ನಿಮ್ಮ ಜೀವನಕ್ಕೆ ಕೊಂಚ ಬೆಲೆ ಮತ್ತು ಮಹತ್ವ ಸಿಗಬೇಕೆಂದರೆ ಬದುಕಲ್ಲಿ ಕೊಂಚ ಬಿಸಿ ತಟ್ಟಲೇಬೇಕು ಅಂತಾ ಬಿಗ್ ಬಿ ಅಮಿತಾಬ್ ಬಚ್ಚನ್ ಮನೋಜ್ಞವಾಗಿ ತಮ್ಮ ಟ್ವಿಟರ್ ಖಾತೆ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ.
ತಮ್ಮ ಈಟ್ಟು ಮಾತಿಗೆ ಪುಷ್ಟಿ ನೀಡುವಂತೆ ಟ್ವಿಟರ್ ಖಾತೆಯಲ್ಲಿ ಹಸಿ ಮೆಕ್ಕೆಜೋಳ ಮತ್ತು ಸುಟ್ಟಿರುವ ಮೆಕ್ಕ ಜೋಳದ ಫೋಟೋಗಳನ್ನು ಅಕ್ಕಪಕ್ಕ ಇಟ್ಟು ತೋರಿಸಿದ್ದಾರೆ. ಹಸಿ ಮೆಕ್ಕೆಜೋಳಕ್ಕೆ 5 ರೂಪಾಯಿ ಆದ್ರೆ ಅದೇ ಸುಟ್ಟ ಮೆಕ್ಕೆಜೋಳಕ್ಕೆ 20 ರೂಪಾಯಿ ಎಂದು ಮೌಲ್ಯವನ್ನು ತೋರಿಸಿದ್ದಾರೆ.
ಅಂದ್ರೆ ಜೀವನದಲ್ಲಿ ಉಳಿಪೆಟ್ಟು ಬಿದ್ದು ನಿರ್ಮಾಣವಾಗುವ ಸುಂದರ ಮೂರ್ತಿಯಂತೆ, ಜೀವನದಲ್ಲಿ ಪಕ್ವವಾಗಿ ಬೆಂದರೆ ಅಂದರೆ ಕಷ್ಟಕಾರ್ಪಣ್ಯ ಅನುಭವಿಸಿದರೇನೇ ರುಚಿಕಟ್ಟಾದ ಸುಟ್ಟ ಜೋಳದಂತೆ ಬದುಕು ಮೌಲ್ಯಯುತವಾಗಿರುತ್ತದೆ ಎಂದು ಬಿಗ್ ದಾರ್ಶಿಕನಂತೆ ಬಿಗ್ ಬಿ ಹೇಳಿದ್ದಾರೆ.
T 3644 – "जिंदगी में कीमत बढ़ानी है, तो तपना पड़ेगा ..!!" ~ Ef Am pic.twitter.com/xIYsGWKTrE
— Amitabh Bachchan (@SrBachchan) August 30, 2020
Published On - 6:21 pm, Tue, 1 September 20