[lazy-load-videos-and-sticky-control id=”MwB8ttCyQP8″]
ಬೆಂಗಳೂರು: ಡ್ರಗ್ಸ್ ದಂಧೆ ಕೇಸ್ ತನಿಖೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇದರಿಂದ, ನಶೆರಾಣಿಯರು ಫುಲ್ ಶೇಕ್ ಆಗಿಬಿಟ್ಟಿದ್ದಾರಂತೆ. ಹೌದು, ಇದೀಗ ಮಾದಕ ನಟಿಯರು ಮಾಡಿರುವ ಬೇನಾಮಿ ಆಸ್ತಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಬೇರೆಲ್ಲೂ ಇಲ್ಲದ ರೋಚಕ ಸಂಗತಿಯ ಕಂಪ್ಲೀಟ್ ಡಿಟೇಲ್ಸ್ ನಿಮ್ಮ ಟಿವಿ 9ಗೆ ಲಭ್ಯವಾಗಿದೆ.
ಯಾಕಂದ್ರೆ, ಆರೋಪಿಗಳ ಆದಾಯದ ಮೇಲೆ ಹದ್ದಿನ ಕಣ್ಣಿಟ್ಟಿರೋ ಇಲಾಖೆಗೆ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರೋದು ಕಂಡುಬಂದಿದೆ. ಹೀಗಾಗಿ, ಬಂಧಿತ ಆರೋಪಿಗಳ ಆದಾಯದ ಬಗ್ಗೆ IT ಟೀಂ ಪರಿಶೀಲನೆ ಸಹ ನಡೆಸಿದೆ.
ನಟನೆ ಮಾಡಿದ ಸಿನಿಮಾಗಳು ಚೂರೂಪಾರು.. ಆದ್ರೂ ಸಂಜನಾ ಕಾರೋಬಾರು ಬಲು ಜೋರು!
ಬೆಂಗಳೂರಿನಲ್ಲಿ 2 ಐಷಾರಾಮಿ ಪ್ಲ್ಯಾಟ್ ಹೊಂದಿದ್ದಾರೆ ಗಂಡ ಹೆಂಡತಿ ಬೆಡಗಿ ಸಂಜನಾ ಗಲ್ರಾನಿ. ಇದಲ್ಲದೆ, ಸಂಜನಾ ಹೆಸರಿನಲ್ಲಿ ಯಲಹಂಕದಲ್ಲಿ ಹಾಗೂ ಹೈದರಾಬಾದ್ನಲ್ಲಿ ತಲಾ ಒಂದು ನಿವೇಶನ ಸಹ ಇದೆ ಎಂಬ ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲ, ಚೆನ್ನೈನಲ್ಲೂ ಒಂದು ಫ್ಲ್ಯಾಟ್ ಸಹ ಹೊಂದಿದ್ದಾರೆ.
ಜಾಹೀರಾತು ಮತ್ತು ಇವೆಂಟ್ ಕಂಪನಿಗಳಲ್ಲಿ ಬಂಡವಾಳ ಹೂಡಿರೋ ಸಂಜನಾ ಮತ್ತೆ ಕೆಲವು ಕಂಪನಿಗಳಲ್ಲಿ ಬಂಡವಾಳ ಹೂಡದೇ ಇದ್ರೂ ಪಾಲುದಾರಿಕೆ ಹೊಂದಿದ್ದಾರೆ. ಜೊತೆಗೆ, ನಟಿಯ ವಿರುದ್ಧ 7 ರಿಂದ 8 ಬೇನಾಮಿ ಆಸ್ತಿ ಹೊಂದಿರೋ ಆರೋಪ ಸಹ ಇದೆ.
Published On - 12:11 pm, Tue, 15 September 20