Drug ಕೇಸ್​ ಆಗಿರೋದ್ರಿಂದ ಸಹ ಕೈದಿಗಳಿಂದ ಗಲಾಟೆ ಸಾಧ್ಯತೆ, ಬಿಗಿ ಭದ್ರತೆ

Drug ಕೇಸ್​ ಆಗಿರೋದ್ರಿಂದ ಸಹ ಕೈದಿಗಳಿಂದ ಗಲಾಟೆ ಸಾಧ್ಯತೆ, ಬಿಗಿ ಭದ್ರತೆ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ನಟಿ ರಾಗಿಣಿ ಆ್ಯಂಡ್ ಟೀಂ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಆದರೆ, ನಟಿ ಸಂಜನಾ ಗಲ್ರಾನಿನ ಸಿಸಿಬಿ ವಶಕ್ಕೆ ಕೇಳಿರುವ ಹಿನ್ನೆಲೆಯಲ್ಲಿ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಆದೇಶ ಕಾಯ್ದಿರಿಸಿದ್ದಾರೆ.

ನ್ಯಾಯಾಂಗ ಬಂಧನಕ್ಕೆ ಒಳಗಾದ ರಾಗಿಣಿ ಆ್ಯಂಡ್ ಟೀಂ ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ಇರಲಿದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ವಿಚಾರಣಧೀನ ಖೈದಿ ನಂಬರ್ ನೀಡಲಾಗುತ್ತದೆ. ಜೊತೆಗೆ, ಎಲ್ಲಾ ಆರೋಪಿಗಳು ಸಾಮಾನ್ಯ ಖೈದಿಗಳಂತೆ ಜೈಲಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮಹಿಳಾ ಬ್ಯಾರಕ್​ನಲ್ಲಿ ರಾಗಿಣಿ ತಂಗಲಿದ್ದು ಇನ್ನುಳಿದ ಪುರುಷ ಆರೋಪಿಗಳನ್ನು ಪುರಷರ ಬ್ಯಾರಕ್​ನಲ್ಲಿ ಇರಿಸಲಾಗುವುದು. ಸದ್ಯ ಕೊವಿಡ್ ಇರೋದ್ರಿಂದ ಪ್ರತ್ಯೇಕವಾಗಿರುವ ಕೊಠಡಿ ನೀಡುವ ಸಾಧ್ಯತೆಯಿದೆ. ಪ್ರತ್ಯೇಕವಾಗಿರುವ ಕೊಠಡಿ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ಸೌಲಭ್ಯಗಳು ಸಹ ಖೈದಿಗಳಿಗೆ ಇದ್ದಂತೆ ಇರಲಿದೆ. ಜೈಲಿನ ಅಧಿಕಾರಿಗಳು ಊಟ, ತಿಂಡಿ ಹಾಗೂ ಎಲ್ಲಾ ವ್ಯವಸ್ಥೆ ಸಹ ಬೇರೆ ಖೈದಿಗಳಂತೆ ನೀಡಲಿದ್ದಾರೆ.
ಪ್ರತ್ಯೇಕವಾಗಿ ಕೊಠಡಿಯಲ್ಲಿ ಇರೋದ್ರಿಂದ ಆ ಕೊಠಡಿಗೆ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಸಹ ಮಾಡಲಾಗತ್ತೆ. ನಟಿ ರಾಗಿಣಿ ಡಗ್ಸ್ ಕೇಸ್​ನಲ್ಲಿ ಭಾಗಿ ಆಗಿರೋದ್ರಿಂದ ಸಹ ಖೈದಿಗಳಿಂದ ಹಲ್ಲೆ ಮತ್ತು ಗಲಾಟೆ ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗುವುದು.

ಒಂದು ವೇಳೆ ರಾಗಿಣಿಯ ಕುಟುಂಬಸ್ಥರು ಆಕೆಯನ್ನ ನೋಡೋದಕ್ಕೆ ಬಂದರೆ ನೋ ಎಂಟ್ರಿ. ಯಾಕಂದ್ರೆ, ಕೊವಿಡ್ ಇರೋದ್ರಿಂದ ಯಾರಿಗೂ ಯಾವುದೇ ಕಾರಣಕ್ಕು ಒಳ ಪ್ರವೇಶ ಇರೋದಿಲ್ಲ. ಆರೋಪಿಗಳ ವಕೀಲರಿಗೂ ಕೂಡ ನೋ ಎಂಟ್ರಿ. ಹಾಗಾಗಿ, ನ್ಯಾಯಾಂಗ ಬಂಧನದ ಅವಧಿ ಮುಗಿಯುವವರೆಗೂ ನಟಿ ತನ್ನ ಕುಟುಂಬದವರನ್ನು ಮೀಸ್ ಮಾಡಿಕೊಳ್ಳಲಿದ್ದಾರೆ.

Click on your DTH Provider to Add TV9 Kannada