ಅಶೋಕಾ ಹೋಟೆಲ್ ರೂಂ ಬಾಡಿಗೆ ಕಟ್ಟಿದ್ದು ಯಾರು ಹೇಳಿ? -ಸಂಬರಗಿಗೆ K ಮಂಜು ಸವಾಲ್​

ಅಶೋಕಾ ಹೋಟೆಲ್ ರೂಂ ಬಾಡಿಗೆ ಕಟ್ಟಿದ್ದು ಯಾರು ಹೇಳಿ? -ಸಂಬರಗಿಗೆ K ಮಂಜು ಸವಾಲ್​

ಬೆಂಗಳೂರು: ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಡ್ರಗ್​ ಪೆಡ್ಲರ್​ ರಾಹುಲ್​ ಜೊತೆ ನಿರ್ಮಾಪಕ K ಮಂಜು ಇರುವ ಫೋಟೋಗಳನ್ನು ಬಿಡುಗಡೆ ಮಾಡಿರುವ ಬೆನ್ನಲ್ಲೇ ಸದರಿ ನಿರ್ಮಾಪಕ, ಪ್ರಶಾಂತ್ ಸಂಬರಗಿಗೆ ನೇರವಾಗಿ ಸವಾಲ್ ಹಾಕಿದ್ದಾರೆ.

ಪ್ರಶಾಂತ್ ಸಂಬರಗಿಯ ಬಳಿ ತುಂಬಾ ಫೋಟೋಗಳಿವೆ. ಇಂದ್ರಜಿತ್ ಮತ್ತು ಸಂಬರಗಿ ನಮ್ಮ ಜತೆ ಪಾರ್ಟಿ ಮಾಡಿದ್ದಾರೆ. ಆ ಫೋಟೋಗಳನ್ನು ಸಹ ಅವರು ಬಿಡುಗಡೆ ಮಾಡಲಿ ಎಂದು ನಿರ್ಮಾಪಕ ಕೆ. ಮಂಜು ಪ್ರತಿಕ್ರಿಯಿಸಿದ್ದರೆ.. ಸಂಬರಗಿ ಕನ್ನಡ ಚಿತ್ರರಂಗಕ್ಕೆ ನಟನೆ ಮಾಡಲು ಬಂದವರೋ..? ಸಂಬರಗಿ ನಿರ್ಮಾಪಕರೂ ಅಲ್ಲ, ವಿತರಕರೂ ಅಲ್ಲ ಎಂದು ಸಹ ಹೇಳಿದ್ದಾರೆ.

ಪ್ರಶಾಂತ್ ಸಂಬರಗಿ ಚಿತ್ರನಟಿ ಒಬ್ಬರ ಜತೆ ಓಡಾಡುತ್ತಿದ್ದರು. ಅವರಿಗೆ ಜೀವನ ಕೊಡಬೇಕು ಎಂದು ಸಹ ಹೇಳುತ್ತಿದ್ದರು. ಸಂಬರಗಿ ಸಮಾಜ ಕ್ಲೀನ್ ಮಾಡಬೇಕೆಂದು ಹೇಳ್ತಿದ್ದಾರೆ. ಅವರು ಇಷ್ಟು ದಿನಗಳ ಕಾಲ ಏಕೆ ಸುಮ್ಮನೆ ಇದ್ದರು? ಅವರು ಇಷ್ಟು ದಿನ ಏನು ಹೋರಾಟ ಮಾಡಿದ್ದಾರೆ? ಅಂತಾ ಪ್ರಶಾಂತ್ ಸಂಬರಗಿಗೆ ನಿರ್ಮಾಪಕ ಕೆ.ಮಂಜು ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಈ ದಂಧೆಯಲ್ಲಿ ಪ್ರಶಾಂತ್ ಸಂಬರಗಿಯ ಪಾತ್ರವೂ ಇದೆ. ಇಲ್ಲದಿದ್ರೆ ಅವರು ಇಷ್ಟುದಿನ ಈ ವಿಷಯ ಏಕೆ ಬಚ್ಚಿಟ್ಟಿದ್ದರು? ಎಂದು ನಿರ್ಮಾಪಕ ಕೆ.ಮಂಜು ಹೇಳಿಕೆ ನೀಡಿದ್ದಾರೆ. ಅವರು ಯಾರ ಜತೆ ಪಬ್‌ಗೆ ಹೋಗ್ತಾರೆಂದು ನನಗೆ ಗೊತ್ತಿಲ್ವಾ? ಯಾಱರ ಜತೆ ಹೋಗುತ್ತಾರೆಂದು ಹೇಳಿಕೊಳ್ಳಲಿ. ಸಂಬರಗಿ ಸಾಕ್ಷ್ಯಗಳನ್ನ ಕೊಡುತ್ತೇನೆಂದು ಹೇಳುತ್ತಿದ್ದಾರೆ. ಎಲ್ಲವೂ ಗೊತ್ತಿದ್ದು ಏಕೆ ಸುಮ್ಮನಿದ್ದಾರೆಂದು ಮಂಜು ಪ್ರಶ್ನಿಸಿದ್ದಾರೆ. ಸಂಬರಗಿ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೀತಿದ್ದಾರೆ ಎಂದು ಸಹ ಹೇಳಿದರು.

ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಮಾಡಿಸಲು ಅವಕಾಶ ಕೊಡಿಸಿದ್ರಿ. ಆಮೇಲೆ ಅಲ್ಲಿಂದ ನೀವು ದುಡ್ಡು ತೆಗೆದುಕೊಂಡಿದ್ದು ಕೇಳಿದ್ದೇನೆ. ವೈಟ್ ಬಟ್ಟೆ ಹಾಕಿಕೊಂಡಿದ್ದೇನೆ ಅಂತೀರಾ. ಅದನ್ನು ಬಿಟ್ಟು ನೋಡಿ, ತೂತು ಎಷ್ಟಿದೆ ಗೊತ್ತಾಗುತ್ತೆ ಅಂತಾ ಖಾರವಾಗಿ ಹೇಳಿದ್ದಾರೆ.

ಪಾಪದ ಹಣದಿಂದ ಸ್ಯಾಂಡಲ್​ವುಡ್ ನಡೀತಿದೆ ಅಂದ್ರು ಸಂಬರಗಿ. ಯಾವುದು ಪಾಪದ ಹಣ? ಅವನಷ್ಟು ಅವಿವೇಕಿ ಯಾರೂ ಇಲ್ಲ ಅಂತಾ K ಮಂಜು ಸಂಬರಗಿಗೆ ಟಾಂಗ್​ ಕೊಟ್ಟಿದ್ದಾರೆ. ನಾವು ಮನೆ ಮಠ ಮಾರಿ ಸಿನಿಮಾ ಮಾಡ್ತೀವಿ.

ಎಷ್ಟು ಜನ ಇವತ್ತು ರೋಡಲ್ಲಿ ಇದ್ದಾರೆ. ಅವನೇ ಪಾಪದ ಹಣ ಮಾಡಿರಬೇಕು. ನಾನು ಸ್ವಂತ ದುಡ್ಡಿಂದ ಸಿನಿಮಾ ಮಾಡ್ತಿದ್ದೀನಿ. ನಮ್ಮ ಕಲಾವಿದರು ನಿರ್ಮಾಪಕರಿಗೆ ಸಾಥ್ ನೀಡುತ್ತಾರೆ. ಆದರೆ, ಪ್ರಶಾಂತ್​ಗೆ ಬೇರೆ ಬೇರೆ ವ್ಯಾಪಾರ ಗೊತ್ತಿದೆ. ನಾವು ಕ್ಲೀನ್ ಅಂತ ಧೈರ್ಯವಾಗಿ ಹೇಳ್ತಿನಿ. ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ.

‘ಆ ಫೋಟೋ ಈಗ ಹೊರಬರಲು ಕಾರಣ ಏನಂದ್ರೆ..’
ಆ ಫೋಟೋ ಈಗ ಹೊರಬರಲು ಕಾರಣ ಏನಂದ್ರೆ ನಮ್ಮಲ್ಲಿ ಒಂದು ಒಡಂಬಡಿಕೆ ಇತ್ತು. ಬೇರೆ ಚಿತ್ರರಂಗದ ಜೊತೆ ಒಳ್ಳೆ ಸಂಬಂಧ ಇತ್ತು. ಆದ್ರೆ, ಅದನ್ನೆಲ್ಲ ಹಾಳು ಮಾಡಿದ್ದು ಪ್ರಶಾಂತ್ ಸಂಬರಗಿಯಂತವರು. ಮಲ್ಟಿ ನ್ಯಾಷನಲ್​ ಕಂಪನಿಗಳು ಚೆನ್ನಾಗಿವೆ. ಆದ್ರೆ ಇಂಥವರಿಂದ ಎಲ್ಲವೂ ಹಾಳಾಗ್ತಿದೆ. ನಾನು ಆ ಬಗ್ಗೆ ಮಾತಾಡಿದ್ದಕ್ಕೆ ಈ ಫೊಟೋ ಬಂದಿದೆ ಎಂದು ಮಂಜು ಸ್ಪಷ್ಟನೆ ನೀಡಿದ್ದಾರೆ. ನಾವೆಲ್ಲಾ ಅಮಾಯಕರು. ಕಿತ್ತೂರು ರಾಣಿ ಚೆನ್ನಮ್ಮ ಇದ್ದ ನಾಡಿದು. ಆದರೆ, ಮಲ್ಲಣ್ಣನಂಥ ಕಿರಾತಕರು ಬಂದು ಹಾಳು ಮಾಡ್ತಿದ್ದಾರೆ ಎಂದು ಸಂಬರಗಿಗೆ ಪರೋಕ್ಷವಾಗಿ ಕುಟುಕಿದ್ದಾರೆ.

