ಮಥಾಯಿಸ್ ಜೊತೆ ಡೇಟಿಂಗ್ ಒಪ್ಪಿಕೊಂಡ ತಾಪ್ಸೀ | Taapsee is in relationship with Danish Badminton player

ಸಿನಿಮಾ ನಟ–ನಟಿಯರ ಬಗ್ಗೆ ಒಂದು ಮಾತಿದೆ. ಅವರ ತಮ್ಮ ವೈಯಕ್ತಿಕ ಬದುಕೊಂದನ್ನು ಬಿಟ್ಟು ಉಳಿದೆಲ್ಲ ಸೆಲಿಬ್ರಿಟಿಗಳ ವೈಯಕ್ತಿಕ ಬದುಕು ಕುರಿತು ಧಾರಾಳವಾಗಿ ಮಾತಾಡುತ್ತಾರೆ, ಗಾಸಿಪ್ ಮಾಡುತ್ತಾರೆ. ಬಾಲಿವುಡ್​ನಲ್ಲಿ ಭಾರಿ ಹೆಸರು ಮಾಡಿರುವ, ಅತ್ಯಂತ ಪ್ರತಿಭಾವಂತ ನಟಿ ತಾಪ್ಸೀ ಪನ್ನು ಯಾರಿಗೆ ಗೊತ್ತಿಲ್ಲ? ಆಕೆಯೂ ಇತರ ನಟ ನಟಿಯರಿಗಿಂತ ಭಿನ್ನವಲ್ಲ. ಪರದೆಯ ಮೇಲೆ ತೀರ ಗಂಭೀರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈಕೆಗೂ ಒಬ್ಬರ ಮೇಲೆ ಪ್ರೀತಿ ಹುಟ್ಟಿಬಿಟ್ಟಿದೆಯಂತೆ. ಆದರೆ, ಬೇರೆಯವರಂತೆ ಈಕೆ ಸಹ ಇದುವರೆಗೆ ವಿಷಯವನ್ನು ಮುಚ್ಚಿಟ್ಟಿದ್ದಳು. ಆದರೆ ಈ ಸೆಲಿಬ್ರಿಟಿಗಳ […]

ಮಥಾಯಿಸ್ ಜೊತೆ ಡೇಟಿಂಗ್ ಒಪ್ಪಿಕೊಂಡ ತಾಪ್ಸೀ | Taapsee is in relationship with Danish Badminton player
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 14, 2020 | 6:42 PM

ಸಿನಿಮಾ ನಟನಟಿಯರ ಬಗ್ಗೆ ಒಂದು ಮಾತಿದೆ. ಅವರ ತಮ್ಮ ವೈಯಕ್ತಿಕ ಬದುಕೊಂದನ್ನು ಬಿಟ್ಟು ಉಳಿದೆಲ್ಲ ಸೆಲಿಬ್ರಿಟಿಗಳ ವೈಯಕ್ತಿಕ ಬದುಕು ಕುರಿತು ಧಾರಾಳವಾಗಿ ಮಾತಾಡುತ್ತಾರೆ, ಗಾಸಿಪ್ ಮಾಡುತ್ತಾರೆ. ಬಾಲಿವುಡ್​ನಲ್ಲಿ ಭಾರಿ ಹೆಸರು ಮಾಡಿರುವ, ಅತ್ಯಂತ ಪ್ರತಿಭಾವಂತ ನಟಿ ತಾಪ್ಸೀ ಪನ್ನು ಯಾರಿಗೆ ಗೊತ್ತಿಲ್ಲ? ಆಕೆಯೂ ಇತರ ನಟ ನಟಿಯರಿಗಿಂತ ಭಿನ್ನವಲ್ಲ.

ಪರದೆಯ ಮೇಲೆ ತೀರ ಗಂಭೀರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈಕೆಗೂ ಒಬ್ಬರ ಮೇಲೆ ಪ್ರೀತಿ ಹುಟ್ಟಿಬಿಟ್ಟಿದೆಯಂತೆ. ಆದರೆ, ಬೇರೆಯವರಂತೆ ಈಕೆ ಸಹ ಇದುವರೆಗೆ ವಿಷಯವನ್ನು ಮುಚ್ಚಿಟ್ಟಿದ್ದಳು. ಆದರೆ ಈ ಸೆಲಿಬ್ರಿಟಿಗಳ ಸಮಸ್ಯೆಯೇನು ಗೊತ್ತಾ? ಸಾರ್ವಜನಿಕ ಪ್ರದೇಶಗಳಲ್ಲಿ ಅವರನ್ನು ಜನ ಗುರುತಿಸಿಬಿಡುತ್ತಾರೆ. ಹಾಗಾಗಿ ರೋಮಾನ್ಸ್ ಮಾಡಬೇಕಾದರೆ ಬಹಳ ಕದ್ದುಮುಚ್ಚಿ ಮಾಡಬೇಕಾಗುತ್ತದೆ.

