AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಗಿಣಿ ತುಂಬಾ ಸುಸ್ತಾಗಿದ್ದೀಯಾ, ಮೊದ್ಲು ಊಟ ಮಾಡಮ್ಮಾ’ ಅಂದ್ರು ವೈದ್ಯೆ!

ಆನೇಕಲ್: ಸರ್ಕಾರಿ ಸಾಂತ್ವನ ಕೇಂದ್ರದಿಂದ ಸೀದಾ ಪರಪ್ಪನ ಅಗ್ರಹಾರ ಜೈಲಿಗೆ ತಲುಪಿ ‘ಪಂಜರದ ಗಿಣಿ’ಯಾಗಿರುವ ರಾಗಿಣಿ ದ್ವಿವೇದಿಗೆ ಅಲ್ಲಿನ ಜೈಲು ವಾತಾವರಣ ಸುತರಾಂ ಇಷ್ಟವಾಗುತ್ತಿಲ್ಲ. ಆ ನಿಟ್ಟಿನಲ್ಲಿ ಮೊದಲು ಆಹಾರ ಸೇವನೆ ಅಷ್ಟಕ್ಕಷ್ಟೇ ಅಂತಾ ಬಲವಂತಕ್ಕೆ ಒಂದಷ್ಟು ತಿನ್ನುವ ಶಾಸ್ತ್ರ ಮುಗಿಸಿದ್ದಾರೆ ರಾಗಿಣಿ. ಮನೆಯಿಂದ, ಸ್ವತಃ ಸಿಸಿಬಿಯಿಂದ ಬಂದ ಆಹಾರ ಸೇವನೆಗೆ ಕ್ವಾರಂಟೈನ್ ನಿಯಮ ಬ್ರೇಕ್ ಹಾಕಿದೆ. ಇಷ್ಟಾನುಸಾರ ತಿನ್ನುವ ಹಾಗಿಲ್ಲ ಅನ್ನುತ್ತಿದೆ ಜೈಲಿನ ಕೊರೊನಾ ಕ್ವಾರಂಟೈನ್ ನಿಯಮ. ಇದರಿಂದ ರಾಗಿಣಿ ನಿತ್ರಾಣಗೊಂಡಿದ್ದಾಳೆ. ಇಂದು ಚೆಕಪ್​ಗೆ ಬಂದ […]

‘ರಾಗಿಣಿ ತುಂಬಾ ಸುಸ್ತಾಗಿದ್ದೀಯಾ, ಮೊದ್ಲು ಊಟ ಮಾಡಮ್ಮಾ’ ಅಂದ್ರು ವೈದ್ಯೆ!
ರಾಗಿಣಿ ದ್ವಿವೇದಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 15, 2020 | 1:50 PM

Share

ಆನೇಕಲ್: ಸರ್ಕಾರಿ ಸಾಂತ್ವನ ಕೇಂದ್ರದಿಂದ ಸೀದಾ ಪರಪ್ಪನ ಅಗ್ರಹಾರ ಜೈಲಿಗೆ ತಲುಪಿ ‘ಪಂಜರದ ಗಿಣಿ’ಯಾಗಿರುವ ರಾಗಿಣಿ ದ್ವಿವೇದಿಗೆ ಅಲ್ಲಿನ ಜೈಲು ವಾತಾವರಣ ಸುತರಾಂ ಇಷ್ಟವಾಗುತ್ತಿಲ್ಲ. ಆ ನಿಟ್ಟಿನಲ್ಲಿ ಮೊದಲು ಆಹಾರ ಸೇವನೆ ಅಷ್ಟಕ್ಕಷ್ಟೇ ಅಂತಾ ಬಲವಂತಕ್ಕೆ ಒಂದಷ್ಟು ತಿನ್ನುವ ಶಾಸ್ತ್ರ ಮುಗಿಸಿದ್ದಾರೆ ರಾಗಿಣಿ.

ಮನೆಯಿಂದ, ಸ್ವತಃ ಸಿಸಿಬಿಯಿಂದ ಬಂದ ಆಹಾರ ಸೇವನೆಗೆ ಕ್ವಾರಂಟೈನ್ ನಿಯಮ ಬ್ರೇಕ್ ಹಾಕಿದೆ. ಇಷ್ಟಾನುಸಾರ ತಿನ್ನುವ ಹಾಗಿಲ್ಲ ಅನ್ನುತ್ತಿದೆ ಜೈಲಿನ ಕೊರೊನಾ ಕ್ವಾರಂಟೈನ್ ನಿಯಮ. ಇದರಿಂದ ರಾಗಿಣಿ ನಿತ್ರಾಣಗೊಂಡಿದ್ದಾಳೆ. ಇಂದು ಚೆಕಪ್​ಗೆ ಬಂದ ವೈದ್ಯರ ಬಳಿ ಮತ್ತದೇ ರಾಗ ತೆಗೆದಿದ್ದಾಳೆ ರಾಗಿಣಿ.. ನನಗೆ ಅಸ್ತಮಾ, ಬೆನ್ನು ನೋವು ಅಂತೆಲ್ಲಾ ಹೇಳಿಕೊಂಡಿದ್ದಾರೆ. ಅಂದಹಾಗೆ, ಜೈಲು ವೈದ್ಯೆ ಉಮಾ ಅವರು ರಾಗಿಣಿ ಚಿಕಿತ್ಸೆಗೆ ಬಂದಿದ್ರು. ರಾಗಿಣಿಯನ್ನು ನೋಡಿದವರೇ ‘ರಾಗಿಣಿ ತುಂಬಾ ಸುಸ್ತಾಗಿದ್ದೀಯಾ, ಮೊದ್ಲು ಊಟ ಮಾಡಮ್ಮಾ’ ಅಂತಾ ಮಾತೃ ಅಂತಃಕರಣದ ವೈದ್ಯೆ ಗದರಿಕೊಂಡಿದ್ದಾರೆ.

ಆಗಷ್ಟೇ ರಾಗಿಣಿ ಸೆಂಟ್ರಲ್​ ಜೈಲಿನಲ್ಲಿ ಮಧ್ಯಾಹ್ನದ ಊಟ ಸೇವಿಸಿದ್ದಾರೆ. ಜೈಲು ಸಿಬ್ಬಂದಿ ನೀಡಿದ ಚಪಾತಿ, ಪಲ್ಯ, ಅನ್ನ, ಸಾಂಬಾರ್​ ಅನ್ನೇ ತಿಂದುಮುಗಿಸಿದ್ದಾರೆ. ಊಟೋಪಚಾರದ ಬಳಿಕ, ವೈದ್ಯರು ರಾಗಿಣಿಗೆ ವೈದ್ಯೋಪಚಾರ ನೀಡಲು ಮುಂದಾಗಿದ್ದಾರೆ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