ಅಜ್ಜಿ ಸತ್ತಿಲ್ಲ, ಕೇವಲ ನಾಟಕ- ಹಿಂಗ್ಯಾಕಂದ್ರು ವಿಜಯಲಕ್ಷ್ಮಿ!? ಅಜ್ಜಿ ಬದುಕಿದ್ದಾರಾ?
ರಾಯಚೂರು: ನಿನ್ನೆ ಭಾರಿ ಸುದ್ದಿ ಮಾಡಿದ ನಟಿ ಇಂದು ರಾಯಚೂರಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಿರ್ದೆಶಕನಿಂದ ಹಣ ಪಡೆದು ಓಡಿ ಹೋಗಿದ್ದಾಳೆಂದು ಆರೋಪಿಸಲಾಗಿತ್ತು. ನಟಿ ವಿಜಯಲಕ್ಷ್ಮಿ ನಿರ್ದೇಶಕ ಅಂಜನಪ್ಪ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರು ಓಡಿ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ ಈ ಅವಮಾನವನ್ನು ಸಯಿಸದೆ ನಟಿಯ ತಾಯಿ ಮತ್ತು ಅಜ್ಜಿ ಇಬ್ಬರು ವಿಷ ಸೇವಿಸ ಅಜ್ಜಿ ಮೃತಪಟ್ಟಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ನಟಿ ವಿಜಯಲಕ್ಷ್ಮಿ ಇದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಅಜ್ಜಿ […]
ರಾಯಚೂರು: ನಿನ್ನೆ ಭಾರಿ ಸುದ್ದಿ ಮಾಡಿದ ನಟಿ ಇಂದು ರಾಯಚೂರಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಿರ್ದೆಶಕನಿಂದ ಹಣ ಪಡೆದು ಓಡಿ ಹೋಗಿದ್ದಾಳೆಂದು ಆರೋಪಿಸಲಾಗಿತ್ತು. ನಟಿ ವಿಜಯಲಕ್ಷ್ಮಿ ನಿರ್ದೇಶಕ ಅಂಜನಪ್ಪ ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರು ಓಡಿ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ ಈ ಅವಮಾನವನ್ನು ಸಯಿಸದೆ ನಟಿಯ ತಾಯಿ ಮತ್ತು ಅಜ್ಜಿ ಇಬ್ಬರು ವಿಷ ಸೇವಿಸ ಅಜ್ಜಿ ಮೃತಪಟ್ಟಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಈಗ ನಟಿ ವಿಜಯಲಕ್ಷ್ಮಿ ಇದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಅಜ್ಜಿ ವಿಷ ಸೇವಿಸಿದ್ದು ನಾಟಕ, ಸತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತಾನು ಯಾರಿಂದಲೂ ಹಣ ಪಡೆದು ಓಡಿ ಬಂದಿಲ್ಲವೆಂದು ಎಂದು ಸ್ಪಷ್ಟಪಡಿಸಿದ್ದಾರೆ. ತುಂಗಭದ್ರ ಸಿನಿಮಾ ಶೂಟಿಂಗ ವೇಳೆಯಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನೆಯಲ್ಲಿ ವಿರೋಧವಿತ್ತು. ಹಣಕ್ಕಾಗಿ ಸಾಕು ತಾಯಿ ಈ ಹಿಂದೆಯೂ ವಿಷ ಕುಡಿದ ಬಗ್ಗೆ ನಾಟಕವಾಡಿದ್ದಳು ಹೀಗಾಗಿ ಗಂಗಾವತಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾಗಿ ಹೇಳಿದ್ದಾರೆ. ಹಾಗೂ ರಕ್ಷಣೆ ಕೋರಿ ರಾಯಚೂರ ಪೊಲೀಸರ ಮೊರೆ ಹೋಗಿದ್ದಾರೆ.
ಆದ್ರೆ ಅಜ್ಜಿ ಬದುಕಿದ್ದಾರಾ?: ಇಂದು ರಾಯಚೂರಲ್ಲಿ ಪ್ರತ್ಯಕ್ಷರಾಗಿ ನನ್ನ ಅಜ್ಜಿ ಸತ್ತಿಲ್ಲ, ಕೇವಲ ನಾಟಕ ಎಂದು ನಟಿ ವಿಜಯಲಕ್ಷ್ಮಿ ಹೇಳಿದ್ದಾರೆ. ಆದ್ರೆ ಅಜ್ಜಿ ನಿನ್ನೆಯೇ ಮೃತಪಟ್ಟಿರುವ ಸಂಗತಿ ದೃಢಪಟ್ಟಿದೆ.
Published On - 1:11 pm, Thu, 9 January 20