ಅಂದಹಾಗೆ, ಈ ಸುಂದರಿಯ ಬದುಕನ್ನು ಪ್ರವೇಶಿರುವುದು ಭಾರತೀಯನಲ್ಲ ಅನ್ನೋದು ಅಕೆಯನ್ನು ಆರಾಧಿಸುತ್ತಿರುವ ಲಕ್ಷಾಂತರ ಪಡ್ಡೆಗಳಿಗೆ ನಿರಾಶೆ ಮತ್ತು ಸೋಜಿಗವನ್ನುಂಟು ಮಾಡಬಹುದು. ಹೌದು, 2010 ರಲ್ಲೇ ದಕ್ಷಿಣ ಭಾರತದ ಚಿತ್ರಗಳ ಮೂಲಕ ಸಿನಿಮಾರಂಗ ಪ್ರವೇಶಿಸಿದರೂ 2012 ರಲ್ಲಿ ಬಿಡುಗಡೆಯಾದ ‘ಚಷ್ಮೆ ಬದ್ದೂರ್’ ಹೆಸರಿನ ಹಿಂದಿ ಚಿತ್ರದಿಂದ ಬಾಲಿವುಡ್​ಗೆ ಜಿಗಿದು ‘ಪಿಂಕ್’, ‘ನಾಮ್ ಶಬಾನಾ’, ‘ಮುಲ್ಕ್’, ‘ಮಿಶನ್ ಮಂಗಲ್’ ಮತ್ತು ‘ಥಪ್ಪಡ್’ ಮೊದಲಾದವು ಸೇರಿದಂತೆ ಇನ್ನೂ ಹಲವಾರು ಹಿಂದಿ ಚಿತ್ರಗಳಲ್ಲಿ ತನ್ನ ಮನೋಜ್ಞ ಅಭಿನಯದಿಂದ ಜನಪ್ರಿಯತೆಯ ಶಿಖರ ತಲುಪಿರುವ ಆಕೆ ಡೆನ್ಮಾರ್ಕ್​ನ ಬ್ಯಾಡ್ಮಿಂಟನ್ ಆಟಗಾರ ಮಥಾಯಿಸ್ ಬೊ ಒಂದಿಗೆ ಡೇಟಿಂಗ್ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

ಇದುವರೆಗೆ ವಿಷಯವನ್ನು ಮುಚ್ಚಿಟ್ಟಿದ್ದು ಯಾಕೆ ಮೇಡಂ ಅಂತ, ಮಾಧ್ಯಮದವರು ಕೇಳಿದಾಗ, 33 ವರ್ಷದ ತಾಪ್ಸೀ, ಮೀಡಿಯಾದಲ್ಲೆಲ್ಲ ಅದು ದೊಡ್ಡ ಸುದ್ದಿಯಾಗಿ, ತನ್ನ ಕರೀಯರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತಿತ್ತು ಅಂತ ಹೇಳಿದ್ದಾರೆ.

ಮಥಾಯಿಸ್​ರನ್ನು ಬ್ಯಾಡ್ಮಿಂಟನ್ ಪಂದ್ಯವೊಂದು ನಡೆಯುತ್ತಿದ್ದಾಗ ಭೇಟಿಯಾದ ನಂತರ, ಟ್ವೀಟ್​ಗಳ ಮೂಲಕ ತಮ್ಮ ನಡುವೆ ಕಮ್ಯುನಿಕೇಷನ್ ಶುರುವಾಯಿತು ಎಂದು ಹೇಳುವ ನಟಿ ಅದೀಗ ಪ್ರೀತಿಗೆ ತಿರುಗಿದೆ ಅಂದಿದ್ದಾರೆ.

ತಮ್ಮಿಬ್ಬರ ನಡುವಿನ ಸಂಬಂಧ, ಸಮಾಧಾನಕರವಾಗಿದೆ, ಸಂತಸಮಯವಾಗಿದೆ, ಸ್ಥಿರವಾಗಿದೆ, ಮತ್ತು ತೃಪ್ತಿದಾಯಕವಾಗಿದೆ ಎಂದು ಆಕೆ ಹೇಳಿದ್ದಾರೆ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್