ಬೆಂಗಳೂರು: ಲಾಕ್ಡೌನ್ನಿಂದಾಗಿ ಬಣ್ಣದ ಲೋಕವೇ ಬೆಂದು ಹೋಗಿತ್ತು. ಸಿನಿಮಾ ಇಂಡಸ್ಟ್ರಿಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಮಂದಿ ಕಂಗೆಟ್ಟು ಕೂತಿದ್ರು. ಸ್ಟಾರ್ಸ್ಗಳು ಮನೆಯಲ್ಲೇ ಕೂತ ಕಾಲ ಕಳೆದ್ರು. ತಮ್ಮ ನೆಚ್ಚಿನ ನಟರ ಚಿತ್ರ ಯಾವಾಗ ಬರುತ್ತಪ್ಪಾ ಅಂತಾ ಅಭಿಮಾನಿಗಳು ಕಾಯ್ತಿದ್ರು. ಆದ್ರೀಗ ಸ್ಯಾಂಡಲ್ವುಡ್ಗೆ ಸರ್ಕಾರದಿಂದ ಗುಡ್ನ್ಯೂಸ್ ಸಿಕ್ಕಿದೆ. ಫಿಲ್ಮ್ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ಗೆ ಗ್ರೀನ್ ಸಿಗ್ನಲ್ ನೀಡಿದೆ.
ಚಿತ್ರೀಕರಣಕ್ಕೆ ಗ್ರೀನ್ಸಿಗ್ನಲ್.. ಸ್ಯಾಂಡಲ್ವುಡ್ ಸಂತಸ..!
ಯೆಸ್.. ಕೊರೊನಾ ಕಂಟ್ರೋಲ್ಗೆ ಜಡಿದಿದ್ದ ಲಾಕ್ಡೌನ್ ಅನ್ನೋ ಬ್ರಹ್ಮಾಸ್ತ್ರದಿಂದ ಇಡೀ ಸ್ಯಾಂಡಲ್ವುಡ್ ಸ್ತಬ್ಧವಾಗಿತ್ತು. ಹಿಂದೆಂದೂ ಕಾಣದ ರೀತಿಯಲ್ಲಿ ಬಣ್ಣದ ಲೋಕವೇ ತತ್ತರಿಸಿ ಬೆಕ್ಕಸ ಬೆರಗಾಗಿತ್ತು. ಆದ್ರೀಗ ಲಾಕ್ಡೌನ್ ರಿಲೀಫ್ ಯಾವಾಗಾ ಸಿಗುತ್ತಪ್ಪಾ ಅಂತ ಎದುರು ನೋಡ್ತಿದ್ದ ಸಿನಿಮಾ ಇಂಡಸ್ಟ್ರಿಗೆ ಸರ್ಕಾರ ಒಂದಿಷ್ಟು ನಿಬಂಧನೆಗಳ ಜೊತೆಗೆ ಸಿನಿಮಾ ಶೂಟಿಂಗ್ಗೆ ಅನುಮತಿ ನೀಡಿದೆ. ಚಿತ್ರರಂಗದ ಚಟುವಟಿಕೆಗಳನ್ನ ಆರಂಭಿಸೋಕೆ ಅನುಮತಿ ನೀಡಿದ್ದು ಕಡೆಗೂ ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಶೂಟಿಂಗ್ ಪುನಾರಂಭಗೊಳ್ಳಲಿದೆ. ಆದ್ರೆ, ಸ್ಯಾಂಡಲ್ವುಡ್ಗೆ ಕಂಪ್ಲೀಟ್ ಫ್ರೀಡೌನ್ ಏನು ನೀಡಿಲ್ಲ. ಯಾಕಂದ್ರೆ ಮೊದಲಿನಂತೆ ಚಿತ್ರೀಕರಣ ಮಾಡುವಷ್ಟು ಫ್ರೀಡಂ ಈಗಿಲ್ಲ. ಹಾಗಿದ್ರೆ ಶೂಟಿಂಗ್ ವೇಳೆ ಯಾವೆಲ್ಲ ರೂಲ್ಸ್ ಪಾಲಿಸ್ಬೇಕು ಅನ್ನೋದನ್ನ ನೋಡೋದಾದ್ರೆ.
ಚಿತ್ರೀಕರಣಕ್ಕೂ ಖಡಕ್ ರೂಲ್ಸ್!
