ಚಿಕನ್ ಅಂತೂ ಕೊಡ್ಲಿಲ್ಲ.. ಸಿಗರೇಟ್ ಆದ್ರೂ ಕೊಡಿ ಅಂತ ಕೇಳಿದರಂತೆ ಸಂಜನಾ!
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ನಟಿ ಸಂಜನಾಳ ಬಯಕೆಗಳ ಸರಮಾಲೆಗೆ ಜೈಲಿನ ಅಧಿಕಾರಿಗಳು ಹೈರಾಣಾಗಿ ಹೋಗಿದ್ದಾರೆ. ಐಷಾರಾಮಿ ಜೀವನ ಸಾಗಿಸುತ್ತಿದ್ದ ನಟಿ ಸಂಜನಾ ಗುರುವಾರ ತಡ ರಾತ್ರಿ ಜೈಲು ಅಧಿಕಾರಿಗಳನ್ನು ಚಿಕನ್ ಊಟ ಕೇಳಿದ್ದಾಳೆ. ಜೈಲಿನ ಅಧಿಕಾರಿಗಳು ಚಿಕನ್ ಊಟ ಇವತ್ತು ಕೊಡಲ್ಲ, ಬದಲಿಗೆ ಜೈಲಿನ ನಿಯಮಾವಳಿ ಪ್ರಕಾರ ನಾಳೆ ಶುಕ್ರವಾರ ಮಾತ್ರ ಚಿಕನ್ ಊಟ ನೀಡಲಾಗುತ್ತೆ ಎಂದಿದ್ದಾರೆ. ಇದರಿಂದ ಬೇಸರಗೊಂಡ ಸಂಜನಾ ಚಿಕನ್ ಕೊಡಲಿಲ್ಲ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ನಟಿ ಸಂಜನಾಳ ಬಯಕೆಗಳ ಸರಮಾಲೆಗೆ ಜೈಲಿನ ಅಧಿಕಾರಿಗಳು ಹೈರಾಣಾಗಿ ಹೋಗಿದ್ದಾರೆ.
ಐಷಾರಾಮಿ ಜೀವನ ಸಾಗಿಸುತ್ತಿದ್ದ ನಟಿ ಸಂಜನಾ ಗುರುವಾರ ತಡ ರಾತ್ರಿ ಜೈಲು ಅಧಿಕಾರಿಗಳನ್ನು ಚಿಕನ್ ಊಟ ಕೇಳಿದ್ದಾಳೆ. ಜೈಲಿನ ಅಧಿಕಾರಿಗಳು ಚಿಕನ್ ಊಟ ಇವತ್ತು ಕೊಡಲ್ಲ, ಬದಲಿಗೆ ಜೈಲಿನ ನಿಯಮಾವಳಿ ಪ್ರಕಾರ ನಾಳೆ ಶುಕ್ರವಾರ ಮಾತ್ರ ಚಿಕನ್ ಊಟ ನೀಡಲಾಗುತ್ತೆ ಎಂದಿದ್ದಾರೆ.
ಇದರಿಂದ ಬೇಸರಗೊಂಡ ಸಂಜನಾ ಚಿಕನ್ ಕೊಡಲಿಲ್ಲ ಅಂದ್ರು ಪರವಾಗಿಲ್ಲ ಒಂದು ಸಿಗರೇಟ್ ಕೊಡಿ ಅಂತಾ ದಯನೀಯವಾಗಿ ಕೇಳಿಕೊಂಡಿದ್ದಾಳೆ. ಇದಕ್ಕೂ ನಿಯಮಾವಳಿಗಳ ಪ್ರಕಾರ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರಕ್ಕೆ ಸಂಜನಾ ಕೆಂಡಾಮಂಡಲವಾಗಿದ್ದಾಳೆ. ಆಗ ಜೈಲಿನ ಅಧಿಕಾರಿಗಳು ಸಾಹಸಪಟ್ಟು ಸಮಾಧಾನ ಮಾಡಿದ್ದಾರೆ.
ಸದ್ಯ ಜೈಲಿನಲ್ಲಿ ರಾಗಿಣಿಗಿಂತ ಸಂಜನಾಳದ್ದೆ ಟೆನ್ಷನ್ ಜಾಸ್ತಿಯಾಗಿದ್ದು, ಜೈಲಿನ ಅಧಿಕಾರಿಗಳಿಗೆ ಸಂಜನಾಳನ್ನು ನಿಭಾಯಿಸುವುದು ದೊಡ್ಡ ತಲೆನೋವಾಗಿದೆ. ಆದರೆ ಈ ಕಡೆ ನಟಿ ರಾಗಿಣಿ ತನ್ನ ಪಾಡಿಗೆ ತಾಯಿ ಕೊಟ್ಟ ಪುಸ್ತಕ ಓದುತ್ತಾ, ನಿಶ್ಚಿಂತೆಯಿಂದ ಕಾಲ ಕಳೆಯುತ್ತಿದ್ದಾಳಂತೆ.