ಅಂಬರೀಶ್ ಕೊನೆಯ ಬಾರಿಗೆ ಹೇಳಿದ ಮಾತುಗಳೇನು? ಟಿವಿ9 ಜತೆ ರೆಬೆಲ್ ಸ್ಟಾರ್ ಕೊನೆಯ ಸಂದರ್ಶನ
Ambareesh Interview: ಅಂಬರೀಶ್ ಮಾಧ್ಯಮಗಳ ಜತೆಗೂ ಮುಕ್ತವಾಗಿ ಮಾತನಾಡುತ್ತಿದ್ದರು. ಯಾವುದೇ ವಿಚಾರಗಳ ಬಗ್ಗೆಯೂ ಅವರು ಮುಚ್ಚುಮರೆ ಮಾಡುತ್ತಿರಲಿಲ್ಲ. ಅವರು ನಿಧನರಾಗುವುದಕ್ಕೂ ಮೊದಲು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದರು.
ಇಂದು ರೆಬೆಲ್ ಸ್ಟಾರ್ ಅಂಬರೀಶ್ ಜನ್ಮದಿನ. ಅವರು ನಮ್ಮೊಂದಿಗೆ ಇದ್ದಿದ್ದರೆ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಪರಿಸ್ಥಿತಿ ಸರಿಯಿದ್ದು ಫ್ಯಾನ್ಸ್ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಲಾಕ್ಡೌನ್ ಪರಿಣಾಮ ಎಲ್ಲ ಸಾರ್ವಜನಿಕ ಆಚರಣೆಗಳಿಗೆ ಬ್ರೇಕ್ ಹಾಕಲಾಗಿದೆ. ಅಂಬರೀಷ್ ಪತ್ನಿ, ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಕಂಠೀರವ ಸ್ಟುಡಿಯೋಗೆ ತೆರಳಿ ಅಂಬರೀಷ್ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ಅವರ ಜೊತೆ ಪುತ್ರ ಅಭಿಶೇಕ್ ಕೂಡ ಇದ್ದರು. ಅಂಬರೀಷ್ ಇದ್ದಾಗ ಅಭಿಮಾನಿಗಳ ಜತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಜನ್ಮದಿನದಂದು ಅಭಿಮಾನಿಗಳ ಜತೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಇನ್ನು, ಅವರು ಮಾಧ್ಯಮಗಳ ಜತೆಗೂ ಮುಕ್ತವಾಗಿ ಮಾತನಾಡುತ್ತಿದ್ದರು. ಯಾವುದೇ ವಿಚಾರಗಳ ಬಗ್ಗೆಯೂ ಅವರು ಮುಚ್ಚುಮರೆ ಮಾಡುತ್ತಿರಲಿಲ್ಲ. ಅವರು ನಿಧನರಾಗುವುದಕ್ಕೂ ಮೊದಲು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದರು. ಅವರ ಜನ್ಮದಿನದ ಅಂಗವಾಗಿ ಈ ವಿಶೇಷ ಸಂದರ್ಶನ ಟಿವಿ9 ಕನ್ನಡದಲ್ಲಿ.
ಇದನ್ನೂ ಓದಿ: ಅಂಬರೀಷ್ ಮೇಲಿದ್ದ ಪ್ರೀತಿಯಿಂದ ಜನ ನನ್ನ ಆಯ್ಕೆ ಮಾಡಿದ್ದಾರೆ, ಅದನ್ನು ಉಳಿಸಿಕೊಂಡು ಹೋಗುತ್ತೇನೆ: ಸುಮಲತಾ ಅಂಬರೀಷ್
Ambareesh Birthday: ಸರಳವಾಗಿ ನೆರವೇರಿದ ಅಂಬರೀಷ್ ಜನ್ಮದಿನ; ಇಲ್ಲಿವೆ ಚಿತ್ರಗಳು