ಪ್ರಶಾಂತ್ ಸಂಬರಗಿ ಬುಡುಬುಡಿಕೆ ನಾಟಕವಾಡಲು ಬಂದಿದ್ದಾರೆ. ಶತಮಾನಗಳಿಂದ ಬೆಂಗಳೂರಿನಲ್ಲಿದ್ರೂ ಜೀವನ ಕಷ್ಟವಾಗಿದೆ. ಆದ್ರೆ ಪ್ರಶಾಂತ್ ಸಂಬರಗಿಗೆ ಅಷ್ಟೊಂದು ಆಸ್ತಿ ಎಲ್ಲಿಂದ ಬಂತು? ಎಂದು ನಿರ್ಮಾಪಕ ಕೆ.ಮಂಜು ಪ್ರಶ್ನಿಸಿದ್ದಾರೆ.

ಸಂಬರಗಿ ನಿಮ್ಮ ಬೇರೆ ಬೇರೆ ವ್ಯವಹಾರಗಳ ಬಗ್ಗೆ ಹೇಳಿ ಎಂದ ಮಂಜು ಪ್ರಶಾಂತ್ ಸಂಬರಗಿ ಒಬ್ಬ ಬುದ್ಧಿವಂತ ಕ್ರಿಮಿನಲ್. ಪ್ರಶಾಂತ್ ಸಂಬರಗಿ ಅಮಾಯಕರನ್ನ ಬಲಿ ಕೊಡುತ್ತಿದ್ದಾನೆ. ಇಂಥವರನ್ನ ಚಿತ್ರರಂಗಕ್ಕೆ ಬಿಟ್ಟುಕೊಳ್ಳಬಾರದು ಅಂತಾ ಹೇಳಿದ್ದಾರೆ.

‘#MeToo ವಿಚಾರದಲ್ಲಿಯೂ ಈತ ಬಂದು ಅಬ್ಬರಿಸಿದ್ದ’
#MeToo ವಿಚಾರದಲ್ಲಿಯೂ ಈತ ಬಂದು ಅಬ್ಬರಿಸಿದ್ದ. ಆಮೇಲೆ ಏನಾಯ್ತು? ಬರೀ ಠುಸ್ಸ್​  ಪಟಾಕಿ ಆಯ್ತು. ಚತುರ್ವಿಧ ಬ್ರಹ್ಮ ಇವನು ಎಂದು ಮಂಜು ಸಂಬರಗಿಗೆ ಲೇವಡಿ ಮಾಡಿದ್ದಾರೆ. ಅವನಿಗೆ ಬುನಾದಿ ಬೇಕು. ಅದಕ್ಕೆ ಹೀಗೆ ಮಾಡುತ್ತಿದ್ದಾನೆ. ಅಂಬರೀಶ್ ಅಣ್ಣನ ಜೊತೆ ಎಷ್ಟೋ ಪಾರ್ಟಿ ಮಾಡಿದ್ದೀವಿ . ಹಾಗಂತ ಎಲ್ಲರೂ ಹಂಗೇನಾ? ಇವನೇನೋ ಚಿತ್ರರಂಗ ಕ್ಲೀನ್ ಮಾಡ್ತೀನಿ ಅಂತಾನೆ. ಈಗ ಬುಡುಬುಡುಕೆ ನಾಟಕ ಆಡೋಕೆ ಬಂದಿದ್ದೀಯಾ? ಅಂತಾ ಖಾರವಾಗಿ ಟೀಕಿಸಿದ್ದಾರೆ.

‘ಅಶೋಕಾ ಹೋಟೆಲ್ ರೂಮ್​ಗೆ ಬಾಡಿಗೆ ಕೊಟ್ಟೋರು ಯಾರು?’
ಒಂದೂವರೆ ವರ್ಷಗಳ ಕಾಲ ಅಶೋಕಾ ಹೋಟೆಲ್​ನಲ್ಲಿ ನೀವು ರೂಮ್​ ಬುಕ್​ ಮಾಡಿಕೊಂಡಿದ್ರೀ. ರೂಮ್​ಗೆ ಬಾಡಿಗೆಯ ದುಡ್ಡನ್ನು ಯಾರು ಕೊಟ್ಟರು? ಅಂತಾ ಸಂಬರಗಿಗೆ ಮಂಜು ಪ್ರಶ್ನಸಿದ್ದಾರೆ. ಜೊತೆಗೆ, ನೀವು ರಿಲಯನ್ಸ್​ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಕನ್ನಡ ಪರ ಸಂಸ್ಥೆಗಳನ್ನು ಮಟ್ಟಹಾಕುವೆ ಎಂದು ಆ ಸಂಸ್ಥೆಗೆ ಆಶ್ವಾಸನೆ ಕೊಟ್ಟಿದ್ರೀ. ಆ ಕೆಲಸಕ್ಕೆ ಎಷ್ಟು ಹಣ ಪಡೆದಿದ್ರೀ? ಅಂತಾ ಸಹ ಪ್ರಶಾಂತ್​ ಸಂಬರಗಿಗೆ ಪ್ರಶ್ನಿಸಿದ್ದಾರೆ.

Click on your DTH Provider to Add TV9 Kannada