ಗಂಡ-ಹೆಂಡ್ತಿ ಬೆಡಗಿ ಸಂಜನಾಳ ಸೀಕ್ರೆಟ್ ಸಂಪತ್ತಿನ ರಹಸ್ಯ ಇಲ್ಲಿದೆ ನೋಡಿ!

ಗಂಡ-ಹೆಂಡ್ತಿ ಬೆಡಗಿ ಸಂಜನಾಳ ಸೀಕ್ರೆಟ್ ಸಂಪತ್ತಿನ ರಹಸ್ಯ ಇಲ್ಲಿದೆ ನೋಡಿ!

[lazy-load-videos-and-sticky-control id=”MwB8ttCyQP8″] ಬೆಂಗಳೂರು: ಡ್ರಗ್ಸ್​ ದಂಧೆ ಕೇಸ್​ ತನಿಖೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ​. ಇದರಿಂದ, ನಶೆರಾಣಿಯರು ಫುಲ್​ ಶೇಕ್ ಆಗಿಬಿಟ್ಟಿದ್ದಾರಂತೆ. ಹೌದು, ಇದೀಗ ಮಾದಕ ನಟಿಯರು ಮಾಡಿರುವ ಬೇನಾಮಿ ಆಸ್ತಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಬೇರೆಲ್ಲೂ ಇಲ್ಲದ ರೋಚಕ ಸಂಗತಿಯ ಕಂಪ್ಲೀಟ್ ಡಿಟೇಲ್ಸ್ ನಿಮ್ಮ ಟಿವಿ 9ಗೆ ಲಭ್ಯವಾಗಿದೆ. ಹೌದು, CCB ಆಯ್ತು, ED ಬಂದು ಹೋಯ್ತು ಇದೀಗ ಮತ್ತೊಂದು ಕೇಂದ್ರ ಸಂಸ್ಥೆ ತನಿಖೆಗೆ ಸಿದ್ಧತೆ ನಡೆಸಿದೆ. ಯಸ್​, CCB, […]

KUSHAL V

| Edited By: sadhu srinath

Sep 15, 2020 | 1:02 PM

[lazy-load-videos-and-sticky-control id=”MwB8ttCyQP8″]

ಬೆಂಗಳೂರು: ಡ್ರಗ್ಸ್​ ದಂಧೆ ಕೇಸ್​ ತನಿಖೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ​. ಇದರಿಂದ, ನಶೆರಾಣಿಯರು ಫುಲ್​ ಶೇಕ್ ಆಗಿಬಿಟ್ಟಿದ್ದಾರಂತೆ. ಹೌದು, ಇದೀಗ ಮಾದಕ ನಟಿಯರು ಮಾಡಿರುವ ಬೇನಾಮಿ ಆಸ್ತಿಗೆ ಗುನ್ನಾ ಬೀಳುವ ಸಾಧ್ಯತೆಯಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಬೇರೆಲ್ಲೂ ಇಲ್ಲದ ರೋಚಕ ಸಂಗತಿಯ ಕಂಪ್ಲೀಟ್ ಡಿಟೇಲ್ಸ್ ನಿಮ್ಮ ಟಿವಿ 9ಗೆ ಲಭ್ಯವಾಗಿದೆ.

ಹೌದು, CCB ಆಯ್ತು, ED ಬಂದು ಹೋಯ್ತು ಇದೀಗ ಮತ್ತೊಂದು ಕೇಂದ್ರ ಸಂಸ್ಥೆ ತನಿಖೆಗೆ ಸಿದ್ಧತೆ ನಡೆಸಿದೆ. ಯಸ್​, CCB, Edಬಳಿಕ ಇದೀಗ ಕೇಸ್​ನ ತನಿಖೆಗೆ ಆದಾಯ ತೆರಿಗೆ ಅಥವಾ IT ಇಲಾಖೆಯು ಸಹ ಎಂಟ್ರಿ ಕೊಟ್ಟಿದೆ. ಸ್ಯಾಂಡಲ್​ವುಡ್​​ ಡ್ರಗ್ಸ್​ ದಂಧೆ ಕೇಸ್​ನ ತನಿಖೆಗೆ ಎಂಟ್ರಿ ಹೊಡೆದ IT ಇಲಾಖೆಯಿಂದ ಇದೀಗ ಸಂಜನಾ ಹಾಗೂ ರಾಗಿಣಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ.

