ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಶೆಯ ನಂಟಿನಲ್ಲಿ ಸದ್ಯ ಕಂಬಿ ಎಣಿಸುತ್ತಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಈ ಬಾರಿ ದೀಪಾವಳಿಗೆ ಹೊಸ ಬಟ್ಟೆ ಕೊಡಿ ಇಲ್ಲ ನಮ್ಮ ಮನೆಯವರನ್ನು ಕರೆಸಿ ಅಂತಾ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂಜನಾ ಮತ್ತು ರಾಗಿಣಿ ಡ್ರಗ್ಸ್ ಕೇಸ್ ಸಂಬಂಧ ಜೈಲುಪಾಲಾಗಿದ್ದು, ಕಳೆದ 50ಕ್ಕೂ ಹೆಚ್ಚು ದಿನದಿಂದ ತಮ್ಮ ಪೋಷಕರನ್ನು ನೋಡಿಲ್ಲವಂತೆ. ಅದರಲ್ಲೂ, ನಟಿಮಣಿಯರಿಗೆ ಈ ಬಾರಿ ದಸರಾ ಹಬ್ಬವನ್ನೂ ಸಹ ಆಚರಿಸಲಾಗಲಿಲ್ಲ. 2020ರ ವರ್ಷ ಅವರ ಸಂತಸವನ್ನು ಕಿತ್ತುಕೊಂಡಿದೆ. ಹೀಗಾಗಿ, ದೀಪಾವಳಿಗೆ ಹೊಸ ಬಟ್ಟೆ ಕೊಡಿ ಇಲ್ಲಾ ನಮ್ಮ ಮನೆಯವರನ್ನು ಕರೆಸಿ ಅಂತಾ ಡಿಮ್ಯಾಂಡ್ ಇಟ್ಟಿದ್ದಾರೆ.
ಇದೇ ಮೊದಲ ಬಾರಿ ಈ ರೀತಿಯಾಗಿ ಆಗುತ್ತಿರೋದು. ದೀಪಾವಳಿ ಹಬ್ಬಕ್ಕೆ ಬಟ್ಟೆ ಕೊಟ್ಟು ಹೋಗ್ತಾರೆ. ನಮ್ಮ ಪೋಷಕರನ್ನು ಬಿಡಿ ಎಂದು ನಟಿ ಮಣಿಯರು ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗಿದೆ.
Published On - 1:29 pm, Sat, 14 November 20