ಇನ್ನು, ಸಿನಿಮಾ ಶೂಟಿಂಗ್ ವೇಳೆ ಹಲವು ಖಡಕ್ ರೂಲ್ಸ್ಗಳನ್ನ ಪಾಲಿಸ್ಬೇಕಾಗಿದೆ. ಸಿನಿಮಾ ಚಿತ್ರೀಕರಣದ ವೇಳೆ ಎಲ್ಲರೂ ದೈಹಿಕ ಅಂತರ ಪಾಲಿಸೋದು ಕಡ್ಡಾಯವಾಗಿದೆ. ಕಲಾವಿದರು ಹಾಗೂ ಚಿತ್ರೀಕರಣದಲ್ಲಿ ಭಾಗಿಯಾಗೋರು ಮಾತ್ರ ಇರಬೇಕು ಎನ್ನಲಾಗಿದೆ. ಜೊತೆಗೆ ಸೆಟ್ನಲ್ಲಿರೋ ಪ್ರತಿಯೊಬ್ಬರು ಮಾಸ್ಕ್ ಧರಿಸೋದು ಕಡ್ಡಾಯವಾಗಿದೆ. ಇನ್ನು, ಸೆಟ್ಗೆ ಎಂಟ್ರಿಯಾಗೋರ ಆರೊಗ್ಯ ತಪಾಸಣೆ ಕಡ್ಡಾಯವಾಗಿದೆ.
ಶೂಟಿಂಗ್ ಸೆಟ್ನಲ್ಲಿ 50 ಜನರು ಭಾಗವಹಿಸೋಕೆ ಮಾತ್ರ ಅವಕಾಶ ನೀಡಲಾಗಿದೆ. ಮೇಕಪ್ನಿಂದ ಹಿಡಿದು ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಅಂತ ಸೂಚಿಸಲಾಗಿದೆ. ಜೊತೆಗೆ 60 ವರ್ಷ ಮೇಲ್ಪಟ್ಟವರು ಹಾಗೂ ಮಕ್ಕಳು ಭಾಗವಹಿಸಂಗಿಲ್ಲ ಅಂತ ಸ್ಟ್ರಿಕ್ಟ್ ರೂಲ್ಸ್ ಕೂಡ ಜಾರಿಗೆ ತರಲಾಗಿದೆ.
ಅಂದ್ಹಾಗೆ ಬರೋಬ್ಬರಿ 90 ದಿನಗಳ ಬಳಿಕ ಸಿನಿಮಾ ಶೂಟಿಂಗ್ ಮಾಡೋಕೆ ಅನುಮತಿ ಏನೋ ಸಿಕ್ಕಿದೆ. ಆದ್ರೆ, ಚಿತ್ರತಂಡಗಳಿಗೆ ಕೊರೊನಾ ಭಯ ಕಾಡ್ತಿದ್ದು ಅರ್ಧಕ್ಕೆ ನಿಂತ ಸಿನಿಮಾಗಳ ಚಿತ್ರೀಕರಣದ ಜೊತೆಗೆ ಕೆಲವು ಕೊರೊನಾ ಭಯದ ನಡುವೆಯೂ ಶೂಟಿಂಗ್ ಮಾಡೋಕೆ ಅಣಿಯಾಗ್ತಿವೆ. ಚಿತ್ರೀಕರಣದ ಜೊತೆ ಜೊತೆಗೆ ಹಲವು ಗೈಡ್ಲೈನ್ಸ್ ಕೂಡ ಪಾಲಿಸ್ಬೇಕಾಗಿದೆ. ಚಿತ್ರೋದ್ಯಮ ಈ ಎಲ್ಲಾ ನಿಯಮಾವಳಿಗಳನ್ನ ಎಷ್ಟರ ಮಟ್ಟಿಗೆ ಪಾಲಿಸುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
ಒಟ್ನಲ್ಲಿ, ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಆದ್ರೆ, ಧಾರವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಿದೋರು ಸಿನಿಮಾ ಶೂಟಿಂಗ್ ಯಾವಾಗ ರಿಲೀಫ್ ಕೊಡ್ತಾರೆ ಅಂತ ಎಲ್ರೂ ಕಾಯ್ತಿದ್ರು. ಆದ್ರೀಗ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರೋದು ಸ್ಯಾಂಡಲ್ವುಡ್ ಫುಲ್ ಖುಷ್ ಆಗಿದೆ. ಆದ್ರೆ, ಹೊರಗೆ ಹೋಗ್ಬೇಕೋ ಬೇಡ್ಬೋದ ಅನ್ನೋ ಗೊಂದಲ ಕೂಡ ಕಾಡ್ತಿದೆ. ಅದೇನೆ ಇರ್ಲಿ ಶೂಟಿಂಗ್ ಮಾತ್ರ ಅವಕಾಶ ಇದೆ. ಥಿಯೇಟರ್ ಬಾಗಿಲು ಯವಾಗ ತೆರೆಯುತ್ತೆ ಅಂತ ಎಲ್ರೂ ಎದುರು ನೋಡ್ತಿದ್ದಾರೆ.
Published On - 6:54 am, Tue, 16 June 20