ಯಾಕಂದ್ರೆ, ಆರೋಪಿಗಳ ಆದಾಯದ ಮೇಲೆ ಹದ್ದಿನ ಕಣ್ಣಿಟ್ಟಿರೋ ಇಲಾಖೆಗೆ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರೋದು ಕಂಡುಬಂದಿದೆ. ಹೀಗಾಗಿ, ಬಂಧಿತ ಆರೋಪಿಗಳ ಆದಾಯದ ಬಗ್ಗೆ IT ಟೀಂ ಪರಿಶೀಲನೆ ಸಹ ನಡೆಸಿದೆ.

ನಟನೆ ಮಾಡಿದ ಸಿನಿಮಾಗಳು ಚೂರೂಪಾರು.. ಆದ್ರೂ ಸಂಜನಾ ಕಾರೋಬಾರು ಬಲು ಜೋರು! ಬೆರಳಣಿಕೆ ಚಿತ್ರಗಳಲ್ಲಿ ನಟಿಸಿರೋ ಸಂಜನಾ ಗಲ್ರಾನಿ ಆಸ್ತಿ ಕೇಳಿದ್ರೆ ಬೆಚ್ಚಿ ಬೀಳ್ತೀರ. ಡ್ರಗ್ಸ್​ ದಂಧೆ ಕೇಸ್​ನಲ್ಲಿ A14 ಆಗಿರೋ ಸಂಜನಾ ಗಲ್ರಾನಿ ಆಸ್ತಿ ವಿವರ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ 2 ಐಷಾರಾಮಿ ಪ್ಲ್ಯಾಟ್ ಹೊಂದಿದ್ದಾರೆ ಗಂಡ ಹೆಂಡತಿ ಬೆಡಗಿ ಸಂಜನಾ ಗಲ್ರಾನಿ. ಇದಲ್ಲದೆ, ಸಂಜನಾ ಹೆಸರಿನಲ್ಲಿ ಯಲಹಂಕದಲ್ಲಿ ಹಾಗೂ ಹೈದರಾಬಾದ್​ನಲ್ಲಿ ತಲಾ ಒಂದು ನಿವೇಶನ ಸಹ ಇದೆ ಎಂಬ ಮಾಹಿತಿ ಸಿಕ್ಕಿದೆ. ಅಷ್ಟೇ ಅಲ್ಲ, ಚೆನ್ನೈನಲ್ಲೂ ಒಂದು ಫ್ಲ್ಯಾಟ್ ಸಹ ಹೊಂದಿದ್ದಾರೆ.

ಜಾಹೀರಾತು ಮತ್ತು ಇವೆಂಟ್ ಕಂಪನಿಗಳಲ್ಲಿ ಬಂಡವಾಳ ಹೂಡಿರೋ ಸಂಜನಾ ಮತ್ತೆ ಕೆಲವು ಕಂಪನಿಗಳಲ್ಲಿ ಬಂಡವಾಳ ಹೂಡದೇ ಇದ್ರೂ ಪಾಲುದಾರಿಕೆ ಹೊಂದಿದ್ದಾರೆ. ಜೊತೆಗೆ, ನಟಿಯ ವಿರುದ್ಧ 7 ರಿಂದ 8 ಬೇನಾಮಿ ಆಸ್ತಿ ಹೊಂದಿರೋ ಆರೋಪ ಸಹ ಇದೆ.

Follow us on

Related Stories

Most Read Stories

Click on your DTH Provider to Add TV9 Kannada