಾಗುತ್ತಿದೆ ಎಂದು ಸಹ ಹೇಳಿದರು.
ಕರ್ನಾಟಕ ಪೊಲೀಸ್ ಗರುಡಾ ಪಡೆಯಲ್ಲಿ ಮಹಿಳೆಯರ ಹವಾ: ಟೀಂಗೆ ಎಂಟ್ರಿಕೊಟ್ಟ ಲೇಡಿ ಕಮಾಂಡೋಸ್!