ಥಿಯೇಟರ್‌ಗಳು ಆಗಸ್ಟ್ನಿಂದಲೇ ಆರಂಭವಾಗಲಿ, ಆದ್ರೆ ಪ್ರೇಕ್ಷಕರು ಎಷ್ಟಿರಬೇಕು ಗೊತ್ತಾ!?
ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಕಾಟ ಶುರುವಾದಾಗಿನಿಂದ ಲಾಕ್ ಡೌನ್ ಮಾಡಲಾಯಿತು. ಅಲ್ಲಿಂದ ಬಂದ್ ಆಗಿರುವ ಸಿನೆಮಾ ಚಟುವಟಿಕೆಗಳು ಇನ್ನೂ ಆರಂಭವಾಗಿಲ್ಲ. ಥಿಯೇಟರ್‌ಗಳಂತೂ ಬಾಗಿಲನ್ನೇ ತೆರೆದಿಲ್ಲ. ಆದ್ರೆ ಈಗ ಬಾಗಿಲು ಓಪನ್ ಮಾಡುವ ಕಾಲ ಕೂಡಿ ಬಂದಿದೆ. ಆದ್ರೆ….ಕೆಲ ಕಂಡಿಷನ್‌ಗಳೊಂದಿಗೆ ಮಾತ್ರ. ಹೌದು, ಕೊರೊನಾ ವಿರುದ್ಧ ಸಮರ ಸಾರಿದ ಭಾರತ ಸರ್ಕಾರ ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಡಿಕ್ಲೇರ್ ಮಾಡಿತು. ಇದಾದ ನಂತರ ಎಲ್ಲವೂ ಬಂದ್. ಹೀಗೆ ಬಂದ್ ಆದವುಗಳಲ್ಲಿ ಸಿನೆಮಾ ಥಿಯೇಟರ್‌ಗಳೂ ಸೇರಿವೆ. ಆಗ ಬಂದ್ ಆಗಿರುವ […]
ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಕಾಟ ಶುರುವಾದಾಗಿನಿಂದ ಲಾಕ್ ಡೌನ್ ಮಾಡಲಾಯಿತು. ಅಲ್ಲಿಂದ ಬಂದ್ ಆಗಿರುವ ಸಿನೆಮಾ ಚಟುವಟಿಕೆಗಳು ಇನ್ನೂ ಆರಂಭವಾಗಿಲ್ಲ. ಥಿಯೇಟರ್‌ಗಳಂತೂ ಬಾಗಿಲನ್ನೇ ತೆರೆದಿಲ್ಲ. ಆದ್ರೆ ಈಗ ಬಾಗಿಲು ಓಪನ್ ಮಾಡುವ ಕಾಲ ಕೂಡಿ ಬಂದಿದೆ. ಆದ್ರೆ….ಕೆಲ ಕಂಡಿಷನ್‌ಗಳೊಂದಿಗೆ ಮಾತ್ರ.
ಹೌದು, ಕೊರೊನಾ ವಿರುದ್ಧ ಸಮರ ಸಾರಿದ ಭಾರತ ಸರ್ಕಾರ ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಡಿಕ್ಲೇರ್ ಮಾಡಿತು. ಇದಾದ ನಂತರ ಎಲ್ಲವೂ ಬಂದ್. ಹೀಗೆ ಬಂದ್ ಆದವುಗಳಲ್ಲಿ ಸಿನೆಮಾ ಥಿಯೇಟರ್‌ಗಳೂ ಸೇರಿವೆ. ಆಗ ಬಂದ್ ಆಗಿರುವ ಈ ಥಿಯೇಟರ್‌ಗಳು ಇನ್ನೂ ತೆರೆದಿಲ್ಲ. ಹೀಗಾಗಿ ಈ ಸಂಬಂಧ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಅಮಿತ್ ಖರೆ ಅವರು ಚಲನಚಿತ್ರರಂಗಕ್ಕೆ ಸಂಬಧಿಸಿದ ಕೆಲ ಪ್ರಮಖರ ಜತೆ ಸಭೆ ನಡಸಿದರು.
ಈ ಸಭೆಯಲ್ಲಿ ಕನಿಷ್ಟ ಸಾಮಾಜಿಕ ಅಂತರ ಕಾಪಾಡಬೇಕು. ಅದಕ್ಕಾಗಿ ಸಿನಿಮಾ ಹಾಲ್‌ಗಳಲ್ಲಿ ಪ್ರತಿ ಒಂದು ಸೀಟಿಗೆ ಅಂತರ ಇರಬೇಕು. ಅಂದ್ರೆ ಒಂದು ಸೀಟು ಆದ ನಂತರ ಪಕ್ಕದ ಸೀಟು ಖಾಲಿ ಇರಬೇಕು. ಹಾಗೇನೆ ಒಂದು ಸಾಲಿನಲ್ಲಿ ಪ್ರೇಕ್ಷರಿದ್ದರೆ ಮುಂದಿನ ಮತ್ತು ಹಿಂದಿನ ಸಾಲು ಖಾಲಿಯಿರಬೇಕು. ಹೀಗೆ ನಿಯಮ ಪಾಲಿಸುವುದಾದರೇ ಬರುವ ಅಗಷ್ಟ್ ಒಂದರಿಂದ ಅಥವಾ ಅಗಷ್ಟ್ 31 ರಿಂದ ಸಿನೆಮಾ ಚಟುವಟಿಕೆಗಳನ್ನ ಪ್ರಾರಂಭಿಸಬಹುದು. ಆದ್ರೂ ಈ ಬಗ್ಗೆ ಅಂತಿಮ ನಿರ್ಧಾರವನ್ನ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲಾ ತೆಗೆದುಕೊಳ್ಳುತ್ತಾರೆ ಎಂದು ಅಮಿತ್ ಖರೆ ತಿಳಿಸಿದ್ದಾರೆ.
ಆದ್ರೆ ಕೇಂದ್ರದ ಈ ಮಾರ್ಗಸೂಚಿ ಸೇರಿದ್ದ ಸಿನೆಮಾ ರಂಗದ ಪ್ರಮುಖರಿಗೆ ಹಿಡಿಸಿಲ್ಲ.. ಯಾಕಂದ್ರೆ ಕೇಂದ್ರದ ಮಾತು ಕೇಳಿದ್ರೆ ಸಿನೆಮಾ ಹಾಲ್‌ಗಳ ಒಟ್ಟು ಸೀಟುಗಳ ಶೇಕಡಾ 25 ರಷ್ಟು ಮಾತ್ರ ಪ್ರೇಕ್ಷಕರನ್ನ ಒಂದು ಸಾರಿ ಸಿನೆಮಾ ನೋಡಲು ಅವಕಾಶ ಕೊಡಬೇಕಾಗುತ್ತದೆ. ಇದಕ್ಕಿಂತ ಥಿಯೇಟರ್‌ಗಳನ್ನು ಬಂದ್ ಮಾಡಿಟ್ಟಿರುವುದೇ ಲೇಸು ಎನ್ನುವುದು ಸಭೆಗೆ ಹೋಗಿದ್ದ ಕೆಲವರ ಅಭಿಪ್ರಾಯ.
Published On - 7:36 pm, Sat, 25 July 20