ರಾಗಿಣಿಗೆ ಸಿನಿಮಾ ಬೇಡಿಕೆ ಕಡಿಮೆಯಾಗಿತ್ತು, BJP ಸೇರಲು ಏನ್ ಪ್ಲಾನ್​ ಮಾಡಿದ್ರು ಗೊತ್ತಾ?

ರಾಗಿಣಿಗೆ ಸಿನಿಮಾ ಬೇಡಿಕೆ ಕಡಿಮೆಯಾಗಿತ್ತು, BJP ಸೇರಲು ಏನ್ ಪ್ಲಾನ್​ ಮಾಡಿದ್ರು ಗೊತ್ತಾ?

ಬೆಂಗಳೂರು: ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ರಾಜಕಾರಣಕ್ಕೆ ಬರಲು ಒಲವು ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ. ಸಿನಿಮಾ ನಟನೆಯ ಮೂಲಕ ಜನರ ಮನಗೆದ್ದಿದ್ದ ರಾಗಿಣಿಗೆ ಇತ್ತೀಚೆಗೆ ಸಿನಿಮಾಗಳಲ್ಲಿ ಆಫರ್​ಗಳು ಸಿಗೋದು ಕಡಿಮೆಯಾಗಿತ್ತು. ಹೀಗಾಗಿ, ನಟಿ ರಾಜಕೀಯಕ್ಕೆ ಬರಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಎಂದು ಹೇಳಲಾಗಿದೆ. ಇದಕ್ಕಾಗಿ NGO ಒಂದರ ಮೂಲಕ ರಾಗಿಣಿ ಸಮಾಜಸೇವೆಗೆ ಸಹ ಇಳಿದಿದ್ದರು. ತೆಲುಗಿನ ನಟಿ ವಿಜಯಶಾಂತಿ ಮಾದರಿಯಲ್ಲಿ ತನ್ನ ಹೀರೋಯಿನ್ ಓರಿಯೆಂಟೆಡ್ ಚಿತ್ರಗಳ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ರಾಗಿಣಿ ಇದನ್ನೆ […]

KUSHAL V

| Edited By: sadhu srinath

Sep 15, 2020 | 11:12 AM

ಬೆಂಗಳೂರು: ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ರಾಜಕಾರಣಕ್ಕೆ ಬರಲು ಒಲವು ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ.

ಸಿನಿಮಾ ನಟನೆಯ ಮೂಲಕ ಜನರ ಮನಗೆದ್ದಿದ್ದ ರಾಗಿಣಿಗೆ ಇತ್ತೀಚೆಗೆ ಸಿನಿಮಾಗಳಲ್ಲಿ ಆಫರ್​ಗಳು ಸಿಗೋದು ಕಡಿಮೆಯಾಗಿತ್ತು. ಹೀಗಾಗಿ, ನಟಿ ರಾಜಕೀಯಕ್ಕೆ ಬರಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಎಂದು ಹೇಳಲಾಗಿದೆ. ಇದಕ್ಕಾಗಿ NGO ಒಂದರ ಮೂಲಕ ರಾಗಿಣಿ ಸಮಾಜಸೇವೆಗೆ ಸಹ ಇಳಿದಿದ್ದರು.

ತೆಲುಗಿನ ನಟಿ ವಿಜಯಶಾಂತಿ ಮಾದರಿಯಲ್ಲಿ ತನ್ನ ಹೀರೋಯಿನ್ ಓರಿಯೆಂಟೆಡ್ ಚಿತ್ರಗಳ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ರಾಗಿಣಿ ಇದನ್ನೆ ಬಂಡವಾಳವಾಗಿ ಇಟ್ಟುಕೊಂಡು ರಾಜಕೀಯವಾಗಿ ಬೆಳೆಯಲು ಚಿಂತಿಸಿದ್ದರಂತೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕಿ ಆಗಿ ಹಾಗೂ ಯೋಗಾ ದಿನಾಚರಣೆ, ವಾಕಥಾನ್‌ನಂಥ ಕಾರ್ಯಕ್ರಮದಲ್ಲಿ ಭಾಗಿಯುವ ಮೂಲಕ ತನ್ನ ರಾಜಕೀಯ ವೃತ್ತಿಗೆ ನಾಂದಿ ಹಾಡಲು ಪ್ರಯತ್ನಿಸಿದ್ದರು. ಆದ್ದರಿಂದ ರಾಗಿಣಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

