ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ NCB ಸೂಚನೆಯಂತೆ CCB ಯಿಂದ ಐಂದ್ರಿತಾ ರೇ ಹಾಗೂ ದಿಗಂತ್ ದಂಪತಿಗೆ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ಆಂಡಿ-ದಿಗ್ಗಿ ದಂಪತಿ ಬೆಂಗಳೂರು ತೊರೆದಿರುವ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಐಂದ್ರಿತಾ-ದಿಗಂತ್ ದಂಪತಿಗೂ CCB ಬುಲಾವ್ ಬಂತು
ಹಾಗಾಗಿ, ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಬ್ಬರು ನಟರು ಬೆಂಗಳೂರು ತೊರೆದರಾ ಅನ್ನೋ ಗುಮಾನಿ ಹೊರಬಂದಿದೆ. ಐಂದ್ರಿತಾ ಮತ್ತು ದಿಗಂತ್ ಕೇರಳ ಪ್ರವಾಸಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಅನುಮಾನ ವ್ಯಕ್ತವಾಗಿದೆ.
ಐಂದ್ರಿತಾ ಇನ್ಸ್ಟಾ ಲೊಕೇಶನ್ ಹೇಳೋದು ಏನು?
ಆದ್ರೆ ದಿಗಂತ್- ಐಂದ್ರಿತಾ ರೇ ದಂಪತಿಗೆ ಸಿಸಿಬಿ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಐಂದ್ರಿತಾ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಅವರನ್ನು ಕೇಳಿದರೆ ಮನೆಯಲ್ಲಿ ಅವರಿಬ್ಬರೂ ಇಲ್ಲವೆಂದು ಹೇಳುತ್ತಾರೆ. 5 ದಿನದಿಂದ ಮನೆಯಲ್ಲಿ ಇಲ್ಲವೆಂದು ಭದ್ರತಾ ಸಿಬ್ಬಂದಿ ಹೇಳುತ್ತಾರೆ.
ಆದ್ರೆ ದಿಗಂತ್-ಐಂದ್ರಿತಾ ಬೆಂಗಳೂರಿನಲ್ಲಿಯೇ ಇದ್ದಾರೆ ಎಂಬ ಬಲವಾದ ಅನುಮಾನವಿದೆ. ಇನ್ಸ್ಸ್ಟಾಗ್ರಾಂನಲ್ಲಿ 2 ಗಂಟೆಗಳ ಹಿಂದೆ ಫೋಟೋ ಅಪ್ಲೋಡ್ ಮಾಡಿದ್ದು, ಬೆಂಗಳೂರು ಅಂತಾ ಲೊಕೇಷನ್ ಮೆನ್ಷನ್ ಮಾಡಿದ್ದಾರೆ. ಐಂದ್ರಿತಾ ಸೀರೆಯುಟ್ಟಿರುವ ಫೋಟೋ ಅಪ್ಲೋಡ್ ಮಾಡಿದ್ದು, ಬೆಂಗಳೂರು ಲೊಕೇಷನ್ ಹಾಕಿ ಹಾದಿ ತಪ್ಪಿಸುತ್ತಿದ್ದಾರಾ ಎಂಬ ಶಂಕೆಯೂ ವ್ಯಕ್ತವಾಗಿದೆ.
‘ನಾವು ಎಲ್ಲೂ ಪರಾರಿಯಾಗಿಲ್ಲ’
CCB ನೋಟಿಸ್‌ಗೆ ನಾಳೆ ಉತ್ತರವನ್ನು ನೀಡುತ್ತೇವೆ ಎಂದು ನಟ ದಿಗಂತ್ ಟಿವಿ 9ಗೆ ಮಾಹಿತಿ ನೀಡಿದ್ದಾರೆ. ನಾವು ಎಲ್ಲೂ ಪರಾರಿಯಾಗಿಲ್ಲ. ನೋಟಿಸ್‌ಗೆ ನಾಳೆ ಉತ್ತರ ನೀಡುತ್ತೇವೆ ಎಂದು ನೋಟಿಸ್ ಬಗ್ಗೆ ಟಿವಿ 9ಗೆ ನಟ ದಿಗಂತ್ ಮಾಹಿತಿ ಕೊಟ್ಟಿದ್ದಾರೆ.
Published On - 3:51 pm, Tue, 15 September 20