Sanjjanaa Galrani ‘ಗಂಡ ಹೆಂಡತಿ’ ಬೆಡಗಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

Sanjjanaa Galrani ಗಂಡ ಹೆಂಡತಿ ಬೆಡಗಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಗುಣಮುಖವಾಗ್ತಿದ್ದೀನಿ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಸಂಜನಾ ಬರೆದುಕೊಂಡಿದ್ದಾರೆ.

Sanjjanaa Galrani ‘ಗಂಡ ಹೆಂಡತಿ’ ಬೆಡಗಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು
ಸಂಜನಾ ಗಲ್ರಾನಿ

Updated on: Feb 11, 2021 | 4:46 PM

ಬೆಂಗಳೂರು: ಗಂಡ ಹೆಂಡತಿ ಬೆಡಗಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಗುಣಮುಖವಾಗ್ತಿದ್ದೀನಿ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಸಂಜನಾ ಬರೆದುಕೊಂಡಿದ್ದಾರೆ. ಆದರೆ, ಏನಾಗಿತ್ತು ಹಾಗೂ ತಾನು ಯಾವ ಆಸ್ಪತ್ರೆಗೆ ದಾಖಲಾಗಿದ್ದೆ ಎಂಬ ಗುಟ್ಟನ್ನು ಸಂಜನಾ ಬಿಟ್ಟು ಕೊಟ್ಟಿಲ್ಲ. Sanjjanaa Galrani

ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಜನಾ ಬೇಲ್​ ಮೇಲೆ ಹೊರಬಂದ ನಂತರ ಯಾರನ್ನೂ ಭೇಟಿಯಾಗದೆ ಕೇವಲ ಸೋಷಿಯಲ್‌ ಮೀಡಿಯಾದಲ್ಲಿ ಜನರ ಜೊತೆ ಮಾತನಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಪೇಂಟಿಂಗ್​ ಬಿಡಿಸುವ ಪೋಸ್ಟ್​ ಒಂದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

Recovering to come back stronger than ever , ????

Posted by Sanjjanaa Galrani on Thursday, February 11, 2021

ಟ್ರೋಲ್ ಮಾಡೋರು ನನ್ನನ್ನ ಫಾಲೋ ಮಾಡಬೇಡಿ.. -ಇನ್​ಸ್ಟಾಗ್ರಾಂ ಲೈವ್​ನಲ್ಲಿ ಸಂಜನಾ ವಾರ್ನಿಂಗ್​

Published On - 4:44 pm, Thu, 11 February 21