ಅರೆರೇ ನೋಡಿವಳಂದಾವಾ.. ಮುತ್ತಿನ ಮಾಲೆ ಚಂದಾವಾ.. ಇವಳು ಯಾವ್ ಊರ ಚೆಲುವೆ ಶಿವ ಅಂತಾ ಕೇಳಿದ್ರೆ ನಮ್ಮ ಪಡ್ಡೆ ಹುಡುಗರಿಗೆ ತಕ್ಷಣ ನೆನಪಾಗೋದು ‘ದಿ ವಿಲನ್’ ಸಿನಿನಾದ ಹಾಟ್ ನಟಿ ಌಮಿ ಜಾಕ್ಸನ್.
ತನ್ನ ಮೋಹಕ ನೋಟ, ಬಳಿಯಂಥ ಮೈಮಾಟದಿಂದ ಹುಡುಗರ (ಮತ್ತು ವಯಸ್ಕರ) ನಿದ್ದೆ ಗೆಡಿಸುವ ಲಂಡನ್ ಮೂಲದ ನಟಿ ಕನ್ನಡವಲ್ಲದೆ, ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದವಳು ಌಮಿ. ಇವಳೇ ನನ್ನ ಕನಸಿನ ರಾಣಿ ಎಂದು ಹಲವರು ಆಸೆ ಪಟ್ಟಿದೂ ನಿಜ. ಅಂತೆಯೇ, ಈ ಮದನಾರಿ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ವಾರಾಂತ್ಯಕ್ಕೆ ಸಖತ್ ಫೋಟೋಗಳನ್ನ ಅಪ್ಲೋಡ್ ಮಾಡಿ ಹುಡುಗರಿಗೆ ಮತ್ತಷ್ಟು ತಲೆಕೆಡಿಸಿದ್ದಾರೆ.
ತನ್ನ ಪ್ರಿಯತಮ ಜಾರ್ಜ್ ಪನಾಯಿಟೋನೊಟ್ಟಿಗೆ ಇಟಲಿಯ ಪ್ರವಾಸ ಕೈಗೊಂಡಿರುವ ಌಮಿ ಅಲ್ಲಿನ ಸುಂದರ ತಾಣಗಳಲ್ಲಿ ತನ್ನ ಮನಮೋಹಕವಾದ ಫೋಟೋಗಳನ್ನ ಕ್ಲಿಕ್ಕಿಸಿ ಶೇರ್ ಮಾಡಿಕೊಂಡಿದ್ದಾರೆ.
ಕೇವಲ ಕಲರ್ ಫೋಟೋಗಳಲ್ಲದೆ ಬ್ಲಾಕ್ ಌಂಡ್ ವೈಟ್ನಲ್ಲೂ ಌಮಿ ಸಖತ್ ಆಗಿ ಕಾಣಿಸ್ತಾರೆ ಅನ್ನೋದಕ್ಕೆ ಬೇರೆ ಸಾಕ್ಷಿನೇ ಬೇಡ. ಅಂದ ಹಾಗೆ, ಕಳೆದ ಸೆಪ್ಟಂಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಌಮಿ ಇವಳೇನಾ ಅನ್ನೋ ರೀತಿಯಲ್ಲಿ ಕಾಣಿಸ್ತಾಳೆ ಈ ಬ್ಯೂಟಿ.
Published On - 2:30 pm, Sat, 25 July 20