ಇದಲ್ಲದೆ, ಈ ಹಿಂದೆ ಪ್ರಕರಣದ A1 ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಪ್ಪಿ ಜೊತೆ ನಟಿ ಸಿನಿಮಾ ಮತ್ತು ರಿಯಲ್ ಎಸ್ಟೇಟ್​ನಲ್ಲಿ ಸಹ ತೊಡಗಿದ್ದರು. ಆದರೆ, ಶಿವಪ್ರಕಾಶ್ ಅಲಿಯಾಸ್ ಚಪ್ಪಿ ಸಿನಿಮಾ ಮತ್ತು ರಿಯಲ್ ಎಸ್ಟೇಟ್​ನಲ್ಲಿ ಬಂಡವಾಳ ಹಾಕಿ ಲಾಸ್ ಮಾಡಿಕೊಂಡನೋ ಆತನನ್ನು ರಾಗಿಣಿ ಬಿಟ್ಟಿದ್ರು. ಬಳಿಕ ರವಿಶಂಕರ್ ಕುಟುಂಬಕ್ಕೆ ರಾಜಕೀಯ ನಂಟಿರುವ ಹಿನ್ನೆಲೆಯಲ್ಲಿ ಆತನ ಮೂಲಕ ರಾಜಕೀಯ ಎಂಟ್ರಿಗೆ ಸಾಕಷ್ಟು ಯತ್ನ ಸಹ ನಡೆಸಿದ್ದರು, ಆಂಧ್ರದಲ್ಲಿ ಬಿಜೆಪಿ ನಾಯಕ ಮುರಳೀಧರ್ ರಾವ್​ನ ಭೇಟಿಯಾಗಿ ಬಿಜೆಪಿ ಸೇರುವ ವಿಚಾರವಾಗಿ ಚರ್ಚಿಸಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಮುರಳೀಧರ್ ರಾವ್​ R.ಅಶೋಕ್​ನ ಭೇಟಿಯಾಗುವಂತೆ ರಾಗಿಣಿಗೆ ಸೂಚಿಸಿದ್ದರಂತೆ.

ಆದ್ರೆ, ಆರ್.ಅಶೋಕ್ ಆಕೆಯ ಬಿಜೆಪಿ ಸೇರ್ಪಡೆಗೆ ಒಪ್ಪಿಕೊಳ್ಳದ ಕಾರಣ ಶಾಸಕ ಅರವಿಂದ ಲಿಂಬಾವಳಿ ಮೂಲಕ ಬಿಜೆಪಿ ಸೇರಲು ಯತ್ನಿಸಿದ್ದರು ಎಂದು ಹೇಳಲಾಗಿದೆ. ಅದು ಫಲಿಸದಿದ್ದಾಗ ಕೊನೆಯದಾಗಿ ಅಶ್ವತ್ಥ್ ನಾರಾಯಣ್​ ಮೂಲಕ ಪಕ್ಷ ಸೇರಲು ಯತ್ನ ನಡೆಸಿದ್ದರು. DCM ಅಶ್ವತ್ಥ್ ನಾರಾಯಣ ಜತೆ ಸಭೆ ನಿಗದಿಯಾಗಿತ್ತು. ಆದರೆ, ಸಭೆಯಲ್ಲಿ DCM ಬದಲಾಗಿ ಮಾಜಿ MLC ಅಶ್ವತ್ಥ್ ನಾರಾಯಣ ಇರುವರು ಎಂದು ತಿಳಿದು ರಾಗಿಣಿ ದ್ವಿವೇದಿ ಸಭೆ ಕ್ಯಾನ್ಸಲ್ ಮಾಡಿದ್ದರು. ಹಾಗಾಗಿ, ಬಿಜೆಪಿ ಸೇರುವ ನಟಿಯ ಎಲ್ಲಾ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು. ಆದರೆ ಈಗ, ರಾಗಿಣಿಯ ರಾಜಕೀಯ ಭವಿಷ್ಯ ಬೆಳಕು ಕಾಣುವ ಮುನ್ನವೆ ಜೈಲುಪಾಲಾಗಿದ್ದಾಳೆ.

ಇದನ್ನೂ ಓದಿ .. ಪತಿಯಿಂದ ನೊಂದ ಮಹಿಳೆಗೆ ನೆರವಾದ ‘ತುಪ್ಪದ ಬೆಡಗಿ’ ರಾಗಿಣಿ 

Follow us on

Related Stories

Most Read Stories

Click on your DTH Provider to Add TV9 